ಚಂದ್ರಶೇಖರ ಸ್ವಾಮಿಜಿ ಸ್ಮರಣೆ । ಅರಿವಿನ ಜಾಗೃತಿ ಕಾರ್ಯಕ್ರಮ, ಮಹಿಳಾ ಸಮಾವೇಶಕನ್ನಡಪ್ರಭ ವಾರ್ತೆ ಅರಸೀಕೆರೆ
ಕುಟುಂಬದ ಆಧಾರಸ್ತಂಭವಾಗಿರುವ ಮಹಿಳೆಯರು ವಿದ್ಯಾವಂತಾರದಾಗ ಮಾತ್ರ ಅವರ ಮನೆ ಬೆಳಗುತ್ತದೆ. ದೇಶದ ಅಭಿವೃದ್ದಿಗೂ ಸಹಕಾರಿಯಾಗಲಿದೆ ಎಂದು ನಿರಂಜನ ಪೀಠದ ರುದ್ರಮುನಿ ಸ್ವಾಮಿ ಅಭಿಮತ ವ್ಯಕ್ತಪಡಿಸಿದರು.ತಾಲೋಕಿನ ಮಾಡಾಳು ನಿರಂಜನ ಪೀಠ ಶುಕ್ರವಾರ ಆಯೋಜಿಸಿದ ಮಠದ ಹಿರಿಯ ಗುರುಗಳಾದ ಲಿಂ, ಶ್ರೀ ಚಂದ್ರಶೇಖರ ಸ್ವಾಮಿಜಿಯವರ 17 ನೇ ವರ್ಷದ ಸ್ಮರಣೋತ್ಸವ ಹಾಗೂ 24ನೇ ಅರಿವಿನ ಜಾಗೃತಿ ಕಾರ್ಯಕ್ರಮ ಮತ್ತು ಮಹಿಳಾ ಸಮಾವೇಶ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಹಿಳೆಯರು ಸಂಘಟಿತರಾಗಿ ಸ್ವಾವಲಂಭನೆ ಜೀವನ ನೆಡೆಸಬೇಕು.ಇಂದು ಮಹಿಳೆಯರು ಪುರುಷರಂತೆ ಎಲ್ಲ ರಂಗದಲ್ಲೂ ಛಾಪು ಮೂಡಿಸಿ ಪ್ರಾಬಲ್ಯ ಮೆರೆಯುತ್ತಿರುವುದು ಶ್ಲಾಘನಿಯ ಎಂದು ಹೇಳಿದರುನಾರಿಶಕ್ತಿ ರಾಷ್ಟ್ರಪತಿ ಪ್ರಶಸ್ತಿ ವಿಜೇತ ನೋಮಿಟೊ ಕಮಾಧಾರ್ ಹೊನ್ನೆಮರಡು ಮಾತನಾಡಿ, ಪ್ರಸ್ತುತ ಪರಿಸರ ವೈಪರೀತ್ಯದಿಂದ ಅನೇಕ ದುಷ್ಪರಿಣಾಮ ಉಂಟಾಗುತ್ತಿದೆ. ಕಾಡು ಬೆಳಿಸಿ ನಾಡು ಉಳಿಸುವ ಮಹತ್ಕಾರ್ಯವಾಗಬೇಕಿದ್ದು ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಹೆಚ್ಚು ನಿಗಾವಹಿಸಿ ಪರಿಸರ ಸಮತೋಲನ ಕಾಪಾಡಬೇಕಿದೆ ಎಂದು ಹೇಳಿದರು
ಹಳೇಬೀಡಿನ ಪುಷ್ಪಗಿರಿ ಗ್ರಾಮೀಣಾಭಿವೃದ್ದಿ ಯೋಜನಾಧಿಕಾರಿ ವಿನೂತನ ಧನಂಜಯ ಮಾತನಾಡಿ, ಮಹಿಳೆಯರು ಗ್ರಾಮೀಣ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದ ಸ್ವಾವಲಂಬಿ ಬದುಕು ಕಟ್ಟಿಕೊಂಡು ಆರ್ಥಿಕವಾಗಿ ಸಬಲೀಕರಣವಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ಮಹಿಳೆ ಮತ್ತು ಪ್ಲಾಸ್ಟಿಕ್ ಬಗ್ಗೆ ಉಪನ್ಯಾಸ ನೀಡಿದ ಭಾರತ ವಿಜ್ಞಾನ ಪರಿಷತ್ ಕಾರ್ಯದರ್ಶಿ ಅಹಮದ್ ಹಗರೆ, ಪ್ರಸ್ತುತ ದಿನಗಳಲ್ಲಿ ಮನುಷ್ಯನಿಗೆ ಪ್ಲಾಸ್ಟಿಕ್ ಅಪಾಯಕರಿಯಾಗಿದೆ. ಭೂಮಿಗೆ ಸೇರಿದಾಗ ಕಲುಷಿತವಾಗುವುದಲ್ಲದೆ ವಿನಾಶಕಾರಿಯಾಗಿದೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭ ದಲ್ಲಿ ಸಾಧಕ ಮಹಿಳೆಯರಾದ ವೈದ್ಯ ಡಾ. ನಳಿನಾ ಅರಸೀಕೆರೆ , ಡಾ. ಎಚ್ ಆರ್ ವಿದ್ಯಾ ರಾಂಪುರ ಮುಕ್ಕಣೇಶ್ವರಿ ಮಹಿಳಾ ಸಂಘದ ರಾಜ್ಯಪ್ರಶಸ್ತಿ ವಿಜೇತ ಶೋಭಾರಾಣಿಯವರನ್ನು ಪೀಠದ ವತಿಯಿಂದ ಸನ್ಮಾನಿಸಿ, ಗೌರವಿಸಿ ಈ ಮಹಿಳಾ ಸಮಾವೇಶದ ಆಯೋಜನೆ ಮಾಡಿದ ಅಗ್ಗುಂದ ನಾಗರತ್ನಮ್ಮ ಯಶಸ್ವಿ ಕಾರ್ಯಕ್ರಮ ನಿಯೋಜನೆ ಮಾಡಿದ್ದಾರೆ ಎಂದು ತಿಳಿಸಿದರುಗಂಗಮ್ಮ ನಂಜುಂಡಪ್ಪ, ಮಾಡಾಳು ಗ್ರಾ.ಪಂ ಅದ್ಯಕ್ಷ ಎಂ ಜಿ ಯೋಗೀಶ್, ಪಿಎಲ್‌ಡಿ ಬ್ಯಾಂಕ್ ಅದ್ಯಕ್ಷ ಎಸ್ ಎಂ ಗಂಗಾದರ್, ತಾಲೂಕು ಸಾಧು ಲಿಂಗಾಯಿತ ಸಮಾಜದ ಕಾರ್ಯದರ್ಶಿ ನಾಗಸಮುದ್ರ ಸ್ವಾಮಿ, ಗ್ರಾ ಪಂ . ಸದಸ್ಯ ಕೊಡ್ಲಿ ಬಸವರಾಜು, ಮಾಡಾಳು ಶಿವಲಿಂಗಪ್ಪ ಬೇಲೂರು ತಾಲೂಕು ಪತ್ರಕರ್ತ ಸಂಘದ ತಾಲೂಕು ಅದ್ಯಕ್ಷ ಹೆಬ್ಬಾಳ ಹಾಲಪ್ಪ , ನಾಗರತ್ನಮ್ಮ , ಮಮತಾರಾಣಿ ಉಪಾಸ್ಥಿತರಿದ್ದರು.ತಾಲೂಕಿನ ಮಾಡಾಳು ನಿರಂಜನ ಪೀಠ ಆಯೋಜಿಸಿದ ಅರಿವಿನ ಜಾಗೃತಿ ಕಾರ್ಯಕ್ರಮ ಮತ್ತು ಮಹಿಳಾ ಸಮಾವೇಶ ಸಮಾರಂಭದ ಸಾನಿಧ್ಯ ವಹಿಸಿ ನಿರಂಜನ ಪೀಠದ ರುದ್ರಮುನಿ ಸ್ವಾಮಿ ಆಶೀರ್ವಚನ ನೀಡಿದರು.