ಅರಸು, ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಸಾರಥಿಗಳು: ಶಿವಲೀಲಾ

KannadaprabhaNewsNetwork |  
Published : Jan 07, 2026, 02:15 AM IST
ಶಿವಲೀಲಾ ಕುಲಕರ್ಣಿ | Kannada Prabha

ಸಾರಾಂಶ

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅರಸು ಅವರ ದಾಖಲೆ ಸರಿಗಟ್ಟಿದ್ದು ದಾಖಲೆಯೇ ಸರಿ. ಅರಸು ಅವರ ಆಡಳಿತವು ಕೇವಲ ಅಧಿಕಾರ ನಿರ್ವಹಣೆಯಾಗಿರದೆ, ಶೋಷಿತ ವರ್ಗಗಳ ಬಿಡುಗಡೆಯ ಹಾದಿಯಾಗಿತ್ತು.

ಧಾರವಾಡ:

ಕರ್ನಾಟಕದ ಇತಿಹಾಸದಲ್ಲಿ ದನಿ ಇಲ್ಲದವರಿಗೆ ದನಿಯಾದ ಇಬ್ಬರು ಅಪರೂಪದ ಮುತ್ಸದ್ಧಿಗಳೆಂದರೆ ಡಿ. ದೇವರಾಜು ಅರಸು ಮತ್ತು ಸಿದ್ದರಾಮಯ್ಯ. ಅರಸು ರಾಜ್ಯದ ಸಾಮಾಜಿಕ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಯ ಬೀಜ ಬಿತ್ತಿದರೆ, ಸಿದ್ದರಾಮಯ್ಯನವರು ಆ ಆಶಯಗಳಿಗೆ ಸಂವಿಧಾನದ ಚೌಕಟ್ಟಿನಲ್ಲಿ ಜೀವ ತುಂಬುತ್ತಿದ್ದಾರೆ ಎಂದು ರಾಜ್ಯ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅರಸು ಅವರ ದಾಖಲೆ ಸರಿಗಟ್ಟಿದ್ದು ದಾಖಲೆಯೇ ಸರಿ. ಅರಸು ಅವರ ಆಡಳಿತವು ಕೇವಲ ಅಧಿಕಾರ ನಿರ್ವಹಣೆಯಾಗಿರದೆ, ಶೋಷಿತ ವರ್ಗಗಳ ಬಿಡುಗಡೆಯ ಹಾದಿಯಾಗಿತ್ತು. ಭೂಮಿಯನ್ನು ಯಾರು ಉಳುತ್ತಾರೋ, ಅವರೇ ಅದರ ಮಾಲೀಕರು " ಎಂಬ ಐತಿಹಾಸಿಕ ಕ್ರಾಂತಿಯ ಮೂಲಕ ಲಕ್ಷಾಂತರ ಭೂಹೀನ ಕುಟುಂಬಗಳಿಗೆ ಘನತೆಯ ಬದುಕು ನೀಡಿದರು. ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ವಂಚಿತ ಸಮುದಾಯಗಳಿಗೆ ಮೊದಲ ಬಾರಿಗೆ ರಾಜಮಾರ್ಗ ತೆರೆದರು. ಜೀತಕ್ಕೆ ಮುಕ್ತಿ ನೀಡಿದ ವ್ಯಕ್ತಿ ಎಂದರು.

ಇನ್ನು, ಅರಸು ಅವರು ಕಟ್ಟಿಕೊಟ್ಟ ಸಾಮಾಜಿಕ ನ್ಯಾಯದ ತಳಹದಿಯ ಮೇಲೆ, ಸಿದ್ದರಾಮಯ್ಯನವರು ಸಮಕಾಲೀನ ಕರ್ನಾಟಕವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುತ್ತಿದ್ದಾರೆ. ಹಸಿವು ಮುಕ್ತ ಸಂಕಲ್ಪ ಮಾಡಿ ಅನ್ನಭಾಗ್ಯ'''''''' ಯೋಜನೆ ನೀಡಿದರು. ಆರ್ಥಿಕ ನ್ಯಾಯಕ್ಕಾಗಿ ಪಂಚ ಗ್ಯಾರಂಟಿ ಜಾರಿಗೆ ತಂದು ಸಾಮಾನ್ಯ ಜನರ ಆರ್ಥಿಕತೆ ಹೆಚ್ಚಿಸುತ್ತಿದ್ದಾರೆ. ಒಟ್ಟಾರೆ, ಇವರಿಬ್ಬರ ಆಡಳಿತ ''''''''ಸಾಮಾನ್ಯ ಮನುಷ್ಯನ ಹಿತಾಸಕ್ತಿ ಎಂದು ಶಿವಲೀಲಾ ವಿನಯ ಕುಲಕರ್ಣಿ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರ್ಥಪೂರ್ಣ ಗಣರಾಜ್ಯೋತ್ಸವ ಆಚರಣೆಗೆ ನಿರ್ಧಾರ
ದ್ವೇಷ ಭಾಷಣ ತಡೆ ಬಿಲ್‌ ತಮ್ಮ ಬಳಿಯೇ ಇಟ್ಟುಕೊಂಡ ಗೌರ್‍ನರ್‌