ಟೀಕೆಗಳಿಗೆ ಅಭಿವೃದ್ಧಿಯೇ ಉತ್ತರ: ಬಾಲಕೃಷ್ಣ

KannadaprabhaNewsNetwork |  
Published : Aug 25, 2025, 01:00 AM IST
 ತಾಲ್ಲೂಕಿನ ಮರುಳುದೇವನಪುರ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಸಹಕಾರಿ ಸಂಘ ಕಟ್ಟಡವನ್ನು ಶಾಸಕ ಬಾಲಕೃಷ್ಣ ಉದ್ಘಾಟಿಸಿದರು. | Kannada Prabha

ಸಾರಾಂಶ

ಮಾಗಡಿ: ಮಾಗಡಿ ಕೋಟೆ ಅಭಿವೃದ್ಧಿಗೆ ₹ 103 ಕೋಟಿ ಅನುದಾನ ವಿಚಾರವಾಗಿ ಮಾಜಿ ಶಾಸಕರ ಹೇಳಿಕೆಗೆ ಹಾಲಿ ಶಾಸಕ ಬಾಲಕೃಷ್ಣ ಪ್ರತಿಕ್ರಿಯಿಸಿ ಟೀಕೆಗಳು ಸಾಯುತ್ತದೆ ಕೆಲಸ ಉಳಿಯುತ್ತದೆ ಎಂದು ಉತ್ತರಿಸಿದರು.

ಮಾಗಡಿ: ಮಾಗಡಿ ಕೋಟೆ ಅಭಿವೃದ್ಧಿಗೆ ₹ 103 ಕೋಟಿ ಅನುದಾನ ವಿಚಾರವಾಗಿ ಮಾಜಿ ಶಾಸಕರ ಹೇಳಿಕೆಗೆ ಹಾಲಿ ಶಾಸಕ ಬಾಲಕೃಷ್ಣ ಪ್ರತಿಕ್ರಿಯಿಸಿ ಟೀಕೆಗಳು ಸಾಯುತ್ತದೆ ಕೆಲಸ ಉಳಿಯುತ್ತದೆ ಎಂದು ಉತ್ತರಿಸಿದರು.

ತಾಲೂಕಿನ ಮರುಳುದೇವನಪುರದಲ್ಲಿ ಭಾನುವಾರ ₹ 50 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ, ಶುದ್ಧ ನೀರು ಘಟಕ ಹಾಗೂ ಡೈರಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ವಿರೋಧ ಪಕ್ಷದವರು ಟೀಕೆ ಮಾಡಲಿ ನಮ್ಮ ಅಭಿವೃದ್ಧಿ ಕಾರ್ಯಗಳ ಮೂಲಕ ಜನರೇ ಉತ್ತರ ಕೊಡುತ್ತಾರೆ. ಕೋಟೆ ಅಭಿವೃದ್ಧಿಯ ಕ್ರೆಡಿಟ್ ನಮ್ಮ ನಾಯಕರಾದ ಬಮೂಲ್‌ ಅಧ್ಯಕ್ಷ ಡಿ.ಕೆ.ಸುರೇಶ್ ಹಾಗೂ ನನಗೆ ಸಲ್ಲಬೇಕು ಎಂದು ಶಾಸಕ ಬಾಲಕೃಷ್ಣ ಹೇಳಿದರು.

ಧರ್ಮಸ್ಥಳದ ಕಳಂಕ ಹೋಗಿದೆ: ರಾಜ್ಯ ಸರ್ಕಾರ ಎಸ್ಐಟಿ ಮೂಲಕ 10ರಿಂದ 12 ವರ್ಷ ಧರ್ಮಸ್ಥಳದ ಮೇಲೆ ಅಂಟಿದ್ದ ಕಳಂಕ ವ್ಯವಸ್ಥಿತ ಸಂಚಾಗಿದ್ದು ಇದನ್ನು ಬಿಜೆಪಿಯವರು ಅವರ ಸರ್ಕಾರ ಇದ್ದಾಗಲೇ ಮಾಡಬಹುದಿತ್ತು. ಬಿಜೆಪಿಯವರು ಮಗುವನ್ನು ಚಿವುಟಿ, ತೊಟ್ಟಿಲು ತೂಗುವ ಕೆಲಸ ಮಾಡಿದ್ದರು. ನಾವು ಆ ರೀತಿ ಮಾಡಲಿಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಂದು ತನಿಖೆ ಆಗಲಿ ಇತಿಶ್ರೀ ಹಾಡೋಣ ಎಂದು ತನಿಖೆ ಆರಂಭಿಸಿದ್ದು ಶೇ.75ರಷ್ಟು ಯಾವುದು ಇಲ್ಲ ಎಂದು ಸಾಬೀತಾಗಿದೆ. ಈಗ ಧರ್ಮಾಧಿಕಾರಿಗಳು ಧರ್ಮಸ್ಥಳ ನಿರಾಳವಾಗಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಧರ್ಮಸ್ಥಳಕ್ಕೆ ಹೋಗುವಂತಾಗಿದೆ ಎಂದರು.

ಈ ವೇಳೆ ಬಮೂಲ್ ನಿರ್ದೇಶಕ ಎಚ್.ಎನ್.ಅಶೋಕ, ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಕಾಂಗ್ರೆಸ್ ಹಿರಿಯ ಮುಖಂಡರಾದ ಪೂಜಾರಿಪಾಳ್ಯ ಕೃಷ್ಣಮೂರ್ತಿ, ಜೆ.ಪಿ.ಚಂದ್ರೇಗೌಡ, ಪುಟ್ಟಣ್ಣಯ್ಯ, ಡೈರಿ ಅಧ್ಯಕ್ಷ ಶ್ರೀನಿವಾಸ್ ಮೂರ್ತಿ, ಉಪಾಧ್ಯಕ್ಷ ಚಿಕ್ಕನರಸಿಂಹಯ್ಯ, ನಿರ್ದೇಶಕರಾದ ಸುಶೀಲಾ, ಶ್ರೀಧರ್, ಚಿಕ್ಕರಾಮೇಗೌಡ, ಕಂಬೇಗೌಡ, ಪರಮೇಶ, ಬಾಲಯ್ಯ, ಕಾರ್ಯದರ್ಶಿ ನಾಗರಾಜು, ರಾಜಣ್ಣ, ಲೋಕೇಶ್, ಚಕ್ರಬಾವಿ ಶ್ರೀಧರ್, ವಿದ್ಯಾರ್ಥಿ ಮಿತ್ರ ಕಿರಣ್ ಇತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೈಲಲ್ಲೂ ದರ್ಶನ್‌ಗೆ ‘ಅಭಿಮಾನಿಗಳು’ ಕಾಟ!
ನಾಳೆ ಹಲವು ಸಾಧಕರಿಗೆ ಗಾಂಧಿ ಪುರಸ್ಕಾರ ಪ್ರದಾನ