ಧರ್ಮ, ದೇಶ, ಸಂಸ್ಕೃತಿ ರಕ್ಷಿಸಬೇಕಿದೆ: ವಿಧುಶೇಖರ ಶ್ರೀ

KannadaprabhaNewsNetwork |  
Published : Oct 25, 2026, 01:15 AM IST
ೇಿ | Kannada Prabha

ಸಾರಾಂಶ

ಶೃಂಗೇರಿ ಸಂಸ್ಕೃತಿ, ದೇಶ, ಧರ್ಮ ಶ್ರೇಷ್ಠವಾದುದು. ಧರ್ಮ ಒಂದು ಕಣ್ಣು, ದೇಶ ಇನ್ನೊಂದು ಕಣ್ಣು. ಇವೆರೆಡು ಮನುಷ್ಯನ ಎರಡು ಕಣ್ಣುಗಳಿದ್ದಂತೆ. ಇದರಲ್ಲಿ ಒಂದು ಕಣ್ಣು ಮಾತ್ರ ಸರಿಯಿದ್ದರೆ ಸಾಲದು. ಎರಡು ಕಣ್ಣುಗಳು ಸರಿಯಾಗಿರಬೇಕು. ಹಾಗೆಯೇ ನಮ್ಮ ಧರ್ಮ, ದೇಶ, ಸಂಸ್ಕೃತಿಗೆ ಯಾವುದೇ ರೀತಿ ತೊಂದರೆಯಾಗಂತೆ ರಕ್ಷಿಸಬೇಕು ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮಿ ಹೇಳಿದರು.

- ,ಶೃಂಗೇರಿಯಲ್ಲಿ ಭಾರತೀಯ ಸಂತ ಮಹಾಪರಿಷತ್ತಿನ ಮಹೋನ್ನತ ಕ್ರಿಯಾಯೋಜನೆಗಳ ಲೋಕಾರ್ಪಣೆ

ಕನ್ನಡಪ್ರಭ ವಾರ್ತೆ ಶೃಂಗೇರಿ

ಸಂಸ್ಕೃತಿ, ದೇಶ, ಧರ್ಮ ಶ್ರೇಷ್ಠವಾದುದು. ಧರ್ಮ ಒಂದು ಕಣ್ಣು, ದೇಶ ಇನ್ನೊಂದು ಕಣ್ಣು. ಇವೆರೆಡು ಮನುಷ್ಯನ ಎರಡು ಕಣ್ಣುಗಳಿದ್ದಂತೆ. ಇದರಲ್ಲಿ ಒಂದು ಕಣ್ಣು ಮಾತ್ರ ಸರಿಯಿದ್ದರೆ ಸಾಲದು. ಎರಡು ಕಣ್ಣುಗಳು ಸರಿಯಾಗಿರಬೇಕು. ಹಾಗೆಯೇ ನಮ್ಮ ಧರ್ಮ, ದೇಶ, ಸಂಸ್ಕೃತಿಗೆ ಯಾವುದೇ ರೀತಿ ತೊಂದರೆಯಾಗಂತೆ ರಕ್ಷಿಸಬೇಕು ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮಿ ಹೇಳಿದರು.

ಶೃಂಗೇರಿ ಮೆಣಸೆ ರಾಜೀವ ಗಾಂಧಿ ಸಂಸ್ಕೃತ ಕೇಂದ್ರೀಯ ವಿದ್ಯಾಲಯದಲ್ಲಿ ನಡೆದ ಭಾರತೀಯ ಸಂತಮಹಾ ಪರಿಷತ್ತಿನ ಎರಡು ಮಹೋನ್ನತ ಕ್ರಿಯಾಯೋಜನೆಗಳ ಐತಿಹಾಸಿಕ ಲೋಕಾರ್ಪಣೆ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಪ್ರಾಚೀನ ಕಾಲದಿಂದಲೂ ದೇಶದಲ್ಲಿ ಜನರು ಪರಸ್ಪರ ಐಕ್ಯತೆ, ಸೌದಾರ್ಧತೆಯಿಂದ ಉತ್ತಮ ಜೀವನ ನಡೆಸಿಕೊಂಡು ಬರುತ್ತಿದ್ದರು. ಮಧ್ಯದಲ್ಲಿ ಕೆಲವರು ಇದನ್ನು ಸಹಿಸದೇ ಅಸೂಯೆಯಿಂದ ದೇಶದ ಮೇಲೆ ಆಕ್ರಮಣ ಮಾಡಿ ಇಲ್ಲಿ ವೈಮನಸ್ಸು, ದ್ವೇಷ ಭಾವನೆ ಭಿತ್ತಿ ನಮ್ಮ ಸಂಸ್ಕೃತಿ, ಪರಂಪರೆ ಹಾಳು ಮಾಡುವ ಕೆಲಸ ಮಾಡಿದರು. ನಮ್ಮವರೂ ಅವರ ಪ್ರಭಾವಕ್ಕೆ ಒಳಗಾದರು. ಸರಿಪಡಿಸುವ ಅವಕಾಶ ಸಿಗಲಿಲ್ಲ. ವಿಭೇದಗಳು ಬೆಳೆಯುತ್ತಾ ಹೋಯಿತು ಎಂದರು.

ಭಾರತ ಹಿಂದಿನಿಂದಲೂ ವೈವಿಧ್ಯತೆಗೆ ಹೆಸರಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ವಿವಿಧ ರಾಜ್ಯಗಳು, ಭಾಷೆಗಳು, ಸಂಸ್ಕೃತಿಯಲ್ಲೂ ಐಕ್ಯತೆ ಕಾಣುತ್ತೇವೆ. ಜಗತ್ತಿಗೆ ಐಕ್ಯಮತ್ಯ ತೋರಿಸಿಕೊಟ್ಟ ದೇಶ ಭಾರತ. ಜಗತ್ತಿನಲ್ಲಿ ಇಂತಹ ದೇಶ ಮೊತ್ತೊಂದಿಲ್ಲ. ಹಾವು ಕಪ್ಪೆ ವೈರತ್ವ ಮರೆತು ಸ್ನೇಹ ಹೊಂದಿರುವುದನ್ನು ಕಂಡ ಶಂಕರರು ಶೃಂಗೇರಿ ಕ್ಷೇತ್ರದಲ್ಲಿ ಪೀಠ ಸ್ಥಾಪಿಸಿ ಐಕ್ಯತೆ ಸಾರಿದರು. ಪ್ರತಿಯೊಬ್ಬರೂ ಅವರವರ ಸಂಪ್ರದಾಯಗಳಿಗೆ ತಕ್ಕಂತೆ ಆಚರಣೆ ಮಾಡಿ ಜೀವನ ಸಾರ್ಥಕತೆ ಮಾಡಿಕೊಳ್ಳಬೇಕು. ಇನ್ನೊಂದು ಧರ್ಮವನ್ನು ಗೌರವಿಸುವ ಜೊತೆಗೆ ನಮ್ಮ ಧರ್ಮ, ಸಂಸ್ಕೃತಿ ಆಚರಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಶ್ರೀಗಳೇ ವಿನ್ಯಾಸ ಮಾಡಿದ ಓಂಕಾರದ ಹೊಸ ಲಾಂಛನ ಬಿಡುಗಡೆ ಗೊಳಿಸಿದರು. ಹರಿಹರಪುರ ಪೀಠಾಧೀಶ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಶ್ರೀಗಳು ಆಶೀರ್ವಚನ ನೀಡಿ ಭಾರತೀಯ ಸಂಸ್ಕೃತಿ ಶ್ರೇಷ್ಠ ಹಾಗೂ ಬಹುರೂಪಿ ಸಂಸ್ಕೃತಿಯಾಗಿದೆ. ಜಗತ್ತಿನ ಎಲ್ಲಾ ಸಂಸ್ಕೃತಿಗಳ ತಾಯಿಬೇರು. ಆದರೆ ಒಡೆದಾಳುವ ನೀತಿ, ಕುಟಿಲತೆಗಳಿಂದ ಇಂದು ಭಾರತೀಯ ಸಂಸ್ಕೃತಿ, ಧರ್ಮಕ್ಕೆ ತೊಂದರೆಯಾಗುತ್ತಿದೆ. ವೈವಿದ್ಯತೆ ವೈರುಧ್ಯವಾಗಿ ತಿರುಚಲಾಗುತ್ತಿದೆ. ನಮ್ಮ ಸಂಸ್ಕೃತಿ ಬಲಹೀನವಾಗುತ್ತಿದೆ. ವಿಶ್ವಶಾಂತಿಗೆ ಮೂಲವಾದ ಭಾರತೀಯ ಸಂಸ್ಕೃತಿ, ಪರಂಪರೆ ರಕ್ಷಣೆ ಮಾಡಬೇಕಿದೆ.

ಭಾರತೀಯ ಸಂಸ್ಕೃತಿಯ ರೂವಾರಿಗಳು ಸಂತರು. ಇವರು ಧರ್ಮ, ಸಂಸ್ಕೃತಿ, ಪರಂಪರೆ ಉಳಿಸಿ ರಕ್ಷಿಸುತ್ತಿದ್ದಾರೆ. ಸಂತರು ಧರ್ಮ, ಸಂಸ್ಕೃತಿ ಉಳಿವು, ರಕ್ಷಣೆಗೆ ಕೈಗೊಂಡ ಎರಡು ಮಹೋನ್ನತ ಕ್ರಿಯಾ ಯೋಜನೆಗಳು ಬಹುಮುಖ್ಯವಾಗಿವೆ. ಏಕರೂಪ ಆಚಾರ ಸಂಹಿತೆ, ಏಕರೂಪ ಸಾಮಾನ್ಯ ಶಿಕ್ಷಣ ಎರಡು ಮಹೋನ್ನತ ಕ್ರಿಯಾ ಯೋಜನೆಗಳಾಗಿವೆ. ಇಲ್ಲಿ ಯಾರು ಮೇಲು ಕೀಳಲ್ಲ. ಎಲ್ಲರಿಗೂ ಸಮಾನ ಅವಕಾಶಗಳಿವೆ. ಎಲ್ಲರನ್ನು ಒಂದೇ ಚೌಕಟ್ಟಿನಲ್ಲಿ ತರುವುದು ಇದರ ಮುಖ್ಯ ಉದ್ದೇಶ ಎಂದರು.

ಜೈನ,ಸಿಖ್,ಭೌದ್ಧ ಸೇರಿದಂತೆ ಎಲ್ಲಾ ಧರ್ಮಗಳನ್ನು ಸಂತರನ್ನು ಸೇರಿಸಿ ಸಾಂಘಿಕ ಶಕ್ತಿ ಸಂಘಟಿಸುವ ಮೂಲಕ ಧರ್ಮ, ಸಂಸ್ಕೃತಿಯನ್ನು ಕಾಪಾಡಬೇಕಿದೆ. ರಾಷ್ಟ್ರೀಯತೆ ಗಟ್ಟಿಗೊಳಿಸಬೇಕಿದೆ. ಎಲ್ಲರೂ ಶ್ರದ್ಧೆಯಿಂದ ಇದನ್ನು ಪಾಲಿಸಿ ಎಂದರು.

ಶ್ರೀ ಶೈಲ ಮಠದ ಡಾ.ಡೆನ್ನಸಿದ್ದರಾಮಪಂಡಿತಾರಾಧ್ಯ ಸ್ವಾಮೀಜಿ, ಶಕಟಪುರ ಪೀಠದ ಶ್ರೀ ಕೃಷ್ಣಾನಂದ ತೀರ್ಥ ಸ್ವಾಮಿ, ಆದಿಚುಂಚನ ಗಿರಿ ಪೀಠದ ಡಾ.ನಿರ್ಮಲಾನಂದ ನಾಥ ಸ್ವಾಮೀಜಿ, ಶ್ರೀ ಕ್ಷೇತ್ರ ರಾಜರಾಜೇಶ್ವರಿ ನಗರದ ಶ್ರೀ ಜಯೇಂದ್ರಪುರಿ ಸ್ವಾಮೀಜಿ, ಸಿಂಹನಗದ್ದೆ ಮಠದ ಶ್ರೀ ಲಕ್ಷ್ಮೀ ಸೇನಾ ಭಟ್ಟಾರಕ ಸ್ವಾಮೀಜಿ, ಗೋಲ್ಡನ್ ಟೆಪಲ್ ನ ತುಲ್ಕು ಜೋದ್ರಾ ಅವತಾರಿ, ಬೆಂಗಳೂರಿನ ಗುರು ಸಿಂಗ್ ಗುರುದ್ವಾರದ ಶ್ರೀ ಜ್ಞಾನಿ ಸತ್ಪಾಲ್ ಸಿಂಗ್ ಜಿ, ಒರಿಸ್ಸಾ ಜಗನ್ನಾಥ ಪುರಿ ಮಹಿಪ್ರಕಾಶ ಪೀಠದ ಶುಭಾನಂದ್ ಮಹಾರಾಜ್ ಜಿ, ಬಿಹಾರ ಬೋಜಪುರ್ ಜ್ಞಾನವೃಕ್ಷ ಆಶ್ರಮದ ರಾಮ್ ಜೀವನ್ ದಾಸ್ ಮಹಾರಾಜ್ ಜೀ ಮಾತನಾಡಿದರು. ಶ್ರೀ ಮಠದ ಆಡಳಿತಾಧಿಕಾರಿ ಪಿ.ಎ,ಮುರುಳಿ ಇದ್ದರು.

24 ಶ್ರೀ ಚಿತ್ರ 1-ಶೃಂಗೇರಿ ಮೆಣಸೆ ರಾಜೀವಗಾಂಧಿ ಸಂಸ್ಕೃತಿ ಪರಿಸರದಲ್ಲಿ ಭಾರತೀಯ ಸಂತ ಮಹಾಪರಿಷತ್ ಎರಡು ಮಹೋನ್ನತ ಕ್ರಿಯಾ ಯೋಜನೆಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.

24 ಶ್ರೀ ಚಿತ್ರ 2-ಕಾರ್ಯಕ್ರಮದಲ್ಲಿ ಸಾವಿರಾರು ಜನರು ಪಾಲ್ಗೊಂಡಿರುವುದು,

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆಯ ಸಿಂಚನ ನಡುವೆಯೂ ಧಮ್ಮ ನಡಿಗೆ
ಶಿಕ್ಷಣದ ಮೂಲಕವೇ ಸಮುದಾಯ ಪರಿವರ್ತನೆ ಸಾಧ್ಯ