ಡಿಮಾನ್ಸ್‌ ಪಿಜಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

KannadaprabhaNewsNetwork |  
Published : Jan 29, 2026, 02:15 AM IST
ಡಾ. ಪ್ರಜ್ಞಾ ಪಾಳೇಗಾರ್‌ | Kannada Prabha

ಸಾರಾಂಶ

ಕಳೆದ ವರ್ಷವೇ ಶಿವಮೊಗ್ಗದಲ್ಲಿ ಎಂಬಿಬಿಎಸ್‌ ಮುಗಿಸಿದ್ದ ಡಾ. ಪ್ರಜ್ಞಾ, ಜ. 3ರಂದು ಧಾರವಾಡದ ಡಿಮಾನ್ಸ್‌ಗೆ ಸ್ನಾತಕೋತ್ತರ ಪಿಜಿ ಕಲಿಯಲು ಬಂದಿದ್ದರು. ಏಕಾಏಕಿ ಡಾ. ಪ್ರಜ್ಞಾ, ತಾನಿರುವ ಹಾಸ್ಟೆಲ್‌ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಧಾರವಾಡ:

ಕೆಲವು ವರ್ಷಗಳಲ್ಲಿಯೇ ಈಕೆ ತನ್ನ ಬಳಿ ಬರುವ ಮಾನಸಿಕ ರೋಗಿಗಳಿಗೆ ಸಾಂತ್ವನ ಹೇಳುವುದು, ಆತ್ಮಹತ್ಯೆ ಮಾಡಿಕೊಳ್ಳದಂತೆ ಕೌನ್ಸೆಲಿಂಗ್ ಮಾಡುವ ಕಾರ್ಯ ಮಾಡುತ್ತಿದ್ದಳು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಮಾನಸಿಕ ರೋಗದ ಸ್ನಾತಕೋತ್ತರ ಪದವಿ ಮಾಡುತ್ತಿದ್ದಾಕೆಯೇ ಮಾನಸಿಕ ಸಮಸ್ಯೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುವಂತಾಗಿದೆ.

ಇಲ್ಲಿಯ ಡಿಮಾನ್ಸ್‌ನಲ್ಲಿ ಮಾನಸಿಕ ಆರೋಗ್ಯ ಮತ್ತು ನರ ರೋಗ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದ ಮೊದಲನೇ ವರ್ಷದ ವಿದ್ಯಾರ್ಥಿನಿ, ಶಿವಮೊಗ್ಗ ಮೂಲದ ಡಾ. ಪ್ರಜ್ಞಾ ಪಾಳೇಗಾರ್‌ ಆತ್ಮಹತ್ಯೆಗೆ ಶರಣಾದವರು. ಕಳೆದ ವರ್ಷವೇ ಶಿವಮೊಗ್ಗದಲ್ಲಿ ಎಂಬಿಬಿಎಸ್‌ ಮುಗಿಸಿದ್ದ ಡಾ. ಪ್ರಜ್ಞಾ, ಜ. 3ರಂದು ಧಾರವಾಡದ ಡಿಮಾನ್ಸ್‌ಗೆ ಸ್ನಾತಕೋತ್ತರ ಪಿಜಿ ಕಲಿಯಲು ಬಂದಿದ್ದರು. ಏಕಾಏಕಿ ಡಾ. ಪ್ರಜ್ಞಾ, ತಾನಿರುವ ಹಾಸ್ಟೆಲ್‌ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆರಂಭದಲ್ಲಿ ಖುಷಿ ಖುಷಿಯಿಂದಲೇ ಧಾರವಾಡದ ಡಿಮಾನ್ಸ್‌ಗೆ ಬಂದು ಚೆನ್ನಾಗಿಯೇ ಅಧ್ಯಯನ ಮಾಡಿದ್ದ ಡಾ. ಪ್ರಜ್ಞಾ ನಂತರದಲ್ಲಿ ಆಸಕ್ತಿ ಕಳೆದುಕೊಂಡಿದ್ದರು. ಇಲ್ಲಿರಲು ಬೇಸರ ಆಗುತ್ತಿದೆ ಎಂದು ಸ್ನೇಹಿತರೊಡಗೆ ಹಂಚಿಕೊಂಡಿದ್ದರು ಎಂಬ ಮಾಹಿತಿ ಇದೆ. ಮಂಗಳವಾರವಷ್ಟೇ ಅವರ ತಂದೆ-ತಾಯಿಯನ್ನು ಭೇಟಿಯಾಗಿದ್ದ ಡಾ. ಪ್ರಜ್ಞಾ ಅವರ ಆತ್ಮಹತ್ಯೆಯ ನಿರ್ಧಾರ ತನಿಖೆ ನಂತರವೇ ಬಯಲಾಗಬೇಕಿದೆ. ಸ್ಥಳಕ್ಕೆ ಉಪನಗರ ಠಾಣಾ ಪೊಲೀಸರು ಭೇಟಿ ನೀಡಿ, ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೈಲಲ್ಲೂ ದರ್ಶನ್‌ಗೆ ‘ಅಭಿಮಾನಿಗಳು’ ಕಾಟ!
ನಾಳೆ ಹಲವು ಸಾಧಕರಿಗೆ ಗಾಂಧಿ ಪುರಸ್ಕಾರ ಪ್ರದಾನ