ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ನಾಗರೀಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ನಿವಾಸಿಗಳು 1992ರಿಂದಲೂ ಸದರಿ ರಸ್ತೆ ಮತ್ತು ಚರಂಡಿಯ ಅಭಿವೃದ್ಧಿಗಾಗಿ ಮನವಿ ಮಾಡುತ್ತಿದ್ದರೂ ಪುರಸಭೆ ರಸ್ತೆ ಅಭಿವೃದ್ಧಿ ಮಾಡುತ್ತಿಲ್ಲ ಎಂದು ದೂರಿದರು.
ಪಟ್ಟಣ ವ್ಯಾಪ್ತಿ ಇತರೆ ರಸ್ತೆಗಳ ಅಭಿವೃದ್ಧಿಯಾಗುತ್ತಿದ್ದರೂ ಪುರಸಭೆ ಉದ್ದೇಶ ಪೂರ್ವಕವಾಗಿ ಸದರಿ ರಸ್ತೆಯನ್ನು ಅಭಿವೃದ್ಧಿ ಪಡಿಸುತ್ತಿಲ್ಲ. ಎಷ್ಟೇ ಮನವಿ ಮಾಡಿದರೂ ಪುರಸಭೆ ಈ ಬಗ್ಗೆ ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಸುರೇಶ್‌ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆ ಸುದ್ದಿ ತಿಳಿದು ಪುರಸಭೆ ಮುಖ್ಯಾಧಿಕಾರಿ ಸತೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಆರ್.ಲೋಕೇಶ್ ಮತ್ತು ವಾರ್ಡ್ ಪ್ರತಿನಿಧಿ ಸದಸ್ಯೆ ಪಂಕಜ ಪ್ರಕಾಶ್ ಸ್ಥಳಕ್ಕಾಗಿಮಿಸಿ ಮನವಿ ಸ್ವೀಕರಿಸಿ ಪ್ರಸ್ತುತ ಪಟ್ಟಣದ ಅಭಿವೃದ್ಧಿಗೆ 3.60 ಕೋಟಿ ಅನುದಾನ ಬಂದಿದೆ. ಸದರಿ ರಸ್ತೆ ಅಭಿವೃದ್ಧಿಗೆ 20 ಲಕ್ಷ ರು. ಮೀಸಲಿಡಲಾಗಿದೆ ಎಂದರು.
ಪ್ರತಿಭಟನೆಯಲ್ಲಿ ಕೃಷ್ಣರಾಜಪೇಟೆ ನಾಗರೀಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬೊಪ್ಪನಹಳ್ಳಿ ಬಸವೇಗೌಡ, ನಿವಾಸಿಗಳಾದ ಲೇಪಾಕ್ಷಿಗೌಡ, ಚಾ.ಶಿ.ಜಯಕುಮಾರ್, ಸಬ್ಬೀರ್, ಬಿ.ಸೋಮಶೇಖರ್, ರಾಮಕೃಷ್ಣೇಗೌಡ,ರಾಮೇಗವಡ, ಆನಂದ್, ಮಿಲಿಟರಿ ಶಿವಕುಮಾರ್, ತನ್ವೀರ್, ಪ್ರಭಾಕರ್ ಸೇರಿದಂತೆ ಹಲವರು ಇದ್ದರು.