ಯುವ ಜನತೆಯಿಂದ ದೇಶದ ಅಭಿವೃದ್ಧಿ

KannadaprabhaNewsNetwork |  
Published : Nov 12, 2026, 02:30 AM IST
ಕೆ.ಎಲ್. ಸಂಸ್ಥೆಯ ಮೃತ್ಯುಂಜಯ ಕಾಲೇಜಿನಲ್ಲಿ ರಾಜ್ಯ ಮಟ್ಟದ ಯುವತರಂಗ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.   | Kannada Prabha

ಸಾರಾಂಶ

ಭಾರತ ಯುವಕರ ದೇಶ, ಈ ಯುವಜನತೆ ಮನಸ್ಸು ಮಾಡಿದರೆ, ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಭಾರತವೇ ಸಾಕ್ಷಿ. ಯುವಜನರು ಇಂದು ಸಮೂಹ ಮಾಧ್ಯಮಗಳನ್ನು ಸಕಾರಾತ್ಮಕವಾಗಿ ಉಪಯೋಗಿಸಬೇಕು.

ಧಾರವಾಡ:

ಕೆ.ಎಲ್. ಸಂಸ್ಥೆಯ ಮೃತ್ಯುಂಜಯ ಕಾಲೇಜಿನಲ್ಲಿ ರಾಜ್ಯಮಟ್ಟದ ಯುವತರಂಗ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಪ್ರಾಚಾರ್ಯ ಪ್ರೊ. ಸಂಜೀವ, ಭಾರತ ಯುವಕರ ದೇಶ, ಈ ಯುವಜನತೆ ಮನಸ್ಸು ಮಾಡಿದರೆ, ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಭಾರತವೇ ಸಾಕ್ಷಿ. ಯುವಜನರು ಇಂದು ಸಮೂಹ ಮಾಧ್ಯಮಗಳನ್ನು ಸಕಾರಾತ್ಮಕವಾಗಿ ಉಪಯೋಗಿಸಬೇಕು. ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ಮನೋಸ್ಥೈರ್ಯ ಹೆಚ್ಚಿಸಬಹುದು. ವಿದ್ಯಾರ್ಥಿಗಳು ತಮ್ಮಲ್ಲಿರುವ ಸೂಕ್ತ ಪ್ರತಿಭೆಗಳನ್ನು ಸಂಕೋಚವಿಲ್ಲದೆ ಇಂತಹ ವೇದಿಕೆಗಳಲ್ಲಿ ಪ್ರದರ್ಶಿಸಬೇಕು. ಇದರಿಂದ ತಮ್ಮಲ್ಲಿರುವ ಭಯ ದೂರಾಗಿ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ ಎಂದರು.

ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯ ವೃದ್ಧಿಸುತ್ತವೆ. ಕಲಿತ ವಿದ್ಯೆ ಕೊನೆಯವರೆಗೂ ನಮ್ಮನ್ನೆಂದು ಕೈ ಬೀಡುವುದಿಲ್ಲ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ. ನೀಲಕ್ಕ ಸಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ನಾಗರಾಜ ಕೋಟಗಾರ ಕಿರು ಪರಿಚಯ ಮಾಡಿದರು. ಸಂಜನಾ ಹೊಳಿಮಠ ಸ್ವಾಗತಿಸಿದರು. ಪ್ರೊ. ಚೇತನ ಸೊಂಡಿ ವಂದಿಸಿದರು, ಪ್ರೊ. ಶ್ವೇತಾ ರಾಯೋಜಿ ನಿರೂಪಿಸಿದರು. ಆಡಳಿತ ಮಂಡಳಿಯ ಸದಸ್ಯ ಸಿ.ಎಸ್.ಪಾಟೀಲ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀಪಾವಳಿಲೀ ರಾಕೆಟ್‌ನಂತೆ ಹಾರಿದ ವಾಯು ಮಾಲಿನ್ಯ!
ಕೌಟುಂಬಿಕ ಕೇಸಲ್ಲಿ ಕುಟುಂಬ ಸಿಲುಕಿಸುವುದು ತರವಲ್ಲ: ಕೋರ್ಟ್‌