ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್.ಚಾ.ನಗರ ಜಿಲ್ಲೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್,ಜಿಲ್ಲಾ ಜನಜಾಗೃತಿ ವೇದಿಕೆ ವತಿಯಿಂದ ಅಯೋಜಿಸಲಾಗಿದ್ದ ಗಾಂಧಿ ಸ್ಮರಣೆ ಮತ್ತು ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕಉದ್ಘಾಟಿಸಿ ಮಾತನಾಡಿದರು.
ಶ್ರೀಕ್ಷೇತ್ರದ ಧರ್ಮಸ್ಥಳ ಕ್ಷೇತ್ರದ ಡಾ .ವೀರೇಂದ್ರ ಹಾಗೂ ಅವರ ಧರ್ಮಪತ್ನಿ ಡಾ.ಹೇಮಾವತಿ ನೇತೃತ್ವದಲ್ಲಿ ಕೈಗೊಂಡಿರುವ ಈ ಕಾರ್ಯಕ್ರಮಗಳು ಸಂಸ್ಕಾರಯುತ ಸಮಾಜ ಹಾಗೂ ಆರ್ಥಿಕ ಉತ್ತೇಜನಕ್ಕಾಗಿ ಸಹಕಾರಿಯಾಗಿದೆ. ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಯುವ ಪೀಳಿಗೆ ವ್ಯಸನಮುಕ್ತರಾಗಬೇಕು ಎಂಬ ಮಹಾನ್ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.ಸಮಾಜದಲ್ಲಿ ಯುವಕರು ದುಶ್ಚಟದಲ್ಲಿ ಸಿಲುಕಿಕೊಂಡು ಅವರ ಸಂಸಾರವನ್ನೆ ಹಾಳು ಮಾಡಿಕೊಂಡಿರುವ ಅನೇಕ ನಿರ್ದೇಶನವನ್ನು ನಾವು ನೋಡಿದ್ದೇವೆ. ಅಂತಹಲವರ ವ್ಯಸನ ಮುಕ್ತರಾಗಿಸುವಲ್ಲಿ ಅವರ ಜೀವನ ಹಸನಾಗಿಸುವಲ್ಲಿ ಈಸಂಸ್ಥೆ ಸ್ಪಂದಿಸುತ್ತಿದೆ ಅಲ್ಲದೆ ಈಸಂಸ್ಥೆ ಮಹಿಳೆಯರಿಗೆ ಕಡಿಮೆ ಮಹಿಳೆಯರಿಗೆ ಸಾಲ ಸೌಲಭ್ಯ ಕಲ್ಪಿಸಿ ಅವರ ಆರ್ಥಿಕ ಪರಿಸ್ಥಿತಿಯನ್ನುಉತ್ತಮಪಡಿಸುವುದರ ಅರ್ಥಿಕ, ಶೈಕ್ಷಣಿಕ ಹಾಗೂ ಕೃಷಿ ಚಟುವಟಿಕೆಗಳಿಗೂ ಉತ್ತೇಜನ ನೀಡುತ್ತಿದೆ. ಇದರಿಂದ ಲಕ್ಷಾಂತರ ಜನರ ಆರ್ಥಿಕ ಅಭಿವೃದ್ದಿಗೆ ಸ್ವಾವಲಂಭಿ ಬದುಕಿಗೆ ಸಹಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಡಿಗುಂಡದ ವಿರಕ್ತ ಮಠಾಧೀಶ ಶ್ರೀಕಂಠಸ್ವಾಮಿಜಿ, ಬೇತೆಲ್ ಚರ್ಚ್ ಫಾದರ್ ರೆ.ಡಿ.ಜೋಶುವಾ ಪ್ರಸನ್ನಕುಮಾರ್, ಫಾಸಿ ಹಜರತ್ ಇಮಾಮ್ ಮೊಹಬೂಬಿಯಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ನಿರ್ದೇಶಕ ಯೋಗೇಶ್, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎಚ್.ಎಂ.ಪ್ರಸಾದ್, ಅಣಗಳ್ಳಿ ಬಸವರಾಜು ಇತರರು ಹಾಜರಿದ್ದರು.