ಕನ್ನಡಪ್ರಭ ವಾರ್ತೆ ಯಲ್ಲಾಪುರ
ತಾಲೂಕಿನ ಲಕ್ಷ್ಮೀ ವೇದವ್ಯಾಸ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಧನಗರಗೌಳಿ ಯುವ ಸೇನೆ ಹಮ್ಮಿಕೊಂಡಿದ್ದ ಉತ್ತರ ಕನ್ನಡ, ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯ ೧೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಈ ಸಮಾಜದಲ್ಲಿ ಇತ್ತೀಚೆಗೆ ಭಾರತೀಯ ಸೇನೆಗೆ ಸೇರುವ ಯುವಕರ ಸಂಖ್ಯೆ ಹೆಚ್ಚಾಗಿದೆ. ಸಮಾಜದ ಏಳಿಗೆಗಾಗಿ ಸಹಕಾರ ನೀಡಲು ಸದಾ ಸಿದ್ಧ ಎಂದರು.ಧನಗರಗೌಳಿ ಸಮಾಜದ ಮೊಟ್ಟ ಮೊದಲ ಲೆಕ್ಕಪರಿಶೋಧಕ ಭಾಗು ಡೋಯಿಪೊಡೆ ಮಾತನಾಡಿದರು.
ಧನಗರಗೌಳಿ ಸಮಾಜದ ಹಿರಿಯ ಬಮ್ಮು ಬೀರು ಎಡಗೆ, ಗ್ರಾಪಂ ಮಾಜಿ ಅಧ್ಯಕ್ಷ ವಿಠ್ಠು ಶೆಳಕೆ, ಯುವ ಸೇನೆಯ ಪ್ರಧಾನ ಕಾರ್ಯದರ್ಶಿ ಕೊಂಡು ಭಾವಧಾನೆ, ವೇಣುಗೋಪಾಲ್ ಪಟಕಾರೆ, ಉಪಾಧ್ಯಕ್ಷ ಬಾಬು ಶೇಂಡಗೆ, ಖಜಾಂಚಿ ಲಕ್ಷ್ಮಣ ಕೋಕರೆ, ಸಂಘಟನಾ ಕಾರ್ಯದರ್ಶಿ ಬಮ್ಮು ಫೋಂಡೆ, ಗ್ರಾಪಂ ಮಾಜಿ ಸದಸ್ಯ ನಯನಾ ಶೇಂಡಗೆ, ನಿವೃತ್ತ ಸೈನಿಕ ಧೂಳು ಶಿಂಧೆ, ಹಿರಿಯರಾದ ಧೂಳು ಡೋಯಿಪೊಡೆ, ಮಾಲು ವರಕ್, ಸಾಮು ಜೋರೆ, ರಾಮು ಬಿಚ್ಚುಕಲೆ, ಜಾನು ಪಾಂಡ್ರಮೀಸೆ, ಯುವ ಸೇನೆಯ ಪಾದಾಧಿಕಾರಿಗಳು ಹಾಗೂ ಇತರರು ಇದ್ದರು.