ಕೋಟ್ಯಧಿಪತಿಯಾಗಿದ್ದರೂ ಮಾಜಿ ಸಿಎಂ ಶೆಟ್ಟರ್‌ ಬಳಿ ವಾಹನವಿಲ್ಲ

KannadaprabhaNewsNetwork |  
Published : Apr 16, 2024, 01:04 AM IST
 ಶೆಟ್ಟರ್‌ | Kannada Prabha

ಸಾರಾಂಶ

ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಅವರು ₹12.45 ಮೌಲ್ಯದ ಆಸ್ತಿ ಒಡೆಯರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಅವರು ₹12.45 ಮೌಲ್ಯದ ಆಸ್ತಿ ಒಡೆಯರಾಗಿದ್ದಾರೆ. ತಮ್ಮ ಹೆಸರಿನಲ್ಲಿ ₹9.82 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೂ ₹2.63 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಆದರೆ, ಅವರ ಹೆಸರಿನಲ್ಲಿ ಯಾವುದೇ ವಾಹನಗಳಿಲ್ಲ. ಆಸ್ತಿಯಲ್ಲಿ ಕೋಟ್ಯಧಿಪತಿ ಆಗಿದ್ದರೂ ಶೆಟ್ಟರ್‌ ಅವರ ಮೇಲೆ ₹57.26 ಲಕ್ಷ ಸಾಲದ ಭಾರವಿದೆ.

ಅವರ ಪತ್ನಿ ಶಿಲ್ಪಾ ಶೆಟ್ಟರ್‌ ಹೆಸರಿನಲ್ಲಿ ₹1 ಲಕ್ಷ ಮೌಲ್ಯದ ಸ್ಥಿರಾಸ್ತಿ ಇದ್ದರೆ, ₹91.10 ಲಕ್ಷ ಮೌಲ್ಯದ ಚರಾಸ್ತಿ ಇದೆ ಎಂದು ಸೋಮವಾರ ಜಿಲ್ಲಾ ಚುನಾವಣಾಧಿಕಾರಿಗೆ ನಾಮಪತ್ರದ ಜೊತೆಗೆ ಆಸ್ತಿ ಘೋಷಣೆ ಮಾಡಿದ್ದಾರೆ.

64 ವರ್ಷ ವಯಸ್ಸಿನ ಜಗದೀಶ ಶೆಟ್ಟರ್‌ ಕಾನೂನು ಪದವೀಧರಾಗಿದ್ದು, ತಮ್ಮ ಮಕ್ಕಳ ಹೆಸರಿನಲ್ಲಿ ಯಾವುದೇ ಸ್ಥಿರಾಸ್ತಿ ಹಾಗೂ ಚರಾಸ್ತಿ ತೋರಿಸಿಲ್ಲ. 2022-23ನೇ ಸಾಲಿನ ಆದಾಯ ತೆರಿಗೆಯಲ್ಲಿ ₹ 33.16 ಲಕ್ಷ ಆದಾಯ ತೋರಿಸಿದ್ದಾರೆ. 2021-22 ನೇ ಸಾಲಿನಲ್ಲಿ ಶೆಟ್ಟರ್‌ ಅವರ ಆದಾಯ ₹ 29.76 ಲಕ್ಷ ಆದಾಯ ಇತ್ತು.

ಕಳೆದ ವಿಧಾನಸಭೆ ಚುನಾವಣೆ ವೇಳೆ ಶೆಟ್ಟರ್‌ ಅವರ ಒಟ್ಟು ಆಸ್ತಿ ಮೌಲ್ಯ ₹ 13.51 ಕೋಟಿ ಇತ್ತು. ಆದರೆ, ಕೇವಲ ಒಂದು ವರ್ಷದ ಅವಧಿಯಲ್ಲಿ ಅವರ ಆಸ್ತಿ ಸಂಪಾದನೆ₹ 1 ಕೋಟಿಯಷ್ಟು ಇಳಿಕೆಯಾಗಿದೆ. ಈಗ ಲೋಕಸಭಾ ಚುನಾವಣೆಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಅವರ ಆಸ್ತಿ ₹ 12.45 ಕೋಟಿ ಯಷ್ಟಿದೆ.

2023ರಲ್ಲಿ ಚರಾಸ್ತಿ ₹ 3.42 ಕೋಟಿ ಇದ್ದರೆ, ಈಗ ₹ 2.63 ಇದೆ. 2023ರಲ್ಲಿ ಸ್ಥಿರಾಸ್ತಿ ₹ 10.08 ಕೋಟಿ ಇದ್ದರೆ, 2024ರಲ್ಲಿ₹ 9.89 ಕೋಟಿಯಿದೆ.

ಜಗದೀಶ ಶೆಟ್ಟರ್‌ ತಮ್ಮ ಪತ್ನಿ ಶಿಲ್ಪಾ ಅವರಿಗೆ ₹ 14.40 ಲಕ್ಷ, ಮಕ್ಕಳಾದ ಪ್ರಶಾಂತನಿಗೆ ₹ 26.33 ಲಕ್ಷ , ಇನ್ನೋರ್ವ ಪುತ್ರ ಸಂಕಲ್ಪನಿಗೆ ₹ 45.11 ಲಕ್ಷ ಮತ್ತು ಸಹೋದರ ಮೋಹನಗೆ ₹ 35. 2 ಲಕ್ಷ ಸೇರಿ ಒಟ್ಟು ₹ 1.24 ಕೋಟಿ ಸಾಲ ನೀಡಿದ್ದಾರೆ. ಅದೇ ರೀತಿ ಶಿಲ್ಪಾ ಶೆಟ್ಟರ್ ಅವರು ತಮ್ಮ ಪುತ್ರರಾದ ಪ್ರಶಾಂತಗೆ ₹ 4,30 ಲಕ್ಷ ಮತ್ತು ಸಂಕಲ್ಪಗೆ ₹ 20 ಸಾವಿರ ಸಾಲ ಕೊಟ್ಟಿದ್ದಾರೆ.

ಜಗದೀಶ ಶೆಟ್ಟರ ಅವರ ಕೈಯಲ್ಲಿ ₹ 15. 37 ಲಕ್ಷ ಮತ್ತು ಪತ್ನಿಯ ಬಳಿ ₹ 2.50 ಲಕ್ಷ ನಗದು ಹಣವಿದೆ. ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಲ್ಲಿ ಜಗದೀಶ ಶೆಟ್ಟರ್‌ ₹ 66.96 ಲಕ್ಷ ಠೇವಣಿ , ₹ 10.43 ಕೋಟಿ ಬೆಲೆಯ ಷೇರು ಹಾಗೂ ಬಾಂಡ್‌ಗಳನ್ನು ಹೊಂದಿದ್ದಾರೆ. ಅಲ್ಲದೆ,₹ 42.94 ಮೌಲ್ಯದ ಬೆಳ್ಳಿ ಮತ್ತು ಬಂಗಾರದ ಆಭರಣಗಳಿವೆ. ಪತ್ನಿ ಶಿಲ್ಪಾ ಹೆಸರಿನಲ್ಲಿ ₹ 5.33 ಲಕ್ಷ ಠೇವಣಿ ಮತ್ತು ₹ 7.82 ಲಕ್ಷ ಷೇರು ಮತ್ತು ಬಾಂಡ್‌ಗಳಿದ್ದು, ₹ 74.90 ಲಕ್ಷ ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೋಟೆಲ್‌ಗೆ ನಿತ್ಯ 1000 ಸಿಲಿಂಡರ್‌- ಪ್ರತಿದಿನ ರಾಜ್ಯಕ್ಕೆ 44000 ವಾಣಿಜ್ಯ ಸಿಲಿಂಡರ್‌ ಬೇಕು
ಗ್ಯಾರೇಜ್‌ ಮೆಕಾನಿಕ್‌ ಕೊಲೆ ಕೇಸ್‌: 7 ಆರೋಪಿಗಳ ಸೆರೆ