ದೇರಳಕಟ್ಟೆಯ ಜಸ್ಟಿಸ್ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಹಾಸ್ಪಿಟಲ್ ಮತ್ತು ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ಸಂಸ್ಥಾಪಕರ ದಿನಾಚರಣೆ-2025 ನೆರವೇರಿತು.
ಕನ್ನಡಪ್ರಭ ವಾರ್ತೆ ಉಳ್ಳಾಲ
ನಿಟ್ಟೆ ಸಂಸ್ಥೆ ಗ್ರಾಮೀಣ ಭಾಗದಿಂದ ಆರಂಭಿಸಿದ ಶಾಲೆ, ಆಸ್ಪತ್ರೆ, ಶಿಕ್ಷಣ ಮತ್ತು ಆರೋಗ್ಯ ಬಗೆಗಿನ ಕಾಳಜಿ ಹೊಂದಿದ್ದು ನಿಟ್ಟೆ, ಮಂಗಳೂರು, ಬೆಂಗಳೂರು, ದೇರಳಕಟ್ಟೆಯಲ್ಲಿ ಕ್ಯಾಂಪಸ್ ತೆರೆದಿದ್ದು ಸಾವಿರಾರು ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ಶಿಕ್ಷಣ ನೀಡುತ್ತಾ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡುತ್ತಿದೆ. ನಿಟ್ಟೆ ವಿಶ್ವವಿದ್ಯಾಲಯ ಜಾಗತಿಕ ಮನ್ನಣೆ ಪಡೆದ ಸಂಸ್ಥೆಯಾಗಿ ರಾರಾಜಿಸುತ್ತಿದ್ದು ಅವೆಲ್ಲದ್ದಕ್ಕೂ ಸಂಸ್ಥಾಪಕರ ದೂರದೃಷ್ಟಿ ಹಾಗೂ ತ್ಯಾಗದ ಫಲ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ. ದೇರಳಕಟ್ಟೆಯ ಜಸ್ಟಿಸ್ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಹಾಸ್ಪಿಟಲ್ ಮತ್ತು ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ನಡೆದ ಸಂಸ್ಥಾಪಕರ ದಿನಾಚರಣೆ-2025 ಕಾರ್ಯಕ್ರಮದಲ್ಲಿ ಅವರು ಆನ್ಲೈನ್ ಮೂಲಕ ಮಾತನಾಡಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸೇವಾಂಜಲಿ ಪ್ರತಿಷ್ಠಾನದ ಕೃಷ್ಣ ಕುಮಾರ್ ಪೂಂಜ ಮಾತನಾಡಿ, ನಿಟ್ಟೆ ಸಂಸ್ಥೆಯನ್ನು ಆರಂಭಿಸುವಾಗ ಹಳ್ಳಿಯಿಂದ ಪ್ರಗತಿ, ಹಳ್ಳಿಯಲ್ಲೂ ಶಿಕ್ಷಣ, ಆರೋಗ್ಯ ಲಭಿಸುವಂತಾಗಬೇಕು ಎಂಬ ಸಂಸ್ಥಾಪಕರ ಗುರಿ ಈಡೇರಿದ್ದು ಬದುಕಿನುದ್ದಕ್ಕೂ ಆದರ್ಶಪ್ರಾಯರಾಗಿ ರಾಷ್ಟ್ರೀಯ ಚಿಂತನೆಯಲ್ಲಿ ಬಾಳಿ ಬದುಕಿದವರು ಎಂದು ನುಡಿದರು. ನಿಟ್ಟೆ ಸಂಸ್ಥೆ ಆರೋಗ್ಯ ಕುರಿತಾಗಿ ಅದೆಷ್ಟು ಕಾಳಜಿ ವಹಿಸಿದೆ ಎಂಬುದಕ್ಕೆ ಪ್ರಸ್ತುತ ಸುಮಾರು 21ಹಳ್ಳಿಯಲ್ಲಿ ಆರೋಗ್ಯ ಕೇಂದ್ರ ಜನರಿಗೆ ಉಚಿತಸೇವೆ ನೀಡಿ ಕಾರ್ಯಾಚರಿಸುತ್ತಿದೆ ಎಂದರು.ಶೈಕ್ಷಣಿಕ ಸಹ ಕುಲಾಧಿಪತಿ ಪ್ರೊ. ಡಾ. ಎಂ. ಶಾಂತಾರಾಮ್ ಶೆಟ್ಟಿ, ಆಡಳಿತ ಸಹ ಕುಲಾಧಿಪತಿ ಎನ್. ವಿಶಾಲ್ ಹೆಗ್ಡೆ, ಕುಲಪತಿ ಪ್ರೊ. ಎಂ. ಎಸ್. ಮೂಡಿತ್ತಾಯ, ಕುಲಸಚಿವ ಹರ್ಷ ಹಾಲಹಳ್ಳಿ ಹಾಗೂ ಡಾ. ವೀಣಾ ಶುಭ ಹಾರೈಸಿದರು.
ಕಾರ್ಯಕ್ರಮದ ಪ್ರಯುಕ್ತ ನಡೆದಿದ್ದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕೆ.ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸುಮಲತಾ ಸ್ವಾಗತಿಸಿದರು. ಡಾ. ಸುಕನ್ಯಾ ಕೃಷ್ಣ ಕುಮಾರ್ ಪೂಂಜ ಅವರನ್ನು ಪರಿಚಯಿಸಿದರು. ಸುಮಿತ್ ಚೌಟ ಕಾರ್ಯಕ್ರಮ ನಿರೂಪಿಸಿದರು. ಸಹಾ ವೈದ್ಯಕೀಯ ಅಧೀಕ್ಷಕ ಡಾ. ಶಿರಾಲ್ ಹೆಗ್ಡೆ ವಂದಿಸಿದರು.
.............ಎಂಟು ವರ್ಷದಿಂದ ದೃಷ್ಟಿ ಕಳೆದುಕೊಂಡಿದ್ದ ಫರಂಗಿಪೇಟೆಯ ಮಹಿಳೆಗೆ ನಿಟ್ಟೆ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಕ್ಯಾಟ್ರೇಟ್ ಸಮಸ್ಯೆ ಇರೋದು ಖಚಿತವಾಗಿ ಉಚಿತ ಚಿಕಿತ್ಸೆ ನೀಡಿ ದೃಷ್ಟಿ ಬರುವಂತೆ ಮಾಡಿದ್ದು ಈಗ ಆ ಮಹಿಳೆ ನಗರವೊಂದರ ಜನದಟ್ಟಣೆ ಇರುವ ಜಾಗದಲ್ಲಿ ಹೋಂ ಗಾರ್ಡ್ ಸಿಬ್ಬಂದಿಯಾಗಿ ಟ್ರಾಫಿಕ್ ನಿಯಂತ್ರಣ ಮಾಡುತ್ತಿದ್ದಾರೆ. ಅದಕ್ಕೆ ಕಾರಣ ನಿಟ್ಟೆ ಸಂಸ್ಥೆಯ ಸೇವಾ ಕಾಳಜಿ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.