- ಪೋಸ್ಟರ್ ಬಿಡುಗಡೆಗೊಳಿಸಿದ ಡಾ.ಪ್ರಭಾ ಮಲ್ಲಿಕಾರ್ಜುನ್ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಛಾಯಾಗ್ರಾಹಕರ ಒಳಿತಿಗಾಗಿ ದಾವಣಗೆರೆ, ಚಿತ್ರದುರ್ಗ, ಗದಗ, ಕೊಪ್ಪಳ, ಹಾವೇರಿ, ಶಿವಮೊಗ್ಗ, ವಿಜಯನಗರ 7 ಜೆಲ್ಲೆಯ ಛಾಯಾಗ್ರಾಹಕರು ಸೇರಿ ದಾವಣಗೆರೆ ನಗರದಲ್ಲಿ ಆ.24, 25ರಂದು ಮಧ್ಯ ಕರ್ನಾಟಕದ ಬೃಹತ್ ಛಾಯಾ ವಸ್ತು ಪ್ರದರ್ಶನವನ್ನು ಹಮ್ಮಿಕೊಂಡಿದ್ದೀರಿ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಎಸ್.ಎಸ್. ಕೇರ್ ಟ್ರಸ್ಟ್ ಟ್ರಸ್ಟಿ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.ನಗರದ ಎಂಸಿಸಿ ಬಿ ಬ್ಲಾಕ್‌ನಲ್ಲಿರುವ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನಿವಾಸದಲ್ಲಿ ಭಾನುವಾರ ಮಧ್ಯ ಕರ್ನಾಟಕ ಬೃಹತ್ ಛಾಯಾ ವಸ್ತು ಪ್ರದರ್ಶನದ ದೇವನಗರಿ ಪ್ರೊ ಇಮೇಜಿನ ಪೋಸ್ಟರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ವಸ್ತು ಪ್ರದೇಶದ ಸ್ವಾಗತ ಸಮಿತಿ ಅಧ್ಯಕ್ಷ ಶ್ರೀನಾಥ್ ಪಿ.ಅಗಡಿ, ದಾವಣಗೆರೆ ಜಿಲ್ಲಾಧ್ಯಕ್ಷ ವಿಜಯಕುಮಾರ್ ಜಾದವ್, ಚಿತ್ರದುರ್ಗ ಜಿಲ್ಲಾಧ್ಯಕ್ಷ ಸೈಯದ್ ರೆಹಮತ್ ಉಲ್ಲಾ, ಹಾವೇರಿ ಜಿಲ್ಲಾಧ್ಯಕ್ಷ ರಾಜೇಂದ್ರ ರಿತ್ತಿ, ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ಪ್ರಾಣೇಶ್ ಕಂಪ್ಲಿ, ವಿಜಯನಗರ ಜಿಲ್ಲೆಯ ಸುರೇಶ್, ದಾವಣಗೆರೆ ಜಿಲ್ಲಾ ಕಾರ್ಯದರ್ಶಿ ಚನ್ನಬಸವರಾಜು, ಹೊನ್ನಳ್ಳಿಯ ತಾಲೂಕು ಅಧ್ಯಕ್ಷ ಬಸವನಗೌಡ, ನ್ಯಾಮತಿ ತಾಲೂಕು ಅಧ್ಯಕ್ಷ ರಾಘವೇಂದ್ರ, ಜಗಳೂರು ತಾಲೂಕು ಸಂಘದ ಉಪಾಧ್ಯಕ್ಷ ಹನುಮಂತಪ್ಪ, ಹರಿಹರ ತಾಲೂಕು ಸಂಘದ ಅಧ್ಯಕ್ಷ ಸಂತೋಷ್ ಕಿರೋಜಿ, ದುಗ್ಗಪ್ಪ ಕಡೆಮನಿ, ಎಸ್.ಆರ್. ತಿಪ್ಪೇಸ್ವಾಮಿ, ಕಿರಣಕುಮಾರ, ಮಿಥುನ್, ಬಸವರಾಜ, ತಿಲಕ್, ಮಂಗಳಮ್ಮ, ರುದ್ರಮ್ಮ, ಕಾಸಿಂ, ಪ್ರಕಾಶ್, ಮಲ್ಲಿಕಾರ್ಜುನ್, ಅರುಣ, ಹರಪನಹಳ್ಳಿ ತಾಲೂಕು ಸಂಘದ ಅಧ್ಯಕ್ಷ ಅಲ್ಲಾವಲಿ ಇತರರು ಇದ್ದರು.- - - -26ಕೆಡಿವಿಜಿ36ಃ:
ದಾವಣಗೆರೆಯಲ್ಲಿ ದೇವನಗರಿ ಪ್ರೊ ಇಮೇಜ್ 2024 ಛಾಯಾ ವಸ್ತು ಪ್ರದರ್ಶನದ ಪೋಸ್ಟರ್ ಅನ್ನು ಡಾ.ಪ್ರಭಾ ಮಲ್ಲಿಕಾರ್ಜುನ್ ಬಿಡುಗಡೆ ಮಾಡಿದರು.