ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ
ಶಿವಗಂಗೆ ಒಂದು ಪವಿತ್ರ ಐತಿಹಾಸಿಕ ಕ್ಷೇತ್ರವಾಗಿದ್ದು, ಇಂತಹ ಕ್ಷೇತ್ರದಲ್ಲಿ ಸಸಿಗಳನ್ನು ನೆಡುವ ಜೈವಿಕ ಉದ್ಯಾನವನ ಜೀರ್ಣೋದ್ಧಾರ ಕಾರ್ಯ ಕೈಗೊಂಡಿರುವುದು ಶ್ಲಾಘನೀಯ ಎಂದು ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.ಶಿವಗಂಗೆಯ ಹಿಪ್ಪೆತೋಪಿನಲ್ಲಿ ಆದಿಚುಂಚನಗಿರಿ ಮಠ ಹಾಗೂ ಇಕೋವರ್ಲ್ಡ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜೈವಿಕ ಉದ್ಯಾನವನ ಜೀರ್ಣೋದ್ಧಾರ ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿವಗಂಗೆ ಕ್ಷೇತ್ರದ ಬಗ್ಗೆ ಸ್ಥಳೀಯರಿಗೆ ಮಹತ್ವ ತಿಳಿದಿರುವುದಿಲ್ಲ. ಶಿವಗಂಗೆ ಕ್ಷೇತ್ರದ ಮಹತ್ವದ ಬಗ್ಗೆ ಚರಿತ್ರೆಯಲ್ಲಿ ದಾಖಲಾಗಿದೆ. ಆಧುನಿಕತೆ ಬೆಳೆದ ಹಾಗೆ ಪರಿಸರ ಹಾಳಾಗುತ್ತಾ ಹೋಗುತ್ತಿದೆ. ಈ ಹಿಂದೆ ಹಿರಿಯರು ಪರಿಸರ ಉಳಿಸಲು ಪ್ರತಿಗ್ರಾಮಗಳಲ್ಲಿ ಗುಂಡುತೋಪು, ದೇವರ ತೋಪುಗಳನ್ನು ಬೆಳೆಸುತ್ತಿದ್ದರು. ಇದೀಗ ಅವು ಕಣ್ಮರೆಯಾಗುತ್ತಿವೆ. ನಮ್ಮ ಹಿರಿಯ ಗುರುಗಳು ವನ ಸಮೃದ್ಧಿ ಟ್ರಸ್ಟ್ ನ ಮೂಲಕ ಐದು ಕೋಟಿಗೂ ಹೆಚ್ಚು ಮರಗಳನ್ನು ನೆಟ್ಟು ಪೋಷಿಸಿದ್ದಾರೆ ಎಂದರು.ಮಠದ ಮೂಲಕವೇ ಗಿಡಗಳ ರಕ್ಷಣೆ:
ಶಿವಗಂಗೆ ಕ್ಷೇತ್ರದಲ್ಲಿ ಶ್ರೀಮಠಕ್ಕೆ ಸಂಬಂಧಿಸಿದಂತೆ ಜಮೀನಿದ್ದು ಈ ಜಮೀನಿನಲ್ಲಿ ಬೋರೆವೆಲ್ ಕೊರೆಯಿಸಿ ಆ ನೀರಿನಿಂದಲೇ ಇದೀಗ ನೆಟ್ಟಿರುವ ಗಿಡಗಳನ್ನು ರಕ್ಷಣೆ ಮಾಡಲಾಗುತ್ತದೆ ಎಂದರು.ಗ್ರಾಮದ ಮುಖಂಡರು ಶಿವಗಂಗೆ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಮಠದ ವತಿಯಿಂದ ಶಾಲಾ, ಕಾಲೇಜು, ಸತ್ಸಂಗ ಕೇಂದ್ರಗಳನ್ನು ಸ್ಥಾಪಿಸಲು ಮನವಿ ಮಾಡಿದರು.
ವಿಜಯನಗರ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ಐಆರ್ ಎಸ್ ಅಧಿಕಾರಿ ಜಯರಾಮ್ ರಾಯ್ ಪುರ್ , ಐಎಫ್ ಎಸ್ ನಿವೃತ್ತ ಅಧಿಕಾರಿ ಶ್ರೀಕಂಠಯ್ಯ, ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಶ್ರೀನಿವಾಸ್, ಗ್ರಾಪಂ ಅಧ್ಯಕ್ಷ ಪ್ರಭುದೇವ್, ಕರವೇ ಮಂಜುನಾಥ್, ಮಾಚನಹಳ್ಳಿ ಜಯಣ್ಣ, ಭಾರತೀಪುರ ಮೋಹನ್ ಕುಮಾರ್, ಬಿ.ಎಂ ಶ್ರೀನಿವಾಸ್, ಬಿ.ಪಿ ಶ್ರೀನಿವಾಸ್, ಬೀರಗೊಂಡನಹಳ್ಳಿ ಬೈರೇಶ್, ಮನೋಹರ್, ಗಂಗರುದ್ರಯ್ಯ, ಸಿದ್ದರಾಜು, ಮುರಳೀಧರ್, ಪಾರ್ಥಣ್ಣ, ಅಲ್ಪಯ್ಯನಪಾಳ್ಯ ವೆಂಕಟೇಶ್, ಹನುಮಂತರಾಜು, ಬಮೂಲ್ ತಿಮ್ಮರಾಜು, ವಿಜಯಕುಮಾರ್ ಹೊಸಪಾಳ್ಯ, ಐಸಾಮಿಪಾಳ್ಯ ನವೀನ್ ಮತ್ತಿತರರಿದ್ದರು.----