ಸೇವೆಯಿಂದ ಸಂಘ ಸಂಸ್ಥೆ ಅಭಿವೃದ್ಧಿ: ಪೊನ್ನಣ್ಣ

KannadaprabhaNewsNetwork |  
Published : Nov 12, 2026, 02:30 AM IST
ನಾಲ್ನಾಡ್ ಪ್ಲಾಂಟರ್ಸ್ ರಿಕ್ರಿಯೇಷನ್ ಅಸೋಸಿಯೇಷನ್ (ರಿ) ನಾಪೋಕ್ಲು ವತಿಯಿಂದ ಆಯೋಜಿಸಲಾಗಿದ್ದ ನೂತನಅತಿಥಿಗೃಹದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ. ಶಾಸಕ ಎ.ಎಸ್ ಪೊನ್ನಣ್ಣಪಾಲ್ಗೊಂಡು ಉದ್ಘಾಟಿಸಿದರು.8-ಎನ್ ಪಿ ಕೆ-2.ನಾಲ್ನಾಡ್ ಪ್ಲಾಂಟರ್ಸ್ರಿಕ್ರಿಯೇಷನ್ ಅಸೋಸಿಯೇಷನ್ (ರಿ) ನಾಪೋಕ್ಲು ವತಿಯಿಂದಆಯೋಜಿಸಲಾಗಿದ್ದ ನೂತನ ಅತಿಥಿಗೃಹದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ.ಶಾಸಕ ಎ.ಎಸ್ ಪೊನ್ನಣ್ಣ ಪಾಲ್ಗೊಂಡು ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಸಂಘ ಸಂಸ್ಥೆಗಳ ಏಳಿಗೆಯ ಹಿಂದೆ ಹಲವು ವರ್ಷಗಳ ಶ್ರಮವಿರುತ್ತದೆ ಎಂದು ಶಾಸಕ ಎ.ಎಸ್ ಪೊನ್ನಣ್ಣ ಹೇಳಿದರು.

ನಾಪೋಕ್ಲು ; ಸಂಘ ಸಂಸ್ಥೆಗಳ ಏಳಿಗೆಯ ಹಿಂದೆ ಹಲವು ವರ್ಷಗಳ ಶ್ರಮವಿರುತ್ತದೆ ಎಂದು ಶಾಸಕ ಎ.ಎಸ್ ಪೊನ್ನಣ್ಣ ಹೇಳಿದರು. ನಾಲ್ನಾಡ್ ಪ್ಲಾಂಟರ್ಸ್ ರಿಕ್ರಿಯೇಷನ್ ಅಸೋಸಿಯೇಷನ್ ನೂತನ ಅತಿಥಿಗೃಹದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ನಾಪೋಕ್ಲು ಪಟ್ಟಣಕ್ಕೆ ಡಯಾಲಿಸಿಸ್ ಕೇಂದ್ರವನ್ನು ಮಂಜೂರು ಮಾಡಿಸಿ ಎಂಬ ಮನವಿಗೆ ಪ್ರತಿಕ್ರಿಯಿಸಿದ ಶಾಸಕರು ಡಯಾಲಿಸಿಸ್ ಯಂತ್ರವನ್ನು ಸುಲಭವಾಗಿ ಮಂಜೂರು ಮಾಡಬಹುದು. ಆದರೆ ಅಗತ್ಯ ಮೆಷಿನ್ ಗಳು, ನುರಿತ ವೈದ್ಯರು ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕಿದೆ. ನಾಪೋಕ್ಲು ಹೋಬಳಿಯ ಜನರ ಅಗತ್ಯಕ್ಕೆ ಅಗತ್ಯವಿರುವ ಡಯಾಲಿಸಿಸ್ ಕೇಂದ್ರ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕೊಡವ ಸಮಾಜದ ಅಧ್ಯಕ್ಷ, ನಿವೃತ್ತ ನಬಾರ್ಡ್ ಡಿ.ಜಿ.ಎಂ. ಮುಂಡಂಡ ಸಿ. ನಾಣಯ್ಯ ಮಾತನಾಡಿ ಸತತ ಪ್ರಯತ್ನದಿಂದ ಸಂಘ ಅಭಿವೃದ್ಧಿ ಕಂಡಿದೆ. ಕ್ಲಬ್ಬಿನ ಸದಸ್ಯರು ಹೆಚ್ಚಿನ ಆರ್ಥಿಕ ನೆರವು ನೀಡಿ ಇದರ ಬೆಳವಣಿಗೆಗೆ ಸಹಕರಿಸಬೇಕಾಗಿದೆ ಎಂದರು. ಕೊಡಗು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ಶುಭ ಹಾರೈಸಿದರು. ನಾಲ್ನಾಡ್ ಪ್ಲಾಂಟರ್ಸ್ ರಿಕ್ರಿಯೇಷನ್ ಅಸೋಸಿಯೇಷನ್ ನಾಪೋಕ್ಲು ಕ್ಲಬ್ ಅಧ್ಯಕ್ಷ ಬಾಚಮಂಡ ಲವ ಚಿನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾಫಿ ಬೆಳೆಗಾರ ಬಿದ್ದಾಟಂಡ ಕಾರ್ಯಪ್ಪ, ಉದ್ಯಮಿ ಮುಕ್ಕಾಟಿರ ಎನ್. ಸುರೇಶ್ ಮಾಚಯ್ಯ, ಕಾಫಿ ಬೆಳೆಗಾರರಾದ ಕೇಟೋಳಿರ ಶಾರದ ಪಳಂಗಪ್ಪ, ಕ್ಲಬ್ ಉಪಾಧ್ಯಕ್ಷರು ಅರೆಯಡ ಎಂ. ರತ್ನ ಪೆಮ್ಮಯ್ಯ, ಕಾರ್ಯದರ್ಶಿ ಚೀಯಕ್‌ ಪೂವಂಡ ಎಂ. ಅಪ್ಪಚ್ಚು, ಖಜಾಂಚಿ ಕರವಂಡ ಪಿ. ಬೆಲ್ಲು ಬೆಳ್ಳಿಯಪ್ಪ, ನಿರ್ದೇಶಕರಾದ ಬೊಲ್ಲಚೆಟ್ಟಿರ ಎಂ. ಸುರೇಶ್, ಅರೆಯಡ ಎಂ. ಅಶೋಕ್, ಚೆನಂಡ ಎಂ.ಸುರೇಶ್ ನಾಣಯ್ಯ, ಶಿವಚಳಿಯಂಡ ಎಂ. ಅಂಬಿ ಕಾರಿಯಪ್ಪ, ಕೇಟೋಳಿರ ಪಿ. ವಿನೋದ್ ವಿನು, ಕೇಟೋಳಿರ ಎ. ಶಮ್ಮಿ ಸುಬ್ಬಯ್ಯ, ಕುಂಡ್ಯೋಲಂಡ ಬಿ. ಬೋಪಣ್ಣ, ಚೋಕೀರ ಎಸ್. ರೋಷನ್ ಉಪಸ್ಥಿತರಿದ್ದರು. ಚೋಕಿರ ಯಾನ ಸಜಿತ್ ಪ್ರಾರ್ಥಿಸಿ, ಶಿವಚಳಿಯಂಡ ರೋಹಿಣಿ (ನಿತ್ಯ) ನಿರೂಪಿಸಿದರು..

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀಪಾವಳಿಲೀ ರಾಕೆಟ್‌ನಂತೆ ಹಾರಿದ ವಾಯು ಮಾಲಿನ್ಯ!
ಕೌಟುಂಬಿಕ ಕೇಸಲ್ಲಿ ಕುಟುಂಬ ಸಿಲುಕಿಸುವುದು ತರವಲ್ಲ: ಕೋರ್ಟ್‌