ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಪಟ್ಟಣದ ರೋಟರಿ ಭವನದಲ್ಲಿ ತಾಲೂಕು ಕಸಾಪ ವತಿಯಿಂದ ಏರ್ಪಡಿಸಿದ್ದ ಡಿ. ದೇವರಾಜ ಅರಸು ಅವರ ನೆನೆಪು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ತಮ್ಮ ಅಧಿಕಾರವಧಿಯಲ್ಲಿ ಕನ್ನಡವನ್ನು ಆಡಳಿತಭಾಷೆ ಮಾಡಿದ ಕೀರ್ತಿ ಪಡೆದ ಅರಸರು, ಭೂ ಸುಧಾರಣೆ ಕಾಯ್ದೆ, ಉಳುವವನೆ ಭೂಮಿ ಒಡೆಯ, ಜೀತ ಪದ್ದತಿ ವಿರುದ್ದ ಕಾನೂನು, ಮಲಹೊರುವ ಪದ್ದತಿ ವಿರುದ್ದ ಹೋರಾಟ, ಋಣಭಾರ ಕಾಯ್ದೆ, ಭಾಗ್ಯ ಜ್ಯೋತಿಯಂತಹ ಹತ್ತು ಹಲವು ಕಾನೂನುಗಳ ಮೂಲಕ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಬಡಜನತೆಗೆ ನ್ಯಾಯ ಒದಗಿಸುವ ಕೆಲಸ ಮಾಡಿ ಸಾಮಾಜಿಕ ನ್ಯಾಯದ ಹಾಗೂ ಪರಿವರ್ತನೆಯ ಹರಿಕಾರ ಎನಿಸಿಕೊಂಡ ಭರತ ಖಂಡದ ಏಕೈಕ ಮುಖ್ಯಮಂತ್ರಿ ಎನಿಸಿದ್ದಾರೆ ಎಂದರು.ರಾಜ್ಯದ ಎಲ್ಲಾ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಶಾಲ ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡಿ ಕ್ರಾಂತಿ ಮಾಡಿದ ಡಿ. ದೇವರಾಜು ಅರಸರ ವಿಚಾರಧಾರೆ, ಸಂದೇಶ ಹಾಗೂ ಮಾರ್ಗದರ್ಶನ ಇಂದಿನ ಯುವಜನತೆ ಎದೆಯೊಳಗೆ ಬಿಟ್ಟುಕೊಂಡು ಮುಂದೆ ಬಂದಲ್ಲಿ ಸುಂದರ ಸಮಾಜದೊಂದಿಗೆ ಅಭಿವೃದ್ಧಿಯ ಸಮ ಸಮಾಜ ನಿರ್ಮಿಸಬಹುದು ಎಂದರು.
ರೋಟರಿ ಕಾರ್ಯದರ್ಶಿ ಅಶೋಕ್ ಕುಮಾರ್, ಮಾಜಿ ಅಧ್ಯಕ್ಷ ದಯಾನಂದ್, ಮಿರ್ಲೆ ರಾಧಾಕೃಷ್ಣ, ರಾಮಕೃಷ್ಣ, ಸಾಹಿತಿ ಚವ್ಹಾಣ್, ಹರೀಶ್, ವ್ಯಾನ್ ಸುರೇಶ್, ಹೆಗ್ಗಂದೂರು ಪ್ರಭಾಕರ್, ರೈತ ಸಂಘದ ಗೌರವಾಧ್ಯಕ್ಷ ಕುಮಾರ್, ಭಾಸ್ಕರ್, ಬಿಎಸ್‌ಎನ್‌ಎಲ್ ಕೃಷ್ಣ, ರಾಮಶೆಟ್ಟಿ, ಯೋಗೇಶ್ ಮೊದಲಾದವರು ಪಾಲ್ಗೊಂಡಿದ್ದರು.