ಎಂಇಎಸ್‌ ನಾಡದ್ರೋಹಿಗಳನ್ನು ಗಡಿಪಾರು ಮಾಡಿ: ಪರ್ವತಗೌಡ್ರ

KannadaprabhaNewsNetwork |  
Published : Feb 27, 2025, 02:01 AM IST
ಪ್ರತಿಭಟನೆ ನಡೆಸಿದರು.  | Kannada Prabha

ಸಾರಾಂಶ

ನಮ್ಮ ರಾಜ್ಯದಲ್ಲಿ ಇದ್ದು ನಮ್ಮ ರಾಜ್ಯದ ಎಲ್ಲ ಸವಲತ್ತು ಪಡೆದಿರುವ ಎಂಇಎಸ್ ಪುಂಡರ ಮೇಲೆ ರಾಜ್ಯ ಸರ್ಕಾರ ನಿರ್ದಾಕ್ಷಿಣ್ಯ ಕಠಿಣ ಕಾನೂನು ಕ್ರಮ ಕೈಗೊಂಡು ಕೂಡಲೇ ಗಡಿಪಾರು ಮಾಡಬೇಕು

ಗದಗ: ಭಾಷೆ ವಿಷಯದಲ್ಲಿ ಪದೇ ಪದೇ ಗೊಂದಲ ಸೃಷ್ಟಿಸುತ್ತಿರುವ ನಾಡದ್ರೋಹಿ ಎಂಇಎಸ್ ಅವರನ್ನು ಕೂಡಲೇ ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಕರವೇ ಶಿವರಾಮೇಗೌಡ್ರ ಬಣದ ಅಧ್ಯಕ್ಷ ಮಂಜುನಾಥ ಪರ್ವತಗೌಡ್ರ ಆಗ್ರಹಿಸಿದರು.

ಗದಗ ನಗರದ ಹುಯಿಲಗೋಳ ನಾರಾಯಣರಾವ್ ವೃತ್ತದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.

ನಮ್ಮ ರಾಜ್ಯದಲ್ಲಿ ಇದ್ದು ನಮ್ಮ ರಾಜ್ಯದ ಎಲ್ಲ ಸವಲತ್ತು ಪಡೆದಿರುವ ಎಂಇಎಸ್ ಪುಂಡರ ಮೇಲೆ ರಾಜ್ಯ ಸರ್ಕಾರ ನಿರ್ದಾಕ್ಷಿಣ್ಯ ಕಠಿಣ ಕಾನೂನು ಕ್ರಮ ಕೈಗೊಂಡು ಕೂಡಲೇ ಗಡಿಪಾರು ಮಾಡಬೇಕು. ಇಲ್ಲದಿದ್ದರೆ ಕರವೇ ಕಾರ್ಯಕರ್ತರು ನಾಡದ್ರೋಹಿಗಳ ಮನೆಗೆ ನುಗ್ಗಿ ಪ್ರತ್ಯುತ್ತರ ಕೊಡುತ್ತೇವೆ ಎಂದರು.

ಉತ್ತರ ಕರ್ನಾಟಕ ಸಂಚಾಲಕ ಬಸವರಾಜ ದೇಸಾಯಿ ಮುಂತಾದವರು ಮಾತನಾಡಿದರು. ರೈತ ಘಟಕದ ಅಧ್ಯಕ್ಷ ಬಸಯ್ಯ ಗುಡ್ಡಿಮಠ, ಬಸವರಾಜ ಮುಳ್ಳಾಳ, ಸುರೇಶ ಮುಳಗುಂದ, ಯಮನೂರಸಾಬ್‌ ನದಾಫ್‌, ಸಂತೋಷ ಕುಂಬಾರ, ರಾಘವೇಂದ್ರ ಬಾಕಳೆ,ಪರಶುರಾಮ ಭನ್ನೂರ, ಬಸವರಾಜ ಕಟಗಿ, ಇಬ್ರ್ರಾಹಿಮ್ ನದಾಫ್‌, ಮುದಿಯಪ್ಪ ಗಾಂಜಾರ, ಮಂಜುನಾಥ ಹಿರೇಮನಿ, ಶರಣಪ್ಪ ತಡಹಾಳ, ಸುರೇಶ ಬೂದಿಹಾಳ, ಭೀಮಪ್ಪ ಪೂಜಾರ, ಶಿವಕ್ಕ ಬೇವಿನಮರದ, ಪ್ರೇಮವ್ವ ಬೇವಿನಮರದ, ನೀಲವ್ವ ಹಿರೇಮನಿ, ಶಾಂತವ್ವ ದೊಡ್ಡಮನಿ, ದುರ್ಗವ್ವ ಹಾದಿಮನಿ, ಬಸವ್ವ ಕಟ್ಟೀಮನಿ, ರೇಣವ್ವ ಮುಳಗುಂದ, ಗಂಗವ್ವ ಹಿರೇಮನಿ, ಯಲ್ಲಪ್ಪ ಪ್ಯಾಟಿ, ಮಾರುತಿ ದೊಡ್ಡಮನಿ ಸೇರಿದಂತೆ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ