ರಂಗೂಪುರ ಶಿವಕುಮಾರ್
ಹುಡುಗಿ ಮದುವೆಗೆ ಹುಡುಗಿ ಕುಟುಂಬಸ್ಥರು ಸರ್ಕಾರಿ ನೌಕರ ಬೇಕು, ಸಿಟಿ ಲೈಫ್ ಬೇಕು, ದೊಡ್ಡ ಸಂಬಳ ಕೇಳೋ ಕಾಲದಲ್ಲಿ ತಾಲೂಕಿನ ಹಳ್ಳಿಯೊಂದರ ಮಧುಮಗಳೊಬ್ಬಳು ರೈತನೋರ್ವನ ಕೈ ಹಿಡಿಯಲು ಮನಸ್ಸು ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾಳೆ.
ಡಿ.3ರಂದು ರೈತನ ವಿವಾಹವಾಗುವ ಮಧುಮಗಳೇ ತಾಲೂಕಿನ ಬೇಗೂರು ಗ್ರಾಮದ ಎಂ.ಲಕ್ಷ್ಮೀ. ಇವರು ನರ್ಸಿಂಗ್ ಪದವೀಧರೆಯಾಗಿದ್ದು, ಪ್ರಸ್ತುತ ಜಯದೇವ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.ಸರ್ಕಾರಿ ಕೆಲಸ, ಸಮಾಜದಲ್ಲಿ ಗೌರವ, ಕೈತುಂಬಾ ಸಂಬಳ. ಇಂತಹ ಹುಡುಗಿಗೆ ಸರ್ಕಾರಿ ನೌಕರನೇ ಬೇಕಾದರೂ ಸಿಗುತ್ತಿದ್ದ. ಆದರೆ ಲಕ್ಷ್ಮೀ ಆಯ್ಕೆ ಮಾಡಿದ್ದು ಕೊಳ್ಳೇಗಾಲದ ರೈತ ರಾಜು ಕೆ. ಅವರನ್ನು. ನನಗೆ ಬೇಕಾಗಿರೋದು ಸರ್ಕಾರಿ ಕೆಲಸದ ಗಂಡ ಅಲ್ಲ, ಮಣ್ಣನ್ನು ನಂಬಿ ಬದುಕುವ ರೈತ ಗಂಡ ಎನ್ನುವುದು ಲಕ್ಷ್ಮೀಯ ನಿಲುವು. ಅದಕ್ಕಾಗಿ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಮುಂದಿನ ಗಂಡನ ಹೆಸರನ್ನು ಹೀಗೆ ಹಾಕಿಸಿದ್ದಾರೆ:
ಲಕ್ಷ್ಮೀಯಿಂದ ಯುವಕರಿಗೆ ಭರವಸೆ:
ಕಳೆದ ವಾರ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದ ಸರ್ಕಾರಿ ಸಭೆಯಲ್ಲಿ ಸಿಎಂ ಮುಂದೆಯೇ ನನಗೆ ಮದುವೆ ಮಾಡಿಸಿ ಎಂದು ರೈತ ಕುಟುಂಬದ ಯುವಕನೋರ್ವ ಅರ್ಜಿ ಕೊಟ್ಟಿದ್ದ.
ರೈತನನ್ನು ಮದುವೆಯಾಗುವುದು ಕೀಳಲ್ಲ, ಹೆಮ್ಮೆ ಎಂಬುದನ್ನು ಲಕ್ಷ್ಮೀ ಸಂದೇಶ ತೋರಿಸಿಕೊಟ್ಟಿದೆ.