ದೇವರ ದಾಸಿಮಯ್ಯ ವಚನಗಳು ಸಮಾಜ ಸುಧಾರಣೆಗೆ ದಾರಿದೀಪ: ಬಸವರಾಜ ತೆನ್ನಲ್ಲಿ

KannadaprabhaNewsNetwork | Published : Apr 14, 2024 1:50 AM

ಸಾರಾಂಶ

ಯಲಬುರ್ಗಾ ಪಟ್ಟಣದ ತಹಸೀಲ್‌ ಕಚೇರಿ ಆವರಣದಲ್ಲಿ ತಾಲೂಕಾಡಳಿತ ಹಾಗೂ ನೇಕಾರರ ಸಮುದಾಯದ ಮುಖಂಡರ ಸಮ್ಮುಖದಲ್ಲಿ ಶನಿವಾರ ದೇವರ ದಾಸಿಮಯ್ಯ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಯಲಬುರ್ಗಾ: ದೇವರ ದಾಸಿಮಯ್ಯನವರು ತಮ್ಮ ವಚನಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಕಾಯಕವನ್ನು ಕೈಗೊಂಡು ಸಾಮಾಜಿಕ, ಸಾಂಸ್ಕೃತಿಕ ಶೈಕ್ಷಣಿಕ, ಆರ್ಥಿಕ ಬದಲಾವಣೆಗೆ ದಾರಿದೀಪವಾಗಿದ್ದಾರೆ ಎಂದು ತಾಲೂಕು ದಂಡಾಧಿಕಾರಿ ಬಸವರಾಜ ತೆನ್ನಲ್ಲಿ ಹೇಳಿದರು.

ಪಟ್ಟಣದ ತಹಸೀಲ್‌ ಕಚೇರಿ ಆವರಣದಲ್ಲಿ ತಾಲೂಕಾಡಳಿತ ಹಾಗೂ ನೇಕಾರರ ಸಮುದಾಯದ ಮುಖಂಡರ ಸಮ್ಮುಖದಲ್ಲಿ ಶನಿವಾರ ದೇವರ ದಾಸಿಮಯ್ಯ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ದೇವರ ದಾಸಿಮಯ್ಯ ಕಾಯಕ, ದಾಸೋಹ, ಜ್ಞಾನಬೋಧನೆ ಎಂಬ ಮೂರು ತತ್ವಪದಗಳ ಮೂಲಕ ಸಮಾಜದಲ್ಲಿರುವ ಜಾತೀಯತೆ, ಮೂಢನಂಬಿಕೆ ಹೋಗಲಾಡಿಸಿ, ಸಮಾನತೆಯನ್ನು ಸಾರಿದ ಶ್ರೇಷ್ಠ ಶರಣರು ಎಂದರು.

ನೇಕಾರ ಸಮುದಾಯದ ಮುಖಂಡ ಅಮರಪ್ಪ ಕಲಬುರ್ಗಿ ಮಾತನಾಡಿ, ದೇವರ ದಾಸಿಮಯ್ಯ ರಾಮನಾಥ ಅಂಕಿತ ನಾಮದೊಂದಿಗೆ ಬಹಳಷ್ಟು ವಚನಗಳನ್ನು ರಚಿಸಿದ್ದಾರೆ. ರಚಿಸಿದ ವಚನಗಳು ಅರ್ಥ ಸಾರಾಂಶವನ್ನು ತಿಳಿದುಕೊಂಡು ಧ್ಯಾನಕ್ಕೆ ಮಹತ್ವವನ್ನು ನೀಡಬೇಕು. ಸರಳ, ಸುಲಲಿತ, ವಚನ ಸಾಹಿತ್ಯದ ತತ್ವಗಳು, ಅವರ ಬದುಕಿನ ನೀತಿ ಪಾಠಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಮುಂದಿನ ಪೀಳಿಗೆಗೆ ವಚನ ಸಾಹಿತ್ಯದ ಚರಿತ್ರೆಯನ್ನು ತಿಳಿಸುವ ಮೂಲಕ ನಾವೆಲ್ಲರೂ ಜಗತ್ತಿಗೆ ಸಾರಬೇಕು ಎಂದು ಹೇಳಿದರು.

ಶಿರಸ್ತೇದಾರ ದೇವರೆಡ್ಡಿ, ಹನಮಗೌಡ ಪಾಟೀಲ, ಮಹ್ಮದ್ ದಾದುಫೀರ, ಬಸವರಾಜ, ಜ್ಯೋತಿ, ಹುಸೇನಸಾಬ್, ಸುರೇಶ್ ಹನುಮಂತ ಛಾವಣಿ, ಸಮಾಜದ ಪ್ರಮುಖರಾದ ಶಿವಪ್ಪ ದಿಬ್ಬದ, ಗುರುರಾಜ ಹರ್ತಿ, ಚಂದ್ರಶೇಖರ ಮರದಡ್ಡಿ, ನಿಂಗಪ್ಪ ದಿಬ್ಬದ, ಶರಣಪ್ಪ ಮಾಳಗಿ, ಮಲ್ಲಪ್ಪ ಮಾಳಗಿ, ಗಂಗಪ್ಪ, ಪರಪ್ಪ ಕುರುಹಿನ ಶೆಟ್ಟಿ, ಸಂಗಪ್ಪ ದಿಬ್ಬದ ಇದ್ದರು.

ಶಿವಸಮಸಾಲಿ ಸಮಾಜದಿಂದ ದೇವರ ದಾಸಿಮಯ್ಯ ಜಯಂತಿ:

ಕುಷ್ಟಗಿ ತಾಲೂಕಿನ ಕೇಸೂರು ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಶಿವಸಮಸಾಲಿ ಸಮಾಜದ ವತಿಯಿಂದ ದೇವರ ದಾಸಿಮಯ್ಯನವರ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ಆದಪ್ಪ ಸಾಲವಾಡಗಿ, ಸಮಾಜದ ಅಧ್ಯಕ್ಷ ಮಲ್ಲನಗೌಡ ಟೆಂಗುಂಟಿ, ಅಮರೇಶ ಬಳಿಗೇರ, ಬಸವರಾಜ ತಾಳಿಕೋಟಿ, ನೀಲಕಂಠಪ್ಪ ಬಳಿಗೇರ, ಮಲಕನಗೌಡ ಟೆಂಗುಂಟಿ, ಗುಂಡಪ್ಪ ಬಳಿಗೇರ, ಚಂದ್ರು ತಂಗಡಗಿ, ಯಚರಪ್ಪ ತಂಗಡಗಿ ಇತರರು ಇದ್ದರು.

Share this article