ಆಸ್ಪತ್ರೆ, ಹಾಸ್ಟೆಲ್‌ಗಳಿಗೆ ಉಪ ಲೋಕಾಯುಕ್ತರ ಭೇಟಿ

KannadaprabhaNewsNetwork |  
Published : Jul 15, 2024, 01:47 AM IST
4: ಹೊಸಕೋಟೆ ನಗರದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ ಉಪಲೋಕಾಯುಕ್ತ ವೀರಪ್ಪ. | Kannada Prabha

ಸಾರಾಂಶ

ಹೊಸಕೋಟೆ: ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ ಪೂರ್ವ ಹಾಸ್ಟೆಲಿಗೆ ಕರ್ನಾಟಕ ರಾಜ್ಯ ಉಪ ಲೋಕಾಯುಕ್ತ ವೀರಪ್ಪ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ಹೊಸಕೋಟೆ: ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ ಪೂರ್ವ ಹಾಸ್ಟೆಲಿಗೆ ಕರ್ನಾಟಕ ರಾಜ್ಯ ಉಪ ಲೋಕಾಯುಕ್ತ ವೀರಪ್ಪ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಆಹಾರ, ಗುಣಮಟ್ಟ, ಸ್ವಚ್ಛತೆ ಹಾಗೂ ದಾಸ್ತಾನು ಕೊಠಡಿಗೆ ತೆರಳಿ ದಿನಸಿ ಸಾಮಗ್ರಿಗಳನ್ನು ಪರಿಶೀಲಿಸಿದರು.

ಬಾಲಕಿಯರ ಹಾಸ್ಟೆಲ್‌ನಲ್ಲಿ ಅಡುಗೆ ಕೋಣೆಗೆ ತೆರಳಿ ವಿದ್ಯಾರ್ಥಿಗಳಿಗೆ ಉಣಪಡಿಸುವ ಸಾಂಬಾರ್ ಪರಿಶೀಲಿಸಿ ರುಚಿ ನೋಡಿ, ಮತ್ತಷ್ಟು ಗುಣಮಟ್ಟದಿಂದ ಆಹಾರ ಸಿದ್ಧಪಡಿಸಬೇಕೆಂದು ಸಂಬಂಧಪಟ್ಟ ಮೇಲ್ವಿಚಾರಕರಿಗೆ ತಿಳಿಸಿ ಎಂದು ಅಡುಗೆ ಸಿಬ್ಬಂದಿಗೆ ಸೂಚನೆ ನೀಡಿದರು.

ಆಸ್ಪತ್ರೆಗೆ ಭೇಟಿ:

ನಗರದ ತಾಲೂಕು ಸಾರ್ವಜನಿಕ ಆಸ್ಪತ್ರಗೆ ಭೇಟಿ ನೀಡಿದ ಉಪ ಲೋಕಾಯುಕ್ತ ವೀರಪ್ಪ, ಆಸ್ಪತ್ರೆಯಲ್ಲಿದ್ದ ಔಷಧಿಗಳ ದಾಸ್ತಾನು, ಡಯಾಲಿಸಿಸ್ ಕೇಂದ್ರ, ಹೆರಿಗೆ ಆರೈಕೆ ಕೇಂದ್ರ, ಹೊರರೋಗಿಗಳ ವಿಭಾಗ ಸೇರಿ ಎಲ್ಲವನ್ನು ಪರಿಶೀಲಿಸಿ ರೋಗಿಗಳಿಂದ ಮಾಹಿತಿ ಪಡೆದರು. ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಿಳಿಗೆ ಉಚಿತ ಊಟ ನೀಡಬೇಕು ಎಂದು ಸೂಚಿಸಿದರು. ಲೋಕಾಯುಕ್ತ ಎಸ್ಪಿ ಪವನ್ ನಚ್ಚೂರ್, ಡಿವೈಎಸ್ಪಿ ಗಿರೀಶ್, ಇನ್‌ಸ್ಪೆಕ್ಟರ್ ನಂದಕುಮಾರ್ ಇದ್ದರು.

ಡಾಕ್ಟರ್, ಎಂಜಿನಿಯರ್ ಬದಲು ಸೈನಿಕರಾಗಿ

ನಗರದ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಹಾಸ್ಟೆಲ್‌ಗೆ ತೆರಳಿದ ವಿದ್ಯಾರ್ಥಿನಿಯರು ಸಮಾಜದಲ್ಲಿ ಸಾಕಷ್ಟು ಧೈರ್ಯ, ಆತ್ಮಸ್ಥೈರ್ಯದಿಂದ ಜೀವನ ಮಾಡಬೇಕು. ಎಲ್ಲರೂ ಡಾಕ್ಟರ್, ಎಂಜಿನಿಯರ್ ಆಗಬೇಕು ಎನ್ನುವುದನ್ನು ಬಿಟ್ಟು ದೇಶದ ಸೈನಿಕರಾಗುವತ್ತ ಗಮನ ಹರಿಸಬೇಕು. ಝಾನ್ಸಿರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ, ರಾಣಿ ಅಬ್ಬಕ್ಕರ ಆದರ್ಶಗಳನ್ನು ಹೊತ್ತು ಜೀವನದಲ್ಲಿ ಸಾಧನೆ ಮಾಡಬೇಕು ಎಂದು ಉಪ ಲೋಕಾಯುಕ್ತ ವೀರಪ್ಪ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!