ಮಠಗಳಿಂದ ಧರ್ಮ ಸಂದೇಶ, ಪರಿಸರ ಕಾಳಜಿ: ಸಿದ್ದರಬೆಟ್ಟ ಶ್ರೀ

KannadaprabhaNewsNetwork |  
Published : Jun 07, 2024, 12:34 AM IST
ಶ್ರೀ ಕ್ಷೇತ್ರ ಸಿದ್ದರಾಬೆಟ್ಟ ವಾರ್ಷಿಕೋತ್ಸವ | Kannada Prabha

ಸಾರಾಂಶ

ಶ್ರೀ ಕ್ಷೇತ್ರ ಸಿದ್ದರಬೆಟ್ಟದಲ್ಲಿ ಶ್ರೀ ಬಾಳೆಹೊನ್ನೂರು ಖಾಸಾ ಶಾಖಾ ಮಠದ 18ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಜೂ.9 ರಂದು ಭಾನುವಾರ ಬೆಳಗ್ಗೆ 10-00 ಗಂಟೆಗೆ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಪುಸ್ತಕ ದಾಸೋಹ , ಮಹಾರುದ್ರಾಭಿಷೇಕ ಹಾಗೂ ಬಿಲ್ವಾರ್ಚನೆ,ಉಚಿತ ಸಾಮೂಹಿಕ ದೀಕ್ಷೆ, ಪಲ್ಲಕ್ಕಿ ಉತ್ಸವ, ಸಾಮೂಹಿಕ ವಿವಾಹ ಹಾಗೂ ಜನಜಾಗೃತಿ ಧರ್ಮ ಸಮಾರಂಭಗಳನ್ನು ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಮಠಗಳಲ್ಲಿ ಧರ್ಮದ ಸಂದೇಶದ ಜೊತೆಗೆ ಸಾಮಾಜಿಕ ಜಾಗೃತಿಗಳನ್ನು ಮೂಡಿಸುವ ಕೆಲಸಗಳನ್ನು ಮಾಡಿಕೊಂಡು ಬರಲಾಗುತ್ತಿದೆ, ಈ ನಿಟ್ಟಿನಲ್ಲಿ ಮಠಗಳಿಗೆ ಭಕ್ತರನ್ನು ಬರಮಾಡಿಕೊಳ್ಳುವ ಸಲುವಾಗಿ ವಾರ್ಷಿಕೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ನಗರದ ವೀರಶೈವ ಲಿಂಗಾಯಿತ ಸೇವಾ ಸಮಿತಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶ್ರೀ ಕ್ಷೇತ್ರ ಸಿದ್ದರಬೆಟ್ಟದಲ್ಲಿ ಶ್ರೀ ಬಾಳೆಹೊನ್ನೂರು ಖಾಸಾ ಶಾಖಾ ಮಠದ 18ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಜೂ.9 ರಂದು ಭಾನುವಾರ ಬೆಳಗ್ಗೆ 10-00 ಗಂಟೆಗೆ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಪುಸ್ತಕ ದಾಸೋಹ , ಮಹಾರುದ್ರಾಭಿಷೇಕ ಹಾಗೂ ಬಿಲ್ವಾರ್ಚನೆ,ಉಚಿತ ಸಾಮೂಹಿಕ ದೀಕ್ಷೆ, ಪಲ್ಲಕ್ಕಿ ಉತ್ಸವ, ಸಾಮೂಹಿಕ ವಿವಾಹ ಹಾಗೂ ಜನಜಾಗೃತಿ ಧರ್ಮ ಸಮಾರಂಭಗಳನ್ನು ಹಮ್ಮಿಕೊಳ್ಳಲಾಗಿದೆ , ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೃಹ ಮಂತ್ರಿ ಡಾ.ಜಿ.ಪರಮೇಶ್ವರ್ ವಹಿಸಲಿದ್ದು, ದಿವ್ಯ ಸಾನಿಧ್ಯವನ್ನು ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ವಹಿಸಲಿದ್ದಾರೆ, ಸರ್ವ ಧರ್ಮದ ಭಕ್ತಾಧಿಗಳು ಈ ಸಮಾರಂಭಕ್ಕೆ ಭಾಗವಹಿಸುವಂತೆ ಕೋರಿದರು.

ಸಮಾಜದಲ್ಲಿ ಧರ್ಮ ಜಾಗೃತಿಯ ಜೊತೆಗೆ ಪರಿಸರವನ್ನು ಉಳಿಸಿ ಬೆಳೆಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕಿದೆ. ಶ್ರೀ ಕ್ಷೇತ್ರದ ಸಮಾರಂಭದಲ್ಲಿ 6 ಸಾವಿರ ಸಸಿಗಳನ್ನು ರೈತರಿಗೆ ಉಚಿತವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.

1.25 ಕೋಟಿ ರು. ದಾಸೋಹ ಭವನ:

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ತಾಲೂಕಿನ ಮಂಚೇನಹಳ್ಳಿ ಶಶಿಧರ್ ಅವರ ಸಹಕಾರದಿಂದ 1.25 ಕೋಟಿ ರು. ಅನುದಾನ ಕೊಡಿಸಿದ್ದಾರೆ. ಇದರಿಂದ ಶ್ರೀ ಕ್ಷೇತ್ರದಲ್ಲಿ ದಾಸೋಹ ಭವನ, ಭಕ್ತಾಧಿಗಳಿಗೆ ತಂಗಲು ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ವಾರ್ಷಿಕೋತ್ಸವಕ್ಕೆ ಬಸ್ ವ್ಯವಸ್ಥೆ:

ಗೌರಿಬಿದನೂರು ಜು.9ರಂದು ಬೆಳಗ್ಗೆ 7 ಗಂಟೆಗೆ ಗೌರಿಬಿದನೂರು ನಗರದ ಮಧುಗಿರಿ ರಸ್ತೆಯಲ್ಲಿನ ಎಲ್‍ಐಸಿ ಕಚೇರಿ ಮುಂಭಾಗ, ಹೊಸೂರು ಕೋಟಾಲದಿನ್ನೆ ಬಳಿ, ತರಿದಾಳು ಗ್ರಾಮ, ಅಲಕಾಪುರ ಶ್ರೀ ಚನ್ನಸೋಮೇಶ್ವರ ಸ್ವಾಮಿ ದೇವಾಲಯದ ಆವರಣದಿಂದ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ, ಹೆಚ್ಚಿನ ವಿವರಗಳಿಗೆ ಬೋರ್‍ವೆಲ್ ಮಹೇಂದ್ರ-990253671, ಫ್ಯಾಕ್ಟರಿ ನಟರಾಜ್-9448257433, ಎನ್.ಆರ್.ರವಿಕುಮಾರ್-9880883941, ಟಿ.ಜಿ.ಗಂಗಾಧರಪ್ಪ-9449314206 ,ಗೌರೀಶ್-9480268168 ರವರನ್ನು ಸಂಪರ್ಕಿಸಬಹುದಾಗಿದೆ ಎಂದು ವೀರಶೈವ ಮಹಾಸಭಾದ ನಿರ್ದೇಶಕ ಟಿ.ಜಿ.ಗಂಗಾಧರಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶ್ರೀ ವೀರಶೈವ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಖಜಾಂಚಿ ನಂಜುಂಡಪ್ಪ, ನಿರ್ದೇಶಕರಾದ ಜಿ.ಆರ್.ಪ್ರವೀಣ್ ಕುಮಾರ್, ದೇವಿಮಂಜುನಾಥ್, ಎಚ್.ಪಿ.ನಟರಾಜ್, ಜಗದಾಂಬ, ಸತೀಶ್, ಫ್ಯಾಕ್ಟರಿ ನಟರಾಜ್, ನಾಗರಾಜ್, ಸಮುದಾಯದ ಮುಖಂಡರಾದ ಗೌರೀಶ್, ಎನ್.ಆರ್.ರವಿಕುಮಾರ್, ಟಿ.ಜಿ.ಗಂಗಾಧರಪ್ಪ, ಶಿವಕುಮಾರ್ ಆರಾಧ್ಯ, ಮಹೇಂದ್ರ, ಬಸವರಾಜು, ಮುಂತಾದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲೇ ಜಿಲ್ಲಾ ಕಸಾಪ ಸಾಕಷ್ಟು ಹೆಸರು ಮಾಡಿದೆ: ವಿ.ಹರ್ಷ ಪಟ್ಟೇದೊಡ್ಡಿ
ಶಾಲಾ ಶೈಕ್ಷಣಿಕ ಪ್ರವಾಸ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಯ ಭಾಗ: ಕೆ.ಎಂ.ಉದಯ್