ಮಹಿಳಾ ಮೀಸಲಾತಿ ಹರಿಕಾರ ದೇವೇಗೌಡ: ಜೆ.ಕೆ.ಕೃಷ್ಣಾರೆಡ್ಡಿ

KannadaprabhaNewsNetwork |  
Published : Mar 26, 2026, 01:15 AM IST
 ಸಿಕೆಬಿ-4  ನಗರದ ಸಿದ್ದೇಶ್ವರ ಸಮುದಾಯ ಭವನದಲ್ಲಿ ಜೆ  ಡಿ ಎಸ್ ಪಕ್ಷದಿಂದ ಎಸ್ ಐ ಆರ್ ಸಮೀಕ್ಷೆ ಬಗ್ಗೆ ಪಕ್ಷದ ಬಿ ಎಲ್ ಎ  ಗಳಿಗೆ ನಡೆದ ಕಾರ್ಯಗಾರದಲ್ಲಿ ಜೆ.ಕೆ.ಕೃಷ್ಣಾರೆಡ್ಡಿ ಮಾತನಾಡಿದರು | Kannada Prabha

ಸಾರಾಂಶ

ರಾಜ್ಯಸಭೆಯಲ್ಲಿ ಅಂಗಿಕಾರ ಸಿಗದೇ ನೆನಗುದಿಗೆ ಬಿದ್ದಿದ್ದ ಮಹಿಳಾ ಮೀಸಲಾತಿ ಬಿಲ್ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಬಿಲ್ ಮಂಡಿಸಿ ಪಾಸ್ ಮಾಡಿಸಿದರು.

ಎಸ್ಐಆರ್ ಸಮೀಕ್ಷೆ ಬಗ್ಗೆ ಜೆಡಿಎಸ್‌ ಪಕ್ಷದ ಬೂತ್ ಲೆವೆಲ್ ಎಜೇಂಟ್ (ಬಿಎಲ್ಎ) ಗಳಿಗೆ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

1996ರಲ್ಲಿ ಪ್ರಧಾನಿಯಾಗಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಜಾರಿಗೆ ತಂಡ ಮಹಿಳಾ ಮೀಸಲಾತಿಗೆ ರಾಜ್ಯಸಭೆಯಲ್ಲಿ ಅಂಗಿಕಾರ ಸಿಗದೇ ನೆನಗುದಿಗೆ ಬಿದ್ದಿದ್ದ ಮಹಿಳಾ ಮೀಸಲಾತಿ ಬಿಲ್ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಬಿಲ್ ಮಂಡಿಸಿ ಪಾಸ್ ಮಾಡಿಸಿದರು. ಅದರ ಪ್ರತಿಫಲ ಮುಂದಿನ ವಿಧಾನಸಭೆಗೆ 60ರಿಂದ 70 ಜನ ಮಹಿಳೆಯರು, ಲೋಕಸಭೆಗೆ 170 ಜನ ಮಹಿಳೆಯರು ಎಂ ಎಲ್ ಎ ಹಾಗೂ ಎಂಪಿ ಗಳಾಗಿ ಆಯ್ಕೆಯಾಗುತ್ತಾರೆ. ಇದು ಮಣ್ಣಿನ ಮಗ ದೇವೇಗೌಡ ಸಾಧನೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜೆ.ಕೆ.ಕೃಷ್ಣಾರೆಡ್ಡಿ ಅಭಿಪ್ರಾಯಪಟ್ಟರು.

ನಗರದ ಸಿದ್ದೇಶ್ವರ ಸಮುದಾಯ ಭವನದಲ್ಲಿ ಜೆಡಿಎಸ್ ಪಕ್ಷದಿಂದ ಎಸ್ಐಆರ್ ಸಮೀಕ್ಷೆ ಬಗ್ಗೆ ಪಕ್ಷದ ಬೂತ್ ಲೆವೆಲ್ ಎಜೇಂಟ್ (ಬಿಎಲ್ಎ) ಗಳಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕರ್ನಾಟಕ ದಲ್ಲಿ ಅದೆಷ್ಟೋ ಪ್ರಾದೇಶಿಕ ಪಕ್ಷಗಳು ಹುಟ್ಟಿದರೂ ಯಾವ ಪಕ್ಷವು ಉಳಿಯಲಿಲ್ಲ. ಜೆಡಿಎಸ್ ಪಕ್ಷ ಮಾತ್ರವೇ ಉಳಿದು ಬೆಳೆದು ರಾಜಕೀಯ ಪಕ್ಷವಾಗಿ 25 ವರ್ಷಗಳು ಪೂರೈಸಿ, ಜನಮಾನಸದಲ್ಲಿ ಉಳಿದುಕೊಂಡಿದೆ. ಇಲ್ಲಿ ಗೆದ್ದು ಶಾಸಕರಾಗಿ ಸಚಿವರಾಗಿ, ಉಪ ಮುಖ್ಯಮಂತ್ರಿಗಳಾಗಿ ಬೇರೆ ಬೇರೆ ಪಕ್ಷಗಳಿಗೆ ಮುಖಂಡರು ಪಲಾಯನ ಮಾಡಿದರು. ಕಾರ್ಯಕರ್ತರು ಮಾತ್ರ ಗಟ್ಟಿಯಾಗಿ ಉಳಿದುಕೊಂಡಿದ್ದಾರೆ ಎಂದರು.

ರಾಜ್ಯ ವಕ್ತಾರ ದೇವರಾಜ್ ಮಾತನಾಡಿ, ಕೇಂದ್ರ ಚುನಾವಣಾ ಆಯೋಗ ಪ್ರಾರಂಭಿಸಿರುವ ಎಸ್ಐಆರ್ ನಿಂದ ಪರಿಶುದ್ಧ ಮತಪಟ್ಟಿ ತಯಾರಾಗಲಿದೆ. ಈ ಪರಿಷ್ಕರಣೆಯಲ್ಲಿ ಪಕ್ಷದ ಎಜೇಂಟರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಮನೆ ಮನೆ ಭೇಟಿಕೋಟ್ಟು ಮತ ಪರಿಷ್ಕರಣೆ ವೇಳೆ ಮೊದಲ ಹಂತದ ಚುನಾವನಾ ಪ್ರಚಾರ ಮಾಡಿದಂತಾಗುತ್ತದೆ. ಕುಮಾರಣ್ಣ ನನ್ನ ಮತ್ತೆ ಸಿಎಂ ಆಗಿ ನೋಡಬೇಕಾದರೆ ನಮ್ಮ ಗೆಲುವು ಅನಿವಾರ್ಯ ಅದಕ್ಕೆ ಕಾಂಗ್ರೆಸ್‌ನವರು ಮಾಡುವ ಅಪಪ್ರಚಾರದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತಮುನಿಯಪ್ಪ, ರಾಜ್ಯ ಉಪಾಧ್ಯಕ್ಷ ನಾರಾಯಣಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಆರ್.ರೆಡ್ಡಿ, ಮುಖಂಡರಾದ ಪ್ರಭಾನಾರಾಯಣಗೌಡ, ಗೌರಿಬಿದನೂರು ನರಸಿಂಹಮುರ್ತಿ,ಮಹಿಳಾ ತಾಲೂಕು ಅಧ್ಯಕ್ಷೆ ಅರುಣಾ, ಸ್ಟುಡಿಯೋ ಮಂಜು, ಅಕಿಲ್ ರೆಡ್ಡಿ, ಮಂಚೇನಹಳ್ಳಿ ಅಧ್ಯಕ್ಷ ಪ್ರಕಾಶ್, ವಾಸುದೇವ್ ಮತ್ತಿತರರು ಇದ್ದರು.

ಸಿಕೆಬಿ-4 ನಗರದ ಸಿದ್ದೇಶ್ವರ ಸಮುದಾಯ ಭವನದಲ್ಲಿ ಜೆ ಡಿ ಎಸ್ ಪಕ್ಷದಿಂದ ಎಸ್ ಐ ಆರ್ ಸಮೀಕ್ಷೆ ಬಗ್ಗೆ ಪಕ್ಷದ ಬಿ ಎಲ್ ಎ ಗಳಿಗೆ ನಡೆದ ಕಾರ್ಯಗಾರದಲ್ಲಿ ಜೆ.ಕೆ.ಕೃಷ್ಣಾರೆಡ್ಡಿ ಮಾತನಾಡಿದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಮಾರಣ್ಣ ಸಿಎಂ ಆಗಲು ಸಂಕಲ್ಪ ಮಾಡಿ
ಕಲೆ ಮಾನವನ ಉನ್ನತಿಗೆ, ಸಂತೋಷಕ್ಕೆ ಕಾರಣ