ವಿದ್ಯಾವಂತ ಯುವಕರಿಂದ ದೇಶದ ಅಭಿವೃದ್ಧಿ: ಡಾ. ಆರ್ತಿ ಸರಿನ್

KannadaprabhaNewsNetwork |  
Published : Nov 17, 2024, 01:19 AM IST
111 | Kannada Prabha

ಸಾರಾಂಶ

ಸಮಾರಂಭದಲ್ಲಿ ಒಟ್ಟು 1052 ವಿದ್ಯಾರ್ಥಿಗಳು ಪದವಿ ಪಡೆದರು.ಇದೇ ಸಂದರ್ಭದಲ್ಲಿ ವಿಶ್ವ ವಿದ್ಯಾನಿಲಯದ ವತಿಯಿಂದ 22 ಚಿನ್ನದ ಪದಕಗಳು ಹಾಗೂ 72 ಮೆರಿಟ್ ಪ್ರಮಾಣಪತ್ರ,ಪ್ರಶಸ್ತಿಗಳನ್ನು ನೀಡಲಾಯಿತು.

ಕನ್ನಡಪ್ರಭ ವಾರ್ತೆ ಉಳ್ಳಾಲ ಮಾನವ ಜನಾಂಗದ ಅಭಿವೃದ್ಧಿಯು ನಮ್ಮಲ್ಲಿನ ಮೌಲ್ಯಗಳ ಉಳಿವು ಮತ್ತು ಬಳಕೆಯ ಮೇಲೆ ಅವಲಂಬಿತವಾಗಿರುತ್ತದೆ. ಕಲಿಕೆಯು ನಿರಂತರ ಪ್ರಕ್ರಿಯೆಯಾಗಿದ್ದು, ಜ್ಞಾನವನ್ನು ಸದಾಕಾಲ ವಿಸ್ತರಿಸಿಕೊಂಡು, ತಾವೂ ಬೆಳೆಯುತ್ತ, ಸಮಾಜವನ್ನೂ ಬೆಳೆಸುವ ಕಾರ್ಯದಲ್ಲಿ ನಿರತರಾಗಿರಬೇಕು ಎಂದು ಸೇನಾಪಡೆಗಳ ವೈದ್ಯಕೀಯ ಸೇವೆಗಳ ಡೈರೆಕ್ಟರ್‌ ಜನರಲ್ ಡಾ. ಆರ್ತಿ ಸರಿನ್ ಹೇಳಿದರು.

ಅವರು ಶನಿವಾರ ಕೆ.ಎಸ್. ಹೆಗ್ಡೆ ವೈದ್ಯಕೀಯ ಕಾಲೇಜಿನ ಮೈದಾನದಲ್ಲಿ ನಡೆದ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದ 14ನೇ ಘಟಿಕೋತ್ಸವ ಸಮಾರಂಭದಲ್ಲಿ ಘಟಿಕೋತ್ಸವ ಸಂದೇಶ ನೀಡಿದರು. ದೇಶದ ಅಭಿವೃದ್ಧಿಯ ಚುಕ್ಕಾಣಿಯು ವಿದ್ಯಾವಂತ ಯುವಕರ ಕೈಯಲ್ಲಿ ಇರುತ್ತದೆ. ಯುವಕರು ತಾವು ಗಳಿಸುವ ಪದವಿಗಳನ್ನು ಬಳಸಿಕೊಂಡು ದೇಶ ಕಟ್ಟುವ ಕೆಲಸವನ್ನು ಮಾಡಬೇಕು. ಇದರ ಜೊತೆ ಜೊತೆಗೆ ದೇಶದ ಸಾಂಪ್ರದಾಯಿಕ ಕಲೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಪ್ರಾಮಾಣಿಕ ಪ್ರಯತ್ನವನ್ನೂ ಮಾಡಬೇಕು. ಅದರಿಂದ ಮಾತ್ರವೇ ಪದವೀಧರರು ತಮ್ಮ ನಾಗರಿಕ ಕರ್ತವ್ಯವನ್ನು ಸಮರ್ಥವಾಗಿ ಮಾಡಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.

ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಹಕುಲಾಧಿಪತಿ ಪ್ರೊ. ಡಾ.ಎಂ. ಶಾಂತಾರಾಂ ಶೆಟ್ಟಿ, ಸಹ ಕುಲಾಧಿಪತಿ (ಆಡಳಿತ) ವಿಶಾಲ್ ಹೆಗ್ಡೆ, ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ಡಾ. ಹರ್ಷ ಹಾಲಹಳ್ಳಿ, ಪರೀಕ್ಷಾ ನಿಯಂತ್ರಕರಾದ ಪ್ರೊ.ಡಾ. ಪ್ರಸಾದ್ ಬಿ. ಶೆಟ್ಟಿ ಹಾಗೂ ವಿಶ್ವವಿದ್ಯಾನಿಲಯದ ವಿವಿಧ ಕಾಲೇಜುಗಳ ಮುಖ್ಯಸ್ಥರು ಮತ್ತು ಕಾರ್ಯಕಾರಿ ಮಂಡಳಿ ಹಾಗೂ ಶೈಕ್ಷಣಿಕ ಸಮಿತಿ ಸದಸ್ಯರು ಭಾಗವಹಿಸಿದ್ದರು.ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಡಾ.ಎಂ.ಎಸ್‌. ಮೂಡಿತ್ತಾಯ ಸ್ವಾಗತಿಸಿದರು. ಆರ್ಥೋಪೆಡಿಕ್ ಸರ್ಜನ್ ಡಾ. ಸಿದ್ಧಾರ್ಥ್ ಮತ್ತು ಸ್ಪೀಚ್ ಆಂಡ್ ಹಿಯರಿಂಗ್ ವಿಭಾಗದ ಪ್ರೊಫೆಸರ್ ಅಖಿಲ ನಿರೂಪಿಸಿದರು.

ನಿಟ್ಟೆ ವಿಶ್ವವಿದ್ಯಾನಿಲಯವು ದೇಶದ ಅತ್ಯುತ್ತಮ ವಿಶ್ವವಿದ್ಯಾನಿಲಯಗಳಲ್ಲಿ ಅಗ್ರಸ್ಥಾನವನ್ನು ಪಡೆದಿದೆ. ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯಿಂದ ಎ ಪ್ಲಸ್‌ ಶ್ರೇಣಿಯನ್ನು ಪಡೆದಿದೆ ಮತ್ತು ಭಾರತದ 1100 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ಪೈಕಿ ನ್ಯಾಷನಲ್ ಇನ್‌ಸ್ಟಿಟ್ಯೂಷನಲ್ ರಾಂಕಿಂಗ್ ಫ್ರೇಮ್‌ವರ್ಕ್‌ನಲ್ಲಿ 66ನೇ ಸ್ಥಾನವನ್ನು ಹೊಂದಿದೆ. ಎ.ಬಿ. ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದೇಶದಲ್ಲಿ 6ನೇ ಸ್ಥಾನ, ನಿಟ್ಟೆ ಗುಲಾಬಿ ಶೆಟ್ಟಿ ಸ್ಮಾರಕ ಔಷಧವಿಜ್ಞಾನ ಸಂಸ್ಥೆಗೆ 41ನೇ ಸ್ಥಾನ ಲಭಿಸಿದೆ. ಇದಲ್ಲದೇ ಅನೇಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ವಿಶ್ವವಿದ್ಯಾನಿಲಯವು ಶ್ರೇಷ್ಠ ಸ್ಥಾನಗಳನ್ನು ಪಡೆಯುತ್ತ ಅಭಿವೃದ್ಧಿಯ ಪಥದಲ್ಲಿ ಸಾಗಿದೆ.

- ಎಂ.ಎಸ್. ಮೂಡಿತ್ತಾಯ, ಕುಲಪತಿಗಳು,ನಿಟ್ಟೆ ಪರಿಗಣಿಸಲ್ಪಟ್ಟ ವಿವಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!