ರೈತರಿಗೆ ನುಸಿ, ಎಲೆ ಸುರುಳಿ ರೋಗ ನಿಯಂತ್ರಣ ಪ್ರಾತ್ಯಕ್ಷಿಕೆ

KannadaprabhaNewsNetwork |  
Published : Aug 07, 2025, 12:46 AM IST
4ಕೆಆರ್ ಎಂಎನ್ 1.ಜೆಪಿಜಿರಾಮನಗರ ತಾಲೂಕಿನ ತಿಮ್ಮೇಗೌಡನದೊಡ್ಡಿಯಲ್ಲಿ ನುಸಿರೋಗ ಮತ್ತು ಎಲೆಸುರುಳಿ ರೋಗ ಹತೋಟಿಯ ಕುರಿತು ರೇಷ್ಮೆ ಇಲಾಖೆ ಅಧಿಕಾರಿಗಳು ರೈತರಲ್ಲಿ ಅರಿವು ಮೂಡಿಸಿದರು. | Kannada Prabha

ಸಾರಾಂಶ

ರಾಮನಗರ: ರೇಷ್ಮೆ ಕೃಷಿಗೆ ಮಾರಕವಾಗಿ ಪರಿಣಮಿಸಿರುವ ನುಸಿರೋಗ ಮತ್ತು ಎಲೆಸುರುಳಿ ರೋಗ ಹತೋಟಿಯ ಕುರಿತು ಪ್ರಾತ್ಯಕ್ಷಿಕೆ ಮೂಲಕ ರೇಷ್ಮೆ ಇಲಾಖೆ ಅಧಿಕಾರಿಗಳು ರೈತರ ಜಮೀನಿಗೆ ತೆರಳಿ ಅರಿವು ಮೂಡಿಸಿದರು

ರಾಮನಗರ: ರೇಷ್ಮೆ ಕೃಷಿಗೆ ಮಾರಕವಾಗಿ ಪರಿಣಮಿಸಿರುವ ನುಸಿರೋಗ ಮತ್ತು ಎಲೆಸುರುಳಿ ರೋಗ ಹತೋಟಿಯ ಕುರಿತು ಪ್ರಾತ್ಯಕ್ಷಿಕೆ ಮೂಲಕ ರೇಷ್ಮೆ ಇಲಾಖೆ ಅಧಿಕಾರಿಗಳು ರೈತರ ಜಮೀನಿಗೆ ತೆರಳಿ ಅರಿವು ಮೂಡಿಸಿದರು.

ರೇಷ್ಮೆ ಇಲಾಖೆ, ಲಕ್ಷ್ಮೀಪುರದ ತಾಂತ್ರಿಕ ಸೇವಾ ಕೇಂದ್ರದ ವತಿಯಿಂದ ತಿಮ್ಮೇಗೌಡನ ದೊಡ್ಡಿ ಗ್ರಾಮದ ರೈತರ ಜಮೀನಿನಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು.

ನುಸಿರೋಗ ಮತ್ತು ಎಲೆಸುರುಳಿ ರೋಗ ನಿಯಂತ್ರಣಕ್ಕೆ ವೆಟಬಲ್ ಸಲ್ಫರ್ 3 ಗ್ರಾಂ ಒಂದು ಲೀಟರ್‌ಗೆ, ಬೇವಿನ ಎಣ್ಣೆ ಒಂದು ಲೀಟರ್ ನೀರಿಗೆ 5 ಎಂಎಲ್, ನೀಮ್ ಪೌಂಡರ್ ಹಾಗೂ ಇಂಟರ್ಪಿಡ್ಡರ್ ಅದನ್ನು ಸಕಾಲದಲ್ಲಿ ಸೂಕ್ತ ಪ್ರಮಾಣದಲ್ಲಿ ಬಳಸಬೇಕು. ಇದರಿಂದ ರೋಗ ಹತೋಟಿಗೆ ಬಂದು ಉತ್ತಮ ಇಳವರಿ ದೊರೆಯಲಿದೆ ಎಂದು ರೈತರಲ್ಲಿ ಅಧಿಕಾರಿಗಳ ತಂಡ ಜಾಗೃತಿ ಮೂಡಿಸಿತು.

ಮಾರುಕಟ್ಟೆಯಲ್ಲಿ ದೊರೆಯುವ ಯಾವುದೋ ಒಂದು ಔಷಧಿಯಯನ್ನು ತಂದು ಬಳಸುವುದು ಅಪಾಯಕಾರಿ. ಇದರಿಂದ ರೈತರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಬೆಳೆಯ ಇಳುವರಿಯ ವ್ಯತ್ಯಯವಾಗಲಿದೆ. ಔಷಧಿ ಸಿಂಪರಣೆ ಕುರಿತು ಇಲಾಖೆ ಮಾರ್ಗಸೂಚಿಯನ್ನು ಪಾಲಿಸಬೇಕು. ಇದರಿಂದ ಮಾತ್ರ ಪರಿಣಾಮಕಾರಿಯಾಗಿ ನುಸಿರೋಗ ಮತ್ತು ಎಲೆಸುರಳಿ ರೋಗವನ್ನು ಹತೋಟಿಗೆ ಬರಬಹುದು ಎಂದು ಹೇಳಿದರು.

ಜೊತೆಗೆ ನರೇಗಾ ಮತ್ತು ಇಲಾಖೆ ವಿವಿಧ ಸೌಲಭ್ಯಗಳು, ಯೋಜನೆಗಳ ಕುರಿತು ರೈತರಿಗೆ ಮಾಹಿತಿ ನೀಡಿದರು. ಈ ವೇಳೆ ಕೃಷಿ ಇಲಾಖೆ ಉಪನಿರ್ದೇಶಕ ಚಂದ್ರಪ್ಪ, ಸಹಾಯ ನಿರ್ದೇಶಕ ಎಂ.ಪಿ.ಉಮೇಶ್, ವಿಜ್ಞಾನಿಗಳಾದ ಡಾ.ಮಧುಸೂದನ್, ಲಕ್ಷ್ಮೀಪುರ ತಾಂತ್ರಿಕ ಸೇವಾ ಕೇಂದ್ರದ ವಿಸ್ತರಣಾಧಿಕಾರಿ ಗೋಪಾಲ್ ಉಪಸ್ಥಿತರಿದ್ದರು.

4ಕೆಆರ್ ಎಂಎನ್ 1.ಜೆಪಿಜಿ

ರಾಮನಗರ ತಾಲೂಕಿನ ತಿಮ್ಮೇಗೌಡನದೊಡ್ಡಿಯಲ್ಲಿ ನುಸಿರೋಗ ಮತ್ತು ಎಲೆಸುರುಳಿ ರೋಗ ಹತೋಟಿಯ ಕುರಿತು ರೇಷ್ಮೆ ಇಲಾಖೆ ಅಧಿಕಾರಿಗಳು ರೈತರಲ್ಲಿ ಅರಿವು ಮೂಡಿಸಿದರು.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಕಳೇಬರ ಸಿಗದಿದ್ರೆ ಮುಸುಕುಧಾರಿ ಲೋಪವಲ್ಲ
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ