ಕನ್ನಡಪ್ರಭ ವಾರ್ತೆ ಕೊರಟಗೆರೆ
ಬೆಳ್ಳಾವಿ ಕಾರದ ಮಠದ ಶ್ರೀ ವೀರಬಸವ ಕಾರದ ಸ್ವಾಮೀಜಿ ಮಾತನಾಡಿ , ಬಡವರು ದೀನ ದಲಿತರ ಬಗ್ಗೆ ಅತಿ ಹೆಚ್ಚು ಕಾಳಜಿಯನ್ನು ತೋರಿದ ಮಹಾನ್ ಚೇತನ ಅವರು ಕಲಿಯುಗದಲ್ಲಿ ಅವರು ಮಾಡಿದ ಸಾಧನೆಗಳನ್ನು ಹೇಳಿದರೆ ಮುಗಿಯುವುದೇ ಇಲ್ಲ ಅಂತಹ ಮಹಾನ್ ಜ್ಞಾನಿಗಳ ಆರನೇ ವರ್ಷದ ಪುಣ್ಯ ಸ್ಮರಣೆಯಲ್ಲಿ ನಾನು ಭಾಗಿಯಾಗಿರುವುದೇ ಪುಣ್ಯ ಅವರ ಆಶೀರ್ವಾದ ಎಲ್ಲ ಜನರ ಮೇಲಿರಲಿ ಎಂದರು
ತಹಸೀಲ್ದಾರ್ ಕೆ. ಮಂಜುನಾಥ್ ಮಾತನಾಡಿ ಅವರ ಕಾರ್ಯಗಳು ಸದಾ ಕಾಲಕ್ಕೂ ಸ್ಮರಣೀಯ. ಅವರ ಆಶೀರ್ವಾದದಿಂದಲೇ ಈ ನಾಡಿನ ಹಲವರು ದೊಡ್ಡ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದ ಶ್ರೀಗಳ ಸೇವಾಕಾರ್ಯವನ್ನು ನಾವೆಲ್ಲರು ಮುಂದುವರೆಸುವ ಮೂಲಕ ಅವರಿಗೆ ನಮಸ್ಕರಿಸಬೇಕಿದೆ ಎಂದರು.ವೀರಶೈವ ಲಿಂಗಾಯತ ಸಮುದಾಯದ ಸೇವಾ ಟ್ರಸ್ಟ್ ಅಧ್ಯಕ್ಷ ಸಿದ್ದಮಲ್ಲಪ್ಪ ಮಾತನಾಡಿ, ನಾವು ಚಿಕ್ಕ ವಯಸ್ಸಿನಿಂದಲೂ ತುಮಕೂರಿನ ಸಿದ್ಧಗಂಗೆ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರನ್ನ ನೋಡಿ ಬೆಳೆದವರು ಅವರ ಪುಣ್ಯ ಸ್ಮರಣೆಯನ್ನು ಭಕ್ತಾದಿಗಳೆಲ್ಲರೂ ಸೇರಿ ಮಾಡುತ್ತಿದ್ದೇವೆ. ಅವರ ಸವಿ ನೆನಪಿಗಾಗಿ ದಾಸೋಹವನ್ನು ಏರ್ಪಡಿಸಿದ್ದೇವೆ. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯುತ್ತೇವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಸೇವಾ ಟ್ರಸ್ಟ್ ಉಪಾಧ್ಯಕ್ಷ ಹುಚ್ಚಣ್ಣ, ಕಾರ್ಯದರ್ಶಿ ಆರ್ ನಾಗರಾಜು, ಖಜಾಂಚಿ ಎಚ್ ಸಿ ಮಂಜುನಾಥ್, ಸಹ ಕಾರ್ಯದರ್ಶಿ ಪಂಚಾಕ್ಷರಯ್ಯ ಜಿಲ್ಲಾ ವೀರಶೈವ ಮಹಿಳಾ ಸಂಘದ ಅಧ್ಯಕ್ಷರಾದ ಮಮತಾ, ತಾಲೂಕು ಅಧ್ಯಕ್ಷರಾದ ವೇದಂಬಾ, ನಿರ್ದೇಶಕರಾದ ಶಿವಶಂಕರ್ ಲಿಂಗರಾಜು, ಬಸವರಾಜು, ಮಧುಸೂದನ್ ಶಿವಕುಮಾರ್, ಸಿದ್ದಗಂಗಯ್ಯ ಮುಕ್ಕಣ್ಣಯ್ಯ, ವಿಜಯಶಂಕರ್ ಜೆಡಿಎಸ್ ತಾಲೂಕ್ ಅಧ್ಯಕ್ಷರಾದ ಕಾಮರಾಜು, ಸೇರಿದಂತೆ ತಾಲೂಕು ಮುಖಂಡರು, ಭಕ್ತಾದಿಗಳು ಹಾಜರಿದ್ದರು.