ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಸರ್. ಎಂ. ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಸಮಿತಿ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗೆ ಮನವಿ ಪತ್ರ ರವಾನಿಸಿದರು.
ಪ್ರಸ್ತುತ 2024- 26ನೇ ಸಾಲಿನ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಶೋಷಿತ ಸಮುದಾಯಗಳನ್ನು ನಿರ್ಲಕ್ಷಿಸಿದೆ. ಶೋಷಿತರ ಅಭಿವೃದ್ಧಿಯೇ ಭಾರತದ ಅಭಿವೃದ್ಧಿ ಎಂಬುದನ್ನು ಅರಿಯದ ಪ್ರಧಾನಿ ನರೇಂದ್ರ ಮೋದಿ ದೇಶದ ಬಹುಜನರನ್ನು ನಯವಾಗಿ ವಂಚಿಸುವ ಹುನ್ನಾರ ಮಾಡಿದ್ದಾರೆ ಎಂದು ದೂರಿದರು.ಸಂವಿಧಾನದ ಅನುಚ್ಛೇಧ (38), (39)ಗಳನ್ನು ನಿರ್ಲಕ್ಷಿಸುವ ಮೂಲಕ ವಿದ್ಯೆ, ಅಧಿಕಾರ, ಸಂಪತ್ತು, ಭೂಮಿ, ಉದ್ಯೋಗ, ಕೈಗಾರಿಕೆಯನ್ನು ಸಮಾನವಾಗಿ ಹಂಚಿಕೆ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೇವಲ ಬಂಡವಾಳಶಾಹಿ ಜನರನ್ನು ಕೇಂದ್ರೀಕರಣಗೊಳಿಸುವ ಸಂವಿಧಾನ ವಿರೋಧಿಯಾದ ಬಜೆಟ್ ಮಂಡಿಸಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಸಂಚಾಲಕ ಕೆ.ಎಂ.ಅನಿಲ್ ಕುಮಾರ್, ಬಿ.ಆನಂದ್, ಈಚಕೆರೆ ನಾಗರಾಜ್, ವೈ.ಸುರೇಶ್ ಕುಮಾರ್ ಶೆಟ್ಟಹಳ್ಳಿ, ರಾಮಕೃಷ್ಣ, ಭಾಗ್ಯಮ್ಮ, ಗೀತಾ, ಸುಕನ್ಯ ಸಂಪಹಳ್ಳಿ, ಹರಿಕುಮಾರ್ ಹೊಳಲು, ಹೊನ್ನಯ್ಯ ಟಿ.ಮಲ್ಲೀಗೆರೆ, ಸಿದ್ದಯ್ಯ ವೆಂಕಟೇಶ್ ಕರಿಜೆರಹಳ್ಳಿ, ಮಹದೇವ ಕೊತ್ತತ್ತಿ, ಸುರೇಶ್ ಮರಳಗಾಲ, ಬಸವರಾಜ್ ಲಿಂಗಾಪುರ ಹಲವರು ಭಾಗವಹಿಸಿದ್ದರು.