ಸಂತೋಷದ ಬುದುಕು ಕಟ್ಟಿಕೊಡುವುದೇ ಧರ್ಮ

KannadaprabhaNewsNetwork |  
Published : Oct 18, 2024, 01:17 AM ISTUpdated : Oct 18, 2024, 01:18 AM IST
ಜಾತ್ರಾ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ತಿಕೋಟಾ: ಸಂತೋಷದ ಬದುಕು ಕಟ್ಟಿಕೊಂಡು ಬದುಕುವುದೇ ಧರ್ಮ ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು. ತಾಲ್ಲೂಕಿನ ಬಾಬಾನಗರ ಗ್ರಾಮದಲ್ಲಿ ನಡೆದ ಹಜರತ್ ಬಾಬಾ ಪಾಣಿಸಾಹೇಬ ಉರುಸ್ ಹಾಗೂ ಸರ್ವಧರ್ಮ ಭಾವೈಕ್ಯತಾ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹಸಿದು ಬಂದವನಿಗೆ ಅನ್ನ, ನೀರು ಕೊಟ್ಟು, ದುಃಖದಿಂದ ಬಂದವರ ಕಣ್ಣಿರು ಒರೆಸಿ ಒಂದೆರಡು ಮಾತು ಹೇಳು ಅದು ಧರ್ಮ, ಇನ್ನೊಬ್ಬರ ಮನಸ್ಸಿಗೆ ದು:ಖ, ನೋವು ಕೊಡಲಾರದೇ ಇದ್ದರೆ ಅದು ಧರ್ಮ. ಧರ್ಮ ಅಂದರೆ ಸಂತೋಷವಾಗಿ ಬದುಕುವದು. ಸಂತೋಷದಿಂದ ಬದುಕುಕಟ್ಟಿಕೊಂಡು ಭಾವ್ಯಕ್ಯತೆಯಿಂದ ಕೂಡಿ ಬಾಳುವುದೇ ಧರ್ಮ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಕೋಟಾ: ಸಂತೋಷದ ಬದುಕು ಕಟ್ಟಿಕೊಂಡು ಬದುಕುವುದೇ ಧರ್ಮ ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಬಾಬಾನಗರ ಗ್ರಾಮದಲ್ಲಿ ನಡೆದ ಹಜರತ್ ಬಾಬಾ ಪಾಣಿಸಾಹೇಬ ಉರುಸ್ ಹಾಗೂ ಸರ್ವಧರ್ಮ ಭಾವೈಕ್ಯತಾ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹಸಿದು ಬಂದವನಿಗೆ ಅನ್ನ, ನೀರು ಕೊಟ್ಟು, ದುಃಖದಿಂದ ಬಂದವರ ಕಣ್ಣಿರು ಒರೆಸಿ ಒಂದೆರಡು ಮಾತು ಹೇಳು ಅದು ಧರ್ಮ, ಇನ್ನೊಬ್ಬರ ಮನಸ್ಸಿಗೆ ದು:ಖ, ನೋವು ಕೊಡಲಾರದೇ ಇದ್ದರೆ ಅದು ಧರ್ಮ. ಧರ್ಮ ಅಂದರೆ ಸಂತೋಷವಾಗಿ ಬದುಕುವದು. ಸಂತೋಷದಿಂದ ಬದುಕುಕಟ್ಟಿಕೊಂಡು ಭಾವ್ಯಕ್ಯತೆಯಿಂದ ಕೂಡಿ ಬಾಳುವುದೇ ಧರ್ಮ ಎಂದು ತಿಳಿಸಿದರು.ಚಿಗರಹಳ್ಳಿ ಮರುಳ ಶಂಕರದೇವರ ಗುರುಪೀಠದ ಶ್ರೀ ಸಿದ್ದಬಸವ ಕಬೀರ ಮಹಾಸ್ವಾಮೀಜಿ ಮಾತನಾಡಿ, ಧರ್ಮಗಳು ಯಾವವು ಜಗಳ ಹಚ್ಚುವದಿಲ್ಲ. ನಾವು ಭಾರತೀಯರು ಅನ್ನೋಭಾವ ಇಟ್ಟಕೊಂಡು ಭಾತೃತ್ವದಿಂದ ಬಂದಿದ್ದೇವೆ. ಎಲ್ಲ ಮುಸ್ಲಿಂರು ನಮ್ಮ ಅಣ್ಣತಮ್ಮವರು, ಯಾರೇ ಬಂದರೂ ಒಂದಾಗಿ ಇರುತ್ತೇವೆ ಎಂದು ತಿಳಿದುಕೊಳ್ಳಬೇಕು. ಇಲ್ಲಿರುವ ಸಂಸ್ಕೃತಿ ನಮ್ಮದು ಭಾವೈಕ್ಯತೆಯಿಂದ ಕೂಡಿ ಬಾಳಬೇಕು ಎಂದರು.ಹೂವಿನ ಹಿಪ್ಪರಗಿಯ ಗುರುಲಿಂಗಾನಂದ ಮಹಾರಾಜರು ಪತ್ರಿವನ ಮಠದ ಮಾತೋಶ್ರೀ ದ್ರಾಕ್ಷಾಯಣಿ ಅಮ್ಮನವರು ಮಾತನಾಡಿ, ತಾರತಮ್ಯ ಭೇದ ಭಾವ ಮಾಡದೆ ಬದುಕಬೇಕು. ಎಲ್ಲರೊಳಗೆ ಇರುವ ಪತಮಾತ್ಮ ಒಬ್ಬನೆ, ಅವನನ್ನ ಕೂಡಬೇಕಾದರೆ ಆಚರಣೆಗಳು ಮಾತ್ರ ಬೇರೆ ಇವೆ. ಜಾತಿ ನೋಡಿ ಮನುಷ್ಯ ನನ್ನು ಅಳಿಯಬೇಡಿ, ಜ್ಯೋತಿ ನೋಡಿ ಅಳಿಯಬೇಕು ಎಂದು ವಿವರಿಸಿದರು.ಸುಮಂಗಲೆಯರಿಂದ ಗ್ರಾಮದ ಹಿರೇಮಠ ಮಠದಿಂದ ದರ್ಗಾದವರೆಗೆ ಕುಂಭ ಮೇಳ ನೆರವೇರಿತು. ಸಾರೋಟದಲ್ಲಿ ಲಿಂಗೈಕ್ಯ ಷಣ್ಮುಖ ಶಿವಾಚಾರ್ಯರ ಭಾವಚಿತ್ರದೊಂದಿಗೆ ಸಕಲ ವಾಧ್ಯ ವೃಂದಗಳೊಂದಿಗೆ ಹಿಂದೂ ಮುಸ್ಲಿಂ ಸಹೋದರರು ಭಾವೈಕ್ಯತೆಯಿಂದ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ದಾನೇಶ್ವರಿ ರವಿಕುಮಾರ ನಾವಿ ಮೂರನೇ ತರಗತಿ ವಿದ್ಯಾರ್ಥಿಯೂ ಧರ್ಮಸಭೆಯಲ್ಲಿ ಭರತ ನಾಟ್ಯ ಮಾಡಿ ಎಲ್ಲರ ಗಮನ ಸೆಳೆದಳು.ಈ ಸಂದರ್ಭದಲ್ಲಿ ಖ್ಯಾಜಾ ಅಮೀನುದ್ದಿನ್‌ ದರ್ಗಾದ ಖ್ವಾಜಾ ಸಯ್ಯದ ಶಹಾ ಹೂಜುರ ಅಹ್ಮದ ಹುಸೇನಿ ಚಿಸ್ತಿ ಅಲ್‌ಖಾದ್ರಿ ಸಜ್ಜಾದನಸೀನ, ಕಮೀಟಿ ಮುಖ್ಯಸ್ಥ ನೂರುದಿನ್ ಮುಲ್ಲಾ, ಹಿರೇಮಠ ಮಠದ ಮುಖ್ಯಸ್ಥ ರಾಚಯ್ಯ ಹಿರೇಮಠ, ಆರ್.ಎಸ್.ಪಾಟೀಲ, ಬಾಬುರಾವ ಮಹಾರಾಜ, ಸಿದ್ರಾಮಯ್ಯ ಲಕ್ಕುಂಡಿಮಠ, ಈರಣಗೌಡ ರುದ್ರಗೌಡರ, ಅಮೋಘ ಗೌಡನವರ, ಅಣ್ಣಾಸಾಬ ಬಿರಾದಾರ, ಸುವರ್ಣ ಮಸಳಿ, ದುಂಡಪ್ಪ ತುಂಗಳ ಇದ್ದರು. ಎಸ್.ಬಿ.ಬಿರಾದಾರ, ಎಂ.ಐ.ಜಿಡ್ಡಿಕಾರ್ಯಕ್ರಮ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!