- ಯಲವಟ್ಟಿಯಲ್ಲಿ ತರಳಬಾಳು ಪೀಠದ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ- - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಇಲ್ಲಿಗೆ ಸಮೀಪದ ಯಲವಟ್ಟಿ ಗ್ರಾಮದಲ್ಲಿ ಭಕ್ತರು ಹಾಗೂ ತಾಲೂಕು ಸಾಧು ವೀರಶೈವ ಸಮಾಜ ಏರ್ಪಡಿಸಿದ್ದ ಸಿರಿಗೆರೆಯ ಲಿಂ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ೩೨ನೇ ಶ್ರದ್ಧಾಂಜಲಿ ಸಮಾರಂಭದ ದಾಸೋಹಕ್ಕೆ ಭಕ್ತಿ (ಅಕ್ಕಿ) ಸಮರ್ಪಣಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ದಾವಣಗೆರೆಯಲ್ಲಿ ನಮ್ಮ ವಿರುದ್ಧ ನಡೆದ ಸಭೆಯಿಂದ ಮನನೊಂದ ಭಕ್ತರು ತಾವಾಗಿಯೇ ಸಿರಿಗೆರೆ ಮಠಕ್ಕೆ ಆಗಮಿಸಿ ಬೆಂಬಲ ನೀಡಿದ್ದಾರೆ. ನಮಗೆ ಇದುವರೆಗೂ ಪಾದ ಕಾಣಿಕೆ ₹8 ಕೋಟಿ ಬಂದಿದೆ. ಚಿಕಿತ್ಸಾ ವೆಚ್ಚದ ಬಾಬ್ತು ₹೨೫ ಲಕ್ಷಗಳನ್ನು ನಾವೇ ಬಲವಂತವಾಗಿ ಡಾ. ಶರಣ ಪಾಟೀಲ್ ಅವರಿಗೆ ನೀಡಿದ್ದೇವೆ. ಅದನ್ನೇ ಕೆಲವರು ತಪ್ಪು ಭಾವಿಸಿ, ಅಪಪ್ರಚಾರ ಮಾಡಿದ್ದಾರೆ ಎಂದರು.ಮುಖಂಡ ಹನಗವಾಡಿ ವೀರೇಶ್, ಸಮಾಜದ ಅಧ್ಯಕ್ಷ ಮಹದೇವಪ್ಪ ಗೌಡ, ಶಿವಣ್ಣ, ರಾಜಪ್ಪ, ಶಿವಾನಂದಪ್ಪ, ರತ್ನಮ್ಮ, ಗೌಡರ ಮಂಜುನಾಥ್, ವನಜಾಕ್ಷಮ್ಮ. ಗದ್ದಿಗೇಶ್, ಷಣ್ಮುಖ, ಸುಮತಿ, ರಾಜೇಶ್, ಶಿವಕುಮಾರ್, ಸಿರಿಗೆರೆ ರಾಜಣ್ಣ, ಕುಮಾರ್, ಓಂಕಾರಪ್ಪ, ಬಸವರಾಜಪ್ಪ, ಡಿ.ಚನ್ನಬಸಪ್ಪ, ಡಿ.ಮಹೇಂದ್ರಪ್ಪ ಹಾಗೂ ಸಾವಿರಾರು ಭಕ್ತರು ಭಾಗವಹಿಸಿದ್ದರು.
- - -
* ದುಶ್ಚಟಗಳಿಂದ ದೂರವಿರಿ: ಹರೀಶ್
- - - -೧೬ಎಂಬಿಆರ್೧: