ನರಗುಂದ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನತೆಗೆ ಆರ್ಥಿಕ ಸಬಲತೆ ಉಂಟಾಗಿದೆ. ಅಭಿವೃದ್ಧಿಗೆ ಮಾತ್ರ ಸಂಪೂರ್ಣ ಹಿನ್ನಡೆಯಾಗಿದೆ ಎಂದು ಶಾಸಕ ಸಿ. ಸಿ.ಪಾಟೀಲ ಹೇಳಿದರು.
ತಾಲೂಕಿನಲ್ಲಿ 3 ನೀರಾವರಿ ವಿಭಾಗದ ಕಚೇರಿಗಳಿವೆ. ಒಬ್ಬರೇ ಅಭಿಯಂತರರು ಇದ್ದಾರೆ. ಅಧಿಕಾರಿಗಳೆಲ್ಲರೂ ವರ್ಗಾವಣೆಗೊಂಡಿದ್ದಾರೆ. ರೈತರ ಕೃಷಿ ಭೂಮಿಗಳಿಗೆ ನೀರು ಒದಗಿಸಲಿಕ್ಕೆ ಆಗುತ್ತಿಲ್ಲ. ನೀರು ನಿರ್ವಹಣೆಗೆ ಟೆಂಡರ್ ಕರೆಯದ ಕಾರಣ ಜಾಕವೆಲ್ಲಗಳು ಬಂದಾಗಿವೆ.ನಿರ್ವಹಣೆ ಮಾಡುವವರು ಇಲ್ಲದೇ ಎಲ್ಲ ಕಾಲುವೆಗಳಲ್ಲಿನ ನೀರು ಹಳ್ಳಕ್ಕೆ ಹರಿದು ಹೋಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಕಪ್ಪಲಿ ಗ್ರಾಮದ ಗ್ರಂಥಾಲಯ ದುರಸ್ತಿ ಮತ್ತು ಸಿಸಿ ರಸ್ತೆಗೆ ₹ 9.50 ಲಕ್ಷ ಹಾಗೂ ಶಿರೋಳ ಗ್ರಾಮದ ಬಾಲಕರ ಹಿಂದುಳಿದ ವರ್ಗದ ವಸತಿ ನಿಲಯ ಕಟ್ಟಡ ದುರಸ್ತಿ ಮತ್ತು ರಡ್ಡೇರನಾಗನೂರ ಗ್ರಾಮದಲ್ಲಿ ಸಿಸಿ ರಸ್ತೆ ಅಭಿವೃದ್ಧಿಗೆ ₹ 8.10 ಲಕ್ಷಗಳ ಕಾಮಗಾರಿಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಅಪ್ಪಯ್ಯ ಹಿರೇಮಠ, ಬಾಪುಗೌಡ ತಿಮ್ಮನಗೌಡ್ರ, ವಿ.ಕೆ. ಮರಿಗುದ್ದಿ, ನಾಗನಗೌಡ ತಿಮ್ಮನಗೌಡ್ರ, ಪ್ರಕಾಶಗೌಡ ತಿರಕನಗೌಡ್ರ, ತಾಪಂ ಇಓ ಎಸ್.ಕೆ.ಇನಾಮದಾರ, ಹನುಮಂತ ಕಾಡಪ್ಪನವರ, ನಿಂಗಪ್ಪ ಗಾಡಿ ಸೇರಿದಂತೆ ಮುಂತಾದವರು ಇದ್ದರು.