ಯಕ್ಷಗಾನ ಮೂಲಕ ಸತ್ ಚಿಂತನೆ ಬೆಳೆಸಲು ಸಾಧ್ಯ: ಕೊಂಡೆವೂರು ಶ್ರೀ

KannadaprabhaNewsNetwork |  
Published : Dec 30, 2024, 01:01 AM IST
ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳ ಸಮಾರೋಪ,ಕುಂಡಂತಾಯರಿಗೆ ಕಟೀಲು ಸದಾನಂದ ಆಸ್ರಣ್ಣ ಪ್ರಶಸ್ತಿ | Kannada Prabha

ಸಾರಾಂಶ

ಹದಿನಾರು ವರ್ಷಗಳಿಂದ ಯಕ್ಷಗಾನದ ಹಿಮ್ಮೇಳ, ಮುಮ್ಮೇಳಗಳನ್ನು ಮಕ್ಕಳಿಗೆ ಕಲಿಸಿಕೊಟ್ಟು ಯಕ್ಷಗಾನ ಕಲೆಯನ್ನು ಉಳಿಸುವ ಕಾರ್ಯ ಮಾಡುತ್ತಿರುವ ಕಟೀಲಿನ ಶ್ರೀ ದುರ್ಗಾ ಮಕ್ಕಳ ಮೇಳದ ಕಲಾಪರ್ವ ಕಟೀಲಿನ ಸರಸ್ವತೀ ಸದನದಲ್ಲಿ ಭಾನುವಾರ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಯಕ್ಷಗಾನದ ಮೂಲಕ ಸತ್ ಚಿಂತನೆಯನ್ನು ಬೆಳೆಸಲು ಸಾಧ್ಯವಿದ್ದು, ಯಕ್ಷಗಾನದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಬೇಕೆಂದು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.

ಕಟೀಲಿನಲ್ಲಿ ಜರುಗಿದ ಕಟೀಲು ಶ್ರೀ ದುರ್ಗಾಮಕ್ಕಳ ಮೇಳದ ವಾರ್ಷಿಕ ಕಲಾಪರ್ವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಯಕ್ಷಗಾನ ವಿದ್ವಾಂಸ ಕೆ.ಎಲ್.ಕುಂಡಂತಾಯರಿಗೆ ಕಟೀಲು ಸದಾನಂದ ಆಸ್ರಣ್ಣ ಪ್ರಶಸ್ತಿ, ಖ್ಯಾತ ಹಿಮ್ಮೇಳ ವಾದಕ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ ಅವರಿಗೆ ಕಟೀಲು ಕೃಷ್ಣ ಆಸ್ರಣ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿದರು.

ಕಟೀಲು ಕ್ಷೇತ್ರದ ಅರ್ಚಕರಾದ ವೆಂಕಟರಮಣ ಆಸ್ರಣ್ಣ, ಅನಂತ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಅಖಿಲ ಕರ್ನಾಟಕ ಬ್ರಾಹ್ಮಣ ಸಮಾಜ ಸಂಘಟನೆಯ ಸುಬ್ರಹ್ಮಣ್ಯ ಪ್ರಸಾದ್, ಖ್ಯಾತ ವಕೀಲ ಪಿ.ಎಸ್. ರಾಜಗೋಪಾಲ್, ಉದ್ಯಮಿ ಪ್ರದ್ಯುಮ್ನ ರಾವ್, ಲೋಕಯ್ಯ ಸಾಲ್ಯಾನ್, ಗುರುರಾಜ ಮಲ್ಲಿಗೆಯಂಗಡಿ, ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಮಾಜಿ ಸಚಿವ ಅಭಯಚಂದ್ರ ಜೈನ್‌, ಸಿಎ ಚಂದ್ರಶೇಖರ ಶೆಟ್ಟಿ, ರಾಧಾಕೃಷ್ಣ ನಾಯಕ್, ನಿತಿನ್ ಹೆಗ್ಡೆ ಎಕ್ಕಾರು, ಸೀತಾರಾಮ ಶೆಟ್ಟಿ, ಕೊಡೆತ್ತೂರು ದಿವಾಕರ ಶೆಟ್ಟಿ, ಕುಕ್ಕುಂದೂರು ಚಂದ್ರಶೇಖರ ಶೆಟ್ಟಿ, ಶ್ರೀಧರ ಶೆಟ್ಟಿ ಪುಳಿಂಚ, ಅಲಂಗಾರು ದೇಗುಲದ ಸುಬ್ರಹ್ಮಣ್ಯ ಭಟ್, ಕಟೀಲು ಕಾಲೇಜಿನ ಕುಸುಮಾವತಿ, ಮುಖ್ಯಶಿಕ್ಷಕಿ ಸರೋಜಿನಿ ಮತ್ತಿತರರಿದ್ದರು.

ದುರ್ಗಾ ಮಕ್ಕಳ ಮೇಳದ ಶ್ರೀಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ವಾಸುದೇವ ಶೆಣೈ ನಿರೂಪಿಸಿದರು. ಪಶುಪತಿ ಶಾಸ್ತ್ರಿ ವಂದಿಸಿದರು.

ಕಲಾಪರ್ವ ಸಂಪನ್ನ: ಹದಿನಾರು ವರ್ಷಗಳಿಂದ ಯಕ್ಷಗಾನದ ಹಿಮ್ಮೇಳ, ಮುಮ್ಮೇಳಗಳನ್ನು ಮಕ್ಕಳಿಗೆ ಕಲಿಸಿಕೊಟ್ಟು ಯಕ್ಷಗಾನ ಕಲೆಯನ್ನು ಉಳಿಸುವ ಕಾರ್ಯ ಮಾಡುತ್ತಿರುವ ಕಟೀಲಿನ ಶ್ರೀ ದುರ್ಗಾ ಮಕ್ಕಳ ಮೇಳದ ಕಲಾಪರ್ವ ಕಟೀಲಿನ ಸರಸ್ವತೀ ಸದನದಲ್ಲಿ ಭಾನುವಾರ ಸಂಪನ್ನಗೊಂಡಿತು.ಯಕ್ಷಗಾನದ ಪೂರ್ವರಂಗ, ಒಡ್ಡೋಲಗಗಳು, ತಾಳ ಮದ್ದಲೆ, ಗಾನವೈಭವ ಯಕ್ಷಗಾನ ಪ್ರಸಂಗಗಳನ್ನು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಹೆಣ್ಣು ಬಣ್ಣದ ಒಡ್ಡೋಲಗವನನ್ನು ಸ್ವಯಂ ಪ್ರಸ್ತುತಪಡಿಸಿದರು.ಹಿಮ್ಮೇಳದಲ್ಲಿ ಪ್ರದ್ಯುಮ್ನ ನಿತಿನ್ ಶಿವಮನ್ಯು, ಸುಮೀರ್ ಮಯ್ಯ, ಅವನೀಶ್ ರಾವ್, ಸೃಜನ್ ಚಂದ್ರಮಂಡಲ, ಶ್ರೀರಕ್ಷಾ ಭಟ್, ರುದ್ರಮನ್ಯು, ಅನಿರುದ್ದ್ ರಾವ್, ಚ್ಯವನ ಉಡುಪ ಮುಂತಾದವರು ಭಾಗವಹಿಸಿದರು.ಪಾರ್ಥಸಾರಥ್ಯ ತಾಳಮದ್ದಲೆಯಲ್ಲಿ ಅರ್ಥಧಾರಿಗಳಾಗಿ ಪ್ರದ್ಯುಮ್ನ, ಸೃಷ್ಟಿ, ತಪಸ್ಯ, ಜೀವನ್, ಪ್ರಣಮ್ಯ, ನಿತಿನ್ ಭಾಗವಹಿಸಿದರು.ಯಕ್ಷಗಾನ ಗಾಯನದಲ್ಲಿ ಶ್ರೀರಕ್ಷ, ಶಿವಮನ್ಯು, ನಿತಿನ್, ಅನಿರುದ್ಧ್, ಸೃಜನ್, ಪೂಜಾ, ವಿಶ್ವಾಸ್ ಉಡುಪ, ಅವನೀಶ ಭಾಗವಹಿಸಿದರು.ಮಕ್ಕಳ ಮೇಳದ ಕಲಾವಿದರು ಹಾಗೂ ಮೇಳದ ಪ್ರಾಕ್ತನ ಕಲಾವಿದರು ಪುರುಷಾಮೃಗ, ಸುದರ್ಶನ ವಿಜಯ, ಪಟ್ಟಾಭಿಷೇಕ, ಪಾದುಕಾಪ್ರದಾನ, ಅಗ್ರಪೂಜೆ, ಕಿರಾತಾರ್ಜುನ ಪ್ರಸಂಗಗಳನ್ನು ಪ್ರದರ್ಶಿಸಿದರು.ನಾಟ್ಯ ಗುರು ರಾಜೇಶ್ ಐ. ಕಟೀಲು, ಹಿಮ್ಮೇಳದ ಗುರು ಕೃಷ್ಣರಾಜ ನಂದಳಿಕೆ, ತಾಳಮದ್ದಲೆ ಗುರು ಸರ್ಪಂಗಳ ಈಶ್ವರ ಭಟ್ ವಿದ್ಯಾರ್ಥಿಗಳನ್ನು ಸಿದ್ಧಪಡಿಸಿದ್ದರು.

PREV

Recommended Stories

ಇಂದಿನಿಂದ ಪ್ರೊ ಕಬಡ್ಡಿ ಲೀಗ್‌ ಶುರು : 12ನೇ ಆವೃತ್ತಿ । 12 ತಂಡ, ಒಟ್ಟು 117 ಪಂದ್ಯ
‘ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವವರು ಕಷ್ಟಕ್ಕೆ ಸಿಲುಕ್ತಾರೆ’