ಮಕ್ಕಳಲ್ಲಿ ಉತ್ತಮ ಅಭಿರುಚಿ ಬೆಳೆಸಿ: ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ

KannadaprabhaNewsNetwork |  
Published : May 09, 2025, 12:39 AM IST
ಶೇಷಗಿರಿಯಲ್ಲಿ ರಂಗ ತರಬೇತಿ ಸಮಾರೋಪವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ಉದ್ಘಾಟಿಸಿದರು. | Kannada Prabha

ಸಾರಾಂಶ

ಮಕ್ಕಳಿಗೆ ಒಳ್ಳೆಯ ಅಭಿರುಚಿ ಕಲಿಸಬೇಕಾಗಿದೆ. ಚಿತ್ರಕಲೆ, ಸಂಗೀತ, ನಾಟಕ ಕೌಶಲ್ಯಗಳನ್ನು ಬೆಳೆಸಬೇಕು. ಮನರಂಜನೆಯಲ್ಲಿಯೇ ಶಿಕ್ಷಣವೂ ಒಂದು ಭಾಗವಾಗವೇಕು.

ಹಾನಗಲ್ಲ: ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವ ಮಕ್ಕಳ ಶಿಬಿರಗಳು ಅವರ ಮನೋವಿಕಾಸಕ್ಕೆ ಸಹಕಾರಿಯಾಗಿ ಬುದ್ಧಿ ಚಾತುರ್ಯಕ್ಕೆ ಉತ್ತೇಜನ ನೀಡಬಲ್ಲವು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ತಿಳಿಸಿದರು.ತಾಲೂಕಿನ ರಂಗ ಗ್ರಾಮ ಶೇಷಗಿರಿಯ ಸಿ.ಎಂ. ಉದಾಸಿ ಕಲಾಕ್ಷೇತ್ರದಲ್ಲಿ ಗಜನನ ಯುವಕ ಮಂಡಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ಒಂದು ತಿಂಗಳ ಚಿಣ್ಣರ ಕಲರವ ಮಕ್ಕಳ ರಂಗ ತರಬೇತಿ ಸಮಾರೋಪ ಸಮಾರಂಭ ಹಾಗೂ ಮಕ್ಕಳ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಒಳ್ಳೆಯ ಅಭಿರುಚಿ ಕಲಿಸಬೇಕಾಗಿದೆ. ಚಿತ್ರಕಲೆ, ಸಂಗೀತ, ನಾಟಕ ಕೌಶಲ್ಯಗಳನ್ನು ಬೆಳೆಸಬೇಕು. ಮನರಂಜನೆಯಲ್ಲಿಯೇ ಶಿಕ್ಷಣವೂ ಒಂದು ಭಾಗವಾಗವೇಕು ಎಂದರು.ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಂಗ ಕಲಾವಿದ ಪ್ರಭು ಗುರಪ್ಪನವರ ಮಾತನಾಡಿ, 30 ವರ್ಷಗಳಿಂದ ಇಲ್ಲಿ ಮಕ್ಕಳ ರಂಗ ತರಬೇತಿ ನಡೆಯುತ್ತಿದೆ. ವ್ಯಾಯಾಮ, ಶಿಸ್ತು, ಸಂಯಮ, ಏಕಾಗ್ರತೆ, ಸ್ವಚ್ಛತೆಗಳನ್ನು ಕಲಿಸುವುದರ ಜತೆಗೆ ರಂಗಭೂಮಿ ಮೂಲಕ ಮನುಷ್ಯನಾಗುವುದರ ಅರಿವು ಮೂಡಿಸಲಾಗುತ್ತಿದೆ ಎಂದರು.ಸಾಮಾಜಿಕ ಕಾರ್ಯಕರ್ತೆ ಅಂಬಿಕಾ ಹಂಚಾಟೆ ಮಾತನಾಡಿ, ಮಕ್ಕಳ ಬಾಲ್ಯತನ ಕಸಿದುಕೊಳ್ಳುವ ಕೆಲಸ ಬೇಡ. ಆಟದಲ್ಲಿ ಪಾಠ ಹೇಳಬೇಕು. ಮನಶುದ್ಧಿಗೆ ರಂಗ ಸಾಂಸ್ಕೃತಿಕ ಚಟುವಟಿಕೆ ಅಗತ್ಯ ಎಂದರು.ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಬಡೆಮ್ಮಿ, ಶಿಕ್ಷಕ ಸುಭಾಸ ಹೊಸಮನಿ, ಕಾವ್ಯಾ ಕುಲಕರ್ಣಿ, ನಾಗಪ್ಪ ಚೂರಿ ಅತಿಥಿಗಳಾಗಿದ್ದರು. ಹಿರಿಯ ಸಾಹಿತಿಗಳಾದ ಸತೀಶ ಕುಲಕರ್ಣಿ, ಮಾರುತಿ ಶಿಡ್ಲಾಪೂರ, ಸಂಗೀತ ಕಲಾವಿದ ನರಸಿಂಹ ಕೋಮಾರ, ನಿರಂಜನ ಗುಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಪ್ರತೀಕ್ಷಾ ಕೋಮಾರ ಪ್ರಾರ್ಥನೆ ಹಾಡಿದರು. ಸಿದ್ದು ಕೊಂಡೋಜಿ ಸ್ವಾಗತಿಸಿದರು. ಪ್ರೊ. ನಾಗರಾಜ ಧಾರೇಶ್ವರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.ನಾಟಕ ಪ್ರದರ್ಶನ: ಒಂದು ತಿಂಗಳ ಕಾಲ ನಡೆದ ಮಕ್ಕಳ ರಂಗ ತರಬೇತಿಯಲ್ಲಿ ಸಿದ್ಧಪಡಿಸಿದ ಎಚ್. ದುಂಡಿರಾಜ ರಚನೆಯ ಅಜ್ಜಿ ಕಥೆ ನಾಟಕವನ್ನು ಪ್ರದರ್ಶಿಸಲಾಯಿತು. ಯುವ ರಂಗ ನಿರ್ದೇಶಕ ಸಿದ್ದು ಕೊಂಡೋಜಿ ನಿರ್ದೇಶಿಸಿದರು. ಸಹ ನಿರ್ದೇಶಕ ಹರೀಶ ಗುರಪ್ಪನವರ, ಸಣ್ಣಪ್ಪ ಹೊರವರ ಹಾಗೂ ಉದಯ ಬಡೆಮ್ಮಿ ಅವರ ವಸ್ತ್ರಾಲಂಕಾರ, ಜಮೀರ ಪಠಾಣ ಅವರ ಪ್ರಸಾದನದಲ್ಲಿ ನಾಟಕ ಪ್ರದರ್ಶನಗೊಂಡಿತು.ಸ್ಪೀಡ್ ಪೋಸ್ಟ್ ಡಾಕ್ಯುಮೆಂಟ್‌ನಲ್ಲಿ ಪ್ರಥಮ

ಹಾವೇರಿ: ಅಂಚೆ ಇಲಾಖೆಯ ಕರ್ನಾಟಕ ವೃತ್ತದ 2024- 25ನೇ ವಿತ್ತೀಯ ವರ್ಷದ ವಿವಿಧ ಅಭಿಯಾನಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಹಾವೇರಿ ಅಂಚೆ ವಿಭಾಗಕ್ಕೆ ಪ್ರಥಮ ಸ್ಥಾನ ಲಭಿಸಿದೆ. ಮೈಸೂರಿನಲ್ಲಿ ನಡೆದ ಶ್ರೇಷ್ಠತಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹಾವೇರಿ ವಿಭಾಗದ ಕೇಂದ್ರೀಯ ಸಂಸ್ಕರಣಾ ಘಟಕವು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ, ಸ್ಪೀಡ್ ಪೋಸ್ಟ್ ಡಾಕ್ಯುಮೆಂಟ್‌ಲ್ಲಿ ಪ್ರಥಮ ಸ್ಥಾನ ಹಾಗೂ ಗ್ರಾಮೀಣ ಅಂಚೆ ವಿಮಾ ಸಂಗ್ರಹದಲ್ಲಿ ಕಡೂರು ಗ್ರಾಮೀಣ ಅಂಚೆ ಶಾಖೆಯು ರಾಜ್ಯಕ್ಕೆ ದ್ವಿತೀಯ ಸ್ಥಾನ ಹೀಗೆ ಒಟ್ಟು ಮೂರು ಸ್ಥಾನಗಳನ್ನು ಹಾವೇರಿ ವಿಭಾಗವು ತನ್ನ ಮುಡಿಗೇರಿಸಿಕೊಂಡಿದೆ.

ಹಾವೇರಿ ವಿಭಾಗದ ಅಂಚೆ ಅಧೀಕ್ಷಕ ಮಂಜುನಾಥ ಜಿ ಹುಬ್ಬಳ್ಳಿ, ಹಾವೇರಿ ಪ್ರಧಾನ ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ಮಂಜುನಾಥ ಕಳಸೂರು, ಸಿಬ್ಬಂದಿಗಳಾದ ಆರ್.ಕೆ. ಅಬ್ಬಿಗೇರಿ, ಪಾಂಡುರಂಗ ನಡುವಿನಮನಿ ಹಾಗೂ ಕಡೂರು ಗ್ರಾಮೀಣ ಅಂಚೆ ಪಾಲಕರಾದ ರೇಣುಕಾ ಲೆಕ್ಕಪ್ಪಳವರ ಹಾಗೂ ಹನುಮಂತಪ್ಪ ಕಮತಳ್ಳಿ ಪ್ರಶಸ್ತಿ ಸ್ವೀಕರಿಸಿದರು.

ಕರ್ನಾಟಕ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರಕುಮಾರ ಅವರು ಪ್ರಶಸ್ತಿಗಳನ್ನು ವಿತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ