ಕನ್ನಡಪ್ರಭ ವಾರ್ತೆ ನಾಲತವಾಡ
ವೀರೇಶ್ವರ ವಿದ್ಯಾ ಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡ ಮಾಜಿ ಸಚಿವ ದಿ.ಜೆ.ಎಸ್.ದೇಶಮುಖ ಅವರ 35ನೇ ಹಾಗೂ ಮಾಜಿ ಸಚಿವೆ ವಿಮಲಾಬಾಯಿ ದೇಶಮುಖ ಅವರ 7ನೇ ಪುಣ್ಯಸ್ಮರಣೋತ್ಸವದಲ್ಲಿ ಅವರು ಮಾತನಾಡಿದರು. ಪ್ರಾಮಾಣಿಕ ರಾಜಕಾರಣಿಗಳ ಪಟ್ಟಿಯಲ್ಲಿ ದೇಶಮುಖ ಅವರದ್ದು ಪ್ರಮುಖ ಸ್ಥಾನವಿದೆ. ಅವರ ಮಾತು ಕಡಿಮೆ ಕೆಲಸ ಹೆಚ್ಚಿತ್ತು. ಆದರೆ ಇಂದಿನ ರಾಜಕಾರಣದ ಸ್ಥಿತಿ ಭಿನ್ನವಾಗಿದೆ, ಆದ್ದರಿಂದ ದೇಶಮುಖ ಮನೆತನ ಮತ್ತೆ ರಾಜಕಿಯಕ್ಕೆ ಬರಬೇಕು ಎಂದು ಜನರು ಅಪೇಕ್ಷೆ ಪಡುತ್ತಿದ್ದಾರೆ. ಎಂದು ಹೇಳಿದರು.
ದೊಡ್ಡ ದೊಡ್ಡ ಭಾಷಣ ಮಾಡಿದರೆ ಆರಿಸಿ ಬರುತ್ತಾರೆ ಎನ್ನುವುದಿಲ್ಲ. ಒಳ್ಳೆಯ ರಾಜಕಾರಣಿಗಳನ್ನು ಜನ ಯಾವತ್ತು ಕೈಬಿಡುವದಿಲ್ಲ ಎಂಬುದಕ್ಕೆ ಮುದ್ದೇಬಿಹಾಳವೇ ಸಾಕ್ಷಿ. ದೇಶಮುಖರಂತಹ ರಾಜಕಾರಣ ಮುದ್ದೇಬಿಹಾಳಕ್ಕೆ ಅವಶ್ಯವಾಗಿದೆ. ಅವರ ಮನೆತನದವರು ರಾಜಕೀಯಕ್ಕೆ ಬರಬೇಕು ಎಂದರು.ಗುರಮಠಕಲ್ ಶಾಸಕ ಶರಣಗೌಡ ಕಂದಕೂರ ಮಾತನಾಡಿ, ದಿ.ಜೆ.ಎಸ್.ದೇಶಮುಖ ಬಗ್ಗೆ ಸಾಕಷ್ಟು ಜನರಿಗೆ ಅವರ ಬಗ್ಗೆ ಕೇಳಿದೆ ಅವರು ಹೇಳಿದ ಮಾತುಗಳು ಇನ್ನು ನೆನಪಲ್ಲಿವೆ. ಯಾಕಂದರೆ ದೇಶಮುಖರು ಮಾಡಿದ ಕೆಲಸ, ತ್ಯಾಗ, ಸಮಾಜಕ್ಕೆ ಕೊಟ್ಟ ಕೊಡುಗೆ ಎಷ್ಟು ಚರ್ಚಿಸಿದರು ಸಾಲದು. ದೇಶಮುಖರನ್ನು ಆಧುನಿಕ ಬಸವಣ್ಣ ಎಂದು ಕರೆದರೂ ತಪ್ಪಾಗಲ್ಲ. ಸತ್ಯ ಸಿದ್ಧಾಂತಗಳಿಗೆ ಬದ್ಧರಾಗಿ ನಾಡಿನ ಸೇವೆಗೆ ತೊಡಗಿದರು. ಇಂತವರ ಕುಟುಂಬ ಇವತ್ತು ರಾಜಕೀಯದಲ್ಲಿ ಇರಬೇಕು ಅನ್ನೋದು ಎಲ್ಲಾ ಅಭಿಮಾನಿಗಳ ಒತ್ತಾಸೆಯಾಗಿದೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಕುಂಟೋಜಿಯ ಚನ್ನವೀರ ಶ್ರೀಗಳು ಆರ್ಶಿವಚನ ನೀಡಿದರು, ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ ಮಾತನಾಡಿದರು, ಎಮ್.ಎಸ್.ಪಾಟೀಲ ಸ್ವಾಗತಿಸಿದರು, ಡಾ.ಡಿ.ಆರ್.ಮಳಖೇಡ ಪ್ರಸ್ತಾವಿಕವಾಗಿ ಮಾತನಾಡಿದರು, ಮಹಾನಂದ ಅಮ್ಮಾಜಿಗೋಳ ಹಾಗೂ ಬಸವರಾಜ ಹಾದಿಮನಿ ನಿರೂಪಿಸಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವೀರೇಶ್ವರ ವಿದ್ಯಾ ಸಂಸ್ಥೆ ಹಾಗೂ ಸಿಂಡಿಕೇಟ್ ಬ್ಯಾಂಕ್‌ನಿಂದ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
------
ಹಿಂದಿನ ರಾಜಕಾರಣಿಗಳು ಪ್ರತಿ ಸಲ ಚುನಾವಣೆಯಲ್ಲಿ ಜಮೀನು ಮಾರುತ್ತಿದ್ದರು. ಈಗ ರಾಜಕೀಯಕ್ಕೆ ಬಂದರೆ ಸಾಕು ಜಮೀನಿನ ಮೇಲೆ ಜಮೀನು ಖರೀದಿ ಮಾಡುವ ಸ್ಥಿತಿ ಇದೆ. ಜಿಲ್ಲೆಯಲ್ಲಿ ಚುನಾವಣೆಗೆ ಅತಿ ಕಡಿಮೆ ಖರ್ಚು ಮಾಡುವವನು ನಾನೇ, ನಾನು ಬೈದು ಬೈದು ಆರಿಸಿ ಬರುತ್ತೇನೆ, ನನಗೆ ಚುನಾವಣೆಯಲ್ಲಿ ಸೋಲಿಸಲು ನಮ್ಮವರೆ ಸೂಟಕೇಸ್ ಕಳಿಸುತ್ತಾರೆ. ಆದರೂ, ಜನರು ನನ್ನನ್ನು ಕೈಬಿಡಲ್ಲ, ಯತ್ನಾಳರನ್ನು ಮುಂದಿನ ಚುನಾವಣೆಯಲ್ಲಿ ನೋಡುತ್ತೇವೆ ಎಂದು ಕೆಲವರು ಹೇಳುತ್ತಾರೆ, ಯತ್ನಾಳರನ್ನು ಎಂದು ನೋಡುವುದು ಆಗುವುದಿಲ್ಲ.