ದಾಬಸ್‍ಪೇಟೆ: ಧರ್ಮಸ್ಥಳದ ಬಗ್ಗೆ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ ಆ.23ರಂದು ಶನಿವಾರ ನೆಲಮಂಗಲ ವಿಧಾನಸಭಾ ಕ್ಷೇತ್ರದಿಂದ ಸುಮಾರು 150ಕ್ಕೂ ಹೆಚ್ಚು ಕಾರುಗಳಲ್ಲಿ ಪಕ್ಷದ ಮುಖಂಡರು ಸೇರಿದಂತೆ ಕಾರ್ಯಕರ್ತರು ಕ್ಷೇತ್ರದ ಜನತೆಯೊಂದಿಗೆ ಧರ್ಮಸ್ಥಳ ಚಲೋ ಹಮ್ಮಿಕೊಂಡಿದ್ದೇವೆ ಎಂದು ಕಾಂಗ್ರೆಸ್ ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ಧೈರ್ಯ ತುಂಬುವ ಕೆಲಸ:
ನೆಲಮಂಗಲ ವಿಧಾನಸಭಾ ಕ್ಷೇತ್ರದಿಂದ ಸುಮಾರು 150 ಕಾರುಗಳಲ್ಲಿ ನಾವು ಹಾಗೂ ನಮ್ಮ ಪಕ್ಷದ ಮುಖಂಡರು ಧರ್ಮಸ್ಥಳ ಚಲೋ ಮಾಡಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಅವರ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬುವ ಕೆಲಸ ಮಾಡಲಿದ್ದೇವೆ ಎಂದರು.ನೋಂದಣಿ ಮಾಡಿಸಿ:
ಶನಿವಾರದಂದು ನಮ್ಮ ಜೊತೆ ಬರಲಿರುವ ಸಾರ್ವಜನಿಕರು, ಭಕ್ತರು ನಮ್ಮ ಪಕ್ಷದ ಮುಖಂಡರನ್ನು ಭೇಟಿ ಮಾಡಿ ಅಥವಾ ಕರೆ ಮಾಡಿ ನೋಂದಣಿ ಮಾಡಿಸಬಹುದು ಎಂದು ಮನವಿ ಮಾಡಿದರು.