ರಾಜ್ಯದ ಹಲವು ನೀರಾವರಿ ಸಮಸ್ಯೆಗಳಿಗೆ ದೇವೇಗೌಡರಿಂದ ಪರಿಹಾರ

KannadaprabhaNewsNetwork | Published : May 21, 2025 12:24 AM
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನಟರಾಜ್ ನಾಕಲಗೂಡು ಮಾತನಾಡಿ, ಎಚ್.ಡಿ.ದೇವೇಗೌಡರು ಅಧಿಕಾರಕ್ಕೆ ಅಂಟಿಕೂರದೆ ನಿರಂತರ ಕಾವೇರಿ ಹೋರಾಟ ಸೇರಿದಂತೆ ರೈತ ಪರ ನಿಂತವರು. ಪ್ರಧಾನಿ ಮೋದಿಯವರು ಸಹ ದೇವೇಗೌಡರಿಂದ ಸಲಹೆ ಪಡೆಯುತ್ತಾರೆ. ನಮ್ಮ ಜಿಲ್ಲೆಯ ಹಲವು ತಾಲೂಕುಗಳಿಗೆ ಹೇಮಾವತಿ ನೀರು ತಂದು ಕೃಷಿಗೆ ಅನುಕೂಲ ಮಾಡಿಕೊಟ್ಟು ರೈತರ ಬದುಕಿಗೆ ಆಶಾಕಿರಣವಾಗಿದ್ದಾರೆ. ಇಂತಹ ಧೀಮಂತ ನಾಯಕರಿಗೆ ಭಗವಂತ ಮತ್ತಷ್ಟು ಆಯಸ್ಸು ನೀಡುವ ಮೂಲಕ ನಮ್ಮಂತಹ ಯುವಕರಿಗೆ ಮಾರ್ಗದರ್ಶನ ನೀಡುವಂತಾಗಲಿ ಎಂದರು.
Follow Us

ಕನ್ನಡಪ್ರಭ ವಾರ್ತೆ ಆಲೂರುಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ 93ನೇ ಜನ್ಮದಿನವನ್ನು ತಾಲೂಕು ಜೆಡಿಎಸ್ ಅಧ್ಯಕ್ಷ ಕೆ ಎಸ್ ಮಂಜೇಗೌಡ ನೇತೃತ್ವದಲ್ಲಿ ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡುವ ಮೂಲಕ ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಜೆಡಿಎಸ್ ಅಧ್ಯಕ್ಷ ಕೆ ಎಸ್ ಮಂಜೇಗೌಡ, ಮಣ್ಣಿನ ಮಗ ದೇವೇಗೌಡರು ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಕರ್ನಾಟಕ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲೂ ನೀರಾವರಿ ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ಹಳ್ಳಿಯ ಕನ್ನಡಿಗ, ರೈತರ ಮಣ್ಣಿನ ಮಕ್ಕಳು ಸಹ ಪ್ರಧಾನಿ ಹುದ್ದೆ ನಿಭಾಯಿಸಬಲ್ಲರು ಎಂಬುದನ್ನು ತೋರಿಸಿದ್ದಾರೆ, ದೇಶ ಕಂಡ ಮುತ್ಸದ್ಧಿ ರಾಜಕಾರಣಿ ದೇವೇಗೌಡರು ಆರೋಗ್ಯವಂತರಾಗಿ ಬಾಳಿ ಬದುಕಿ, ಯುವ ನಾಯಕರಿಗೆ ಮಾರ್ಗದರ್ಶನ ನೀಡಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನಟರಾಜ್ ನಾಕಲಗೂಡು ಮಾತನಾಡಿ, ಎಚ್.ಡಿ.ದೇವೇಗೌಡರು ಅಧಿಕಾರಕ್ಕೆ ಅಂಟಿಕೂರದೆ ನಿರಂತರ ಕಾವೇರಿ ಹೋರಾಟ ಸೇರಿದಂತೆ ರೈತ ಪರ ನಿಂತವರು. ಪ್ರಧಾನಿ ಮೋದಿಯವರು ಸಹ ದೇವೇಗೌಡರಿಂದ ಸಲಹೆ ಪಡೆಯುತ್ತಾರೆ. ನಮ್ಮ ಜಿಲ್ಲೆಯ ಹಲವು ತಾಲೂಕುಗಳಿಗೆ ಹೇಮಾವತಿ ನೀರು ತಂದು ಕೃಷಿಗೆ ಅನುಕೂಲ ಮಾಡಿಕೊಟ್ಟು ರೈತರ ಬದುಕಿಗೆ ಆಶಾಕಿರಣವಾಗಿದ್ದಾರೆ. ಇಂತಹ ಧೀಮಂತ ನಾಯಕರಿಗೆ ಭಗವಂತ ಮತ್ತಷ್ಟು ಆಯಸ್ಸು ನೀಡುವ ಮೂಲಕ ನಮ್ಮಂತಹ ಯುವಕರಿಗೆ ಮಾರ್ಗದರ್ಶನ ನೀಡುವಂತಾಗಲಿ ಎಂದರು.ಜಿಲ್ಲಾ ಹಿಂದುಳಿದ ವರ್ಗಗಳ ಹಿರಿಯ ಮುಖಂಡ ಬಿ‌.ಸಿ ಶಂಕರಾಚಾರ್ ಮಾತನಾಡಿ, ಛಲಕ್ಕೆ, ರಾಜಕೀಯ ಚಾಣಾಕ್ಷತನಕ್ಕೆ, ಹೆಸರಾದ ಮಾಜಿ ಪ್ರಧಾನಿಗಳು, ಜೆಡಿಎಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಹೋರಾಟಗಾರರು ಹಾಗೂ ರೈತರ ಹಿತಚಂತಕರಾದ ಎಚ್. ಡಿ. ದೇವೇಗೌಡ ಅವರು ಯುವಕರಿಗೆ ಮಾದರಿಯಾಗಿದ್ದಾರೆ. ದೇವೇಗೌಡರ ಜೀವನ ಅನುಕರಣೀಯವಾಗಿದೆ. ಅವರ ಅಧಿಕಾರದ ಕಾಲದಲ್ಲಿ ರೈತರಿಗೆ ನೀರಾವರಿ ಯೋಜನೆಗಳು, ಮಹಿಳಾ ಮೀಸಲಾತಿ, ಅಲ್ಪಸಂಖ್ಯಾತರಿಗೆ ಮೀಸಲಾತಿ, ಹೀಗೆ ಹತ್ತು ಹಲವು ಯೋಜನೆಗಳನ್ನು ಸಾಮಾಜಿಕ ಕಳಕಳಿ ಉಳ್ಳ ಯೋಜನೆಗಳನ್ನು ಜಾರಿ ಮಾಡಿದ್ದರು ಎಂದರು.ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯೆ ನಂಜಮ್ಮ ಮುಂಜೇಗೌಡ, ತಾ.ಪಂ ಮಾಜಿ ಸದಸ್ಯ ಸಿ.ವಿ ಲಿಂಗರಾಜು, ಹಾಸನ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಪಿ.ಎಲ್ ನಿಂಗರಾಜು, ಹಾಸನ ಜಿಲ್ಲಾ ಸಹಕಾರ ಒಕ್ಕೂಟಗಳ ಅಧ್ಯಕ್ಷ ಪ್ರಕಾಶ್, ಪಪಂ ಮಾಜಿ ಅಧ್ಯಕ್ಷರಾದ ಡಿ.ಎಸ್ ಜಯಣ್ಣ, ಎಚ್. ಬಿ ಧರ್ಮರಾಜು, ಮುಖಂಡರಾದ ಕದಾಳು ರಾಜಪ್ಪ ಗೌಡ, ಕೆ.ವಿ ಮಲ್ಲಿಕಾರ್ಜುನ, ಸುರೇಶ, ಅರಸಪ್ಪ, ಬಸವರಾಜು, ಎಸ್.ಎನ್ ಪ್ರಕಾಶ್, ಲಿಂಗರಾಜಗೌಡ, ದೇವೇಗೌಡ, ಶ್ರೀಧರ ಕಿರಗಡಲು, ಜಯಪ್ಪ ಪಾಳ್ಯ, ಅಶ್ವತ್‌ ಸಿಂಗಾಪುರ, ಜಯಪಾಲು, ಕಾಂತರಾಜು, ಕುಮಾರ ಮುಂತಾದವರು ಹಾಜರಿದ್ದರು.