ದೇವರಹಿಪ್ಪರಗಿ ಸಮಗ್ರ ಅಭಿವೃದ್ಧಿಗೆ ಬದ್ಧ

KannadaprabhaNewsNetwork |  
Published : May 28, 2026, 02:45 AM IST
ತಾಳಿಕೋಟೆ  1 | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆಗ್ಯಾರಂಟಿ ಯೋಜನೆಗಳಿಂದ ಅನುದಾನದ ಕೊರತೆ ಸಾಕಷ್ಟು ಇದ್ದು, ಇದರ ಮಧ್ಯೆಯೂ ಸಹ ಮತಕ್ಷೇತ್ರದ ಅಭಿವೃದ್ಧಿ ಮಾಡಬೇಕೆಂಬ ಗುರಿ ಹೊಂದಿದ್ದೇನೆ ಎಂದು ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಗ್ಯಾರಂಟಿ ಯೋಜನೆಗಳಿಂದ ಅನುದಾನದ ಕೊರತೆ ಸಾಕಷ್ಟು ಇದ್ದು, ಇದರ ಮಧ್ಯೆಯೂ ಸಹ ಮತಕ್ಷೇತ್ರದ ಅಭಿವೃದ್ಧಿ ಮಾಡಬೇಕೆಂಬ ಗುರಿ ಹೊಂದಿದ್ದೇನೆ ಎಂದು ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಹೇಳಿದರು.

ತಾಲೂಕಿನ ಮೈಲೇಶ್ವರ ಗ್ರಾಮದಲ್ಲಿ ಜಿಪಂ, ತಾಪಂ, ರಾಜ್ಯ ಹಣಕಾಸು ಆಯೋಗ ಅನಿರ್ಬಂಧಿತ ಅನುದಾನದಲ್ಲಿ ₹18 ಲಕ್ಷ ವೆಚ್ಚದಲ್ಲಿ ನೂತನ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಹಾಗೂ ₹ 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಮತಕ್ಷೇತ್ರದಲ್ಲಿ ಅನೇಕ ಕೆಲಸಗಳು ಆಗಬೇಕಿದೆ. ಗ್ಯಾರಂಟಿ ಯೋಜನೆಯಿಂದ ಅನುದಾನ ಸಿಗುವುದರಲ್ಲಿ ಕೊರತೆ ಉಂಟಾಗುತ್ತದೆ. ಸಿಕ್ಕ ಅನುದಾನದಲ್ಲಿ ಕ್ಷೇತ್ರದ ಜನರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಮಡುಸಾಹುಕಾರ ಬಿರಾದಾರ ಮಾತನಾಡಿ, ಶಾಸಕ ರಾಜುಗೌಡ ಪಾಟೀಲ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂದರು. ಮೈಲೇಶ್ವರ ಗ್ರಾಮಸ್ಥರಿಂದ ಶಾಸಕ ರಾಜುಗೌಡ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಬಸ್ಸಯ್ಯ ಹಿರೇಮಠ, ನಿಂಗನಗೌಡ ಬಿರಾದಾರ, ಎಂ.ಎಂ.ಪಾಟೀಲ, ರಾಜುಗೌಡ ಕೊಳೂರ, ರಾಮನಗೌಡ ಕೊಳೂರ, ಪ್ರಭುಗೌಡ ನಾಡಗೌಡ, ವಿಶ್ವನಾಥರೆಡ್ಡಿ ನಾಡಗೌಡ, ಪಂಚಾಕ್ಷರಿ ಹಿರೇಮಠ, ಶಂಕರಗೌಡ ದೇಸಾಯಿ, ಸಿದ್ದನಗೌಡ ಬಿರಾದಾರ, ಅಯ್ಯನಗೌಡ ಪಾಟೀಲ, ಮಲ್ಲನಗೌಡ ಬಿರಾದಾರ, ಸೋಮನಗೌಡ ಯಾಳವಾರ, ವಿರೇಶಗೌಡ ಕಾರನೂರ, ಮಲ್ಲನಗೌಡ ಯಾಳಗಿ, ರಾಜುಗೌಡ ಯಾಳಗಿ, ರಾಮನಗೌಡ ಪಾಟೀಲ, ಸಿದ್ದರಾಮಪ್ಪ ಚೌದ್ರಿ, ಶರಣಪ್ಪ ಇಲಕಲ್ಲ, ನಾಗಣ್ಣ ದೇಸಾಯಿ, ಬಾಳಾಸಾಹೇಬ ಕೋರಿ, ಸುಭಾಸ ಮುಗಳಿ, ಮಂಜು ಮೈಲೇಶ್ವರ, ಶಂಕರಗೌಡ ಚೌದ್ರಿ, ಈಶ್ವರಪ್ಪ ರಂಜಣಗಿ, ಇಷ್ಟಲಿಂಗ ಹೆಬ್ಬಾಳ, ಯಮನೂರಪ್ಪ ದೊಡಮನಿ, ಕಾಶಿರಾಯ ದೇಸಾಯಿ, ಉಮೇಶ ಬೂದಿಹಾಳ, ಶಿವಲಿಂಗಪ್ಪ ಕುಳಗೇರಿ, ಭೀಮನಗೌಡ ಕುಳಗೇರಿ, ರಾಮನಗೌಡ ಬಿರಾದಾರ, ಕಾಶಿನಾಥ ಕುಳಗೇರಿ, ಅಪ್ಪು ಕುಳಗೇರಿ, ಮಲ್ಲು ಕುಳಗೇರಿ, ಅಶೊಕ ದೊಡಮನಿ, ಬಸವರಾಜ ಶಳ್ಳಗಿ, ಪಿಡಿಒ ಪ್ರಭು ಚನ್ನೂರ ಇತರರು ಇದ್ದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಮಧ್ಯೆ ಯಾವ ಶಾಸಕರಿಗೂ ಅನುದಾನ ಸಿಗುವುದು ಕಷ್ಟವಾಗಿದೆ. ಇದರ ಮಧ್ಯೆ ವಿರೋಧ ಪಕ್ಷದಲ್ಲಿ ಇದ್ದುಕೊಂಡೆ ಎಲ್ಲ ಗ್ರಾಮಗಳಿಗೂ ಮೂಲ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಇದಕ್ಕೆ ಮತಕ್ಷೇತ್ರದ ಜನರ ಸಹಕಾರ ನಾನು ಎಂದಿಗೂ ಮರೆಯಲಾರೆ.

-ರಾಜುಗೌಡ ಪಾಟೀಲ, ಶಾಸಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧರ್ಮ ಉಳಿಕೆಯಲ್ಲಿ ಬಣಜಿಗರ ಕೊಡಗೆ ಸ್ಮರಣಾರ್ಹ
ನಗರಸಭೆಗೆ ಬೀಗ ಜಡಿದು ಬಿಜೆಪಿ ಪ್ರತಿಭಟನೆ