ಕೈಗಾರಿಕಾ ಪ್ರದೇಶವಾಗಿ ಕೆಜಿಎಫ್‌ ಅಭಿವೃದ್ಧಿ

KannadaprabhaNewsNetwork | Published : Jul 17, 2024 12:53 AM

ಸಾರಾಂಶ

ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಕೈಗಾರಿಕಾ ಪ್ರದೇಶದ ಜಾಗವನ್ನು ವರ್ಗಾವಣೆ ಮಾಡಿ ಕೈಗಾರಿಕಾ ಟೌನ ಶಿಪ್ ಮಾಡಲು ಮುಂದಾಗಿರುವುದು ರಾಜ್ಯ ಸರ್ಕಾರವೇ ಹೊರತು ಕೇಂದ್ರ ಸರ್ಕಾರವಲ್ಲ. ಈ ವಿಷಯವನ್ನು ನಾವೇ ಮಾಡಿದ್ದು ಎಂದು ನಾವು ಮಾತ್ರಿ ಕೂಟ ಎಲ್ಲೂ ಹೇಳಿಕೊಂಡಿಲ್ಲ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ತಾವು ಸಂಸದನಾಗಿ ಆಯ್ಕೆಯಾಗಲು ಬಂಗಾರಪೇಟೆ ಕ್ಷೇತ್ರದ ಜನತೆಯ ಆಶೀರ್ವಾದ ಮುಖ್ಯ ಪಾತ್ರ ವಹಿಸಿದೆ, ಕೆಜಿಎಫ್ ಬಿಜಿಎಂಎಲ್ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಅಳವಡಿಸಿ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸಲು ನನ್ನ ಮೊದಲ ಆದ್ಯತೆ ಎಂದು ಸಂಸದ ಎಂ. ಮಲ್ಲೇಶ್ ಬಾಬು ಹೇಳಿದರು. ಪಟ್ಟಣದ ಆರ್.ಆರ್. ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಹಾಗೂ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಕೃತಜ್ಞತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ರೈಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಈಗಾಗಲೇ ಸಂಬಂಧಿಸಿದ ಸಚಿವರುಗಳ ಜೊತೆ ಚರ್ಚಿಸಲಾಗಿದೆ. ಮದನಪಲ್ಲಿಯಿಂದ ಹೊಸಕೋಟೆ ರಸ್ತೆಯನ್ನು ರಾಷ್ಡ್ರೀಯಾ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಲು ಕ್ರಮ ವಹಿಸಿ ಅಧಿವೇಶನದಲ್ಲಿ ಚರ್ಚಸುವೆ ಎಂದು ಹೇಳಿದರು.

ಕೈಗಾರಿಕಾ ಟೌನ್‌ಶಿಪ್‌ ರಾಜ್ಯದ ಯೋಜನೆ

ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಕೈಗಾರಿಕಾ ಪ್ರದೇಶದ ಜಾಗವನ್ನು ವರ್ಗಾವಣೆ ಮಾಡಿ ಕೈಗಾರಿಕಾ ಟೌನ ಶಿಪ್ ಮಾಡಲು ಮುಂದಾಗಿರುವುದು ರಾಜ್ಯ ಸರ್ಕಾರವೇ ಹೊರತು ಕೇಂದ್ರ ಸರ್ಕಾರವಲ್ಲ. ಈ ವಿಷಯವನ್ನು ನಾವೇ ಮಾಡಿದ್ದು ಎಂದು ನಾವು ಎಲ್ಲೂ ಹೇಳಿಕೊಂಡಿಲ್ಲ ಅದನ್ನು ನೀವೆ ಪ್ರಚಾರಕ್ಕಾಗಿ ಆರೋಪಿಸುತ್ತಿದ್ದೀರಾ ಎಂದು ಶಾಸಕ ಎಸ್.ಎನ್ ನಾರಾಯಣಸ್ವಾಮಿ ಅವರಿಗೆ ತಿರುಗೇಟು ನೀಡಿದರು.

ಕೋಲಾರದಲ್ಲಿ ಎರಡು ಮೂರು ತಿಂಗಳಲ್ಲಿ ಇಂಡೋರ್ ಸ್ಟೇಡಿಯಂ ಮಾಡಲು ಕ್ರಮ ವಹಿಸಲಾಗುವುದು. ಮುಂಬರು ಬಿಪಂ, ತಾಪಂ ಚುನಾವಣೆಗಳಲ್ಲಿ ಮೈತ್ರಿ ಪಾಲನೆ ಜೊತೆಗೆ ಎಲ್ಲ ಚುನಾವಣೆಗಳಲ್ಲಿ ಅಧಿಕಾರ ಗದ್ದುಗೆ ಏರುವ ಭರವಸೆ ಇದೆ ಎಂದರು. ಕೈಗಾರಿಕೆ ಸ್ಥಾಪನೆಗೆ ಮನವಿ

ಪುರಸಭೆ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಕೆ.ಚಂದ್ರರೆಡ್ಡಿ ಮಾತನಾಡಿ, ಎಚ್‌.ಡಿ. ಕುಮಾರಸ್ವಾಮಿ ಅವರು ಬೃಹತ್ ಕೈಗಾರಿಕಾ ಸಚಿವರಾಗಿದ್ದು, ಬಂಗಾರಪೇಟೆ ಕೆಜಿಎಫ್ ಭಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಸಲು ಮುಂದಾಗಬೇಕು ಎಂದು ಸಂಸದರಲ್ಲಿ‌ ಮನವಿ ಮಾಡಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿವಿ ಮಹೇಶ್ ಮಾತನಾಡಿ, ಸಂಸದರ ಮುಂದೆ ಎರಡು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಒಟ್ಟಾಗೆ ತೆಗೆದುಕೊಂಡು ಹೋಗಬೇಕಾದ, ಸವಾಲು ಇದೆ. ಕೆಜಿಎಫ್‌ನಲ್ಲಿ ಕೈಗಾರಿಕೆ ಸ್ಥಾಪನೆ, ಕೋಲಾರದಲ್ಲಿ ಇಎಸ್‌ಐ ಆಸ್ಪತ್ರೆ ಸ್ಥಾಪನೆ ಮಾಡಬೇಕು. ಅಲ್ಲದೆ ಬಂಗಾರಪೇಟೆ ಕ್ಷೇತ್ರ ಅಭಿವೃದ್ಧಿಪಡಿಸಬೇಕೆಂದರು.

ಕೆಎಚ್ಚೆಂ ಸೋಲಿಸಿದ ಘಟಬಂಧನ್‌ಮಾಜಿ ಶಾಸಕ ಎಂ ನಾರಾಯಣಸ್ವಾಮಿ ಮಾತನಾಡಿ ಮಲ್ಲೇಶ್ ಬಾಬು ಗೆದ್ದ ನಂತರ ಕ್ಷೇತ್ರದಲ್ಲಿ ಕೆಲವರಿಗೆ ಮುಜುಗರ ಉಂಟಾಗಿದೆ, ಮುಂದಿನ ಚುನಾವಣೆಗಳನ್ನು ಮೈತ್ರಿ ಮೂಲಕ ಎದುರಿಸ್ತೇನೆ ಎಂದು ಹೇಳಿಕೊಳ್ಳುವುದು ನಮ್ಮ ಧರ್ಮ. ಕಳೆದ 2019 ರ ಲೋಕಸಭಾ ಚುನಾವಣೆಯಲ್ಲಿ ಘಟ್ ಬಂಧನ್ ಹೆಸರಲ್ಲಿ ಕೆಹೆಚ್ ಮುನಿಯಪ್ಪರನ್ನ ಸೋಲಿಸಲು ನೀವು ಕಾರಣೀಭೂತರಾಗಿದ್ದೀರಾ ಎಂದು ಪರೋಕ್ಷವಾಗಿ ಶಾಸಕ ನಾರಾಯಣಸ್ವಾಮಿ ವಿರುದ್ದ ವಾಗ್ಧಾಳಿ ನಡೆಸಿದರು. ಕಾರ್ಯಕ್ರಮದಲ್ಲಿ ಜಿಪಂ ಮಾಡಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ಮಾಜಿ ಶಾಸಕ ವೆಂಕಟಮುನಿಯಪ್ಪ, ವಡಗೂರು ಹರೀಶ್,ಜೆಡಿಎಸ್ ತಾಲೂಕು ಅಧ್ಯಕ್ಷ ಮುನಿರಾಜು,ಬಿಜೆಪಿ ತಾಲ್ಲೂಕು ಅಧ್ಯಕ್ಷ ಸಂಪಂಗಿ ರೆಡ್ಡಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರಾಮಚಂದ್ರಪ್ಪ, ಕನ್ನಡ ಸಂಘದ ಅಧ್ಯಕ್ಷ ಡಾ. ಪಲ್ಲವಿ ಮಣಿ, ಟಿಎಪಿಎಂಎಸ್‌ ಕೋಲಾರ ಅಧ್ಯಕ್ಷ ವಡಗೂರು ರಾಮು, ತಿಮ್ಮಾಪುರ ಕೃಷ್ಣಮೂರ್ತಿ,ಪುರಸಭೆ ಸದಸ್ಯರಾದ ಕಪಾಲಿಶಂಕರ್,ಸುನೀಲ್,ಮುಖಂಡ ಮಾರ್ಕಂಡೇಗೌಡ, ಸೇರಿದಂತೆ ಸಾವಿರಾರು ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಉಸ್ಥಿತರಿದ್ದರು.

Share this article