ಧರ್ಮಸ್ಥಳ ಸಂಘದಿಂದ ತೆವಡಹಳ್ಳಿ ಕೆರೆ ಜೀರ್ಣೋದ್ಧಾರ

KannadaprabhaNewsNetwork |  
Published : Oct 10, 2025, 01:00 AM IST
9ಎಚ್ಎಸ್ಎನ್15 :  | Kannada Prabha

ಸಾರಾಂಶ

ತೆವಡಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆರ್ಥಿಕ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿ ಹಾಗೂ ಕೆರೆ ಸಮಿತಿ, ಗ್ರಾಮಸ್ಥರ ಸಹಭಾಗಿತ್ವದೊಂದಿಗೆ ೮೯೨ನೇ ನಮ್ಮೂರು ನಮ್ಮ ಕೆರೆ ನಾಮಫಲಕ ಅನಾವರಣ ಹಾಗೂ ಕೆರೆ ಹಸ್ತಾಂತರ ಕಾರ್ಯಕ್ರಮವನ್ನು ನಡೆಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಉತ್ತಮವಾದ ಕೆಲಸವನ್ನು ಮಾಡುತ್ತಿದ್ದು, ನಮ್ಮ ಊರಿನಲ್ಲಿ ಅನುಕೂಲವಾಗುವಂತೆ ಕೆರೆಯ ಹೂಳನ್ನು ತೆಗೆದು ಜಾನುವಾರುಗಳಿಗೆ ರೈತರಿಗೆ ಅನುಕೂಲವಾಗುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರಾದ ಡಾ. ಡಿ ವೀರೇಂದ್ರ ಹೆಗ್ಗಡೆ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕಿನ ತೆವಡಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆರ್ಥಿಕ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿ ಹಾಗೂ ಕೆರೆ ಸಮಿತಿ, ಗ್ರಾಮಸ್ಥರ ಸಹಭಾಗಿತ್ವದೊಂದಿಗೆ ೮೯೨ನೇ ನಮ್ಮೂರು ನಮ್ಮ ಕೆರೆ ನಾಮಫಲಕ ಅನಾವರಣ ಹಾಗೂ ಕೆರೆ ಹಸ್ತಾಂತರ ಕಾರ್ಯಕ್ರಮವನ್ನು ನಡೆಸಲಾಯಿತು.

ಹೊಳೆನರಸೀಪುರ ತಾಲೂಕು ದಂಡಾಧಿಕಾರಿ ರೇಣುಕುಮಾರ್ ನಾಮಫಲಕ ಅನಾವರಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಬಾಗಿನ ಸಮರ್ಪಣೆಯನ್ನು ಜಿಲ್ಲಾ ನಿರ್ದೇಶಕರಾದ ಯೋಗೀಶ್ ಹಾಗೂ ಯೋಜನಾಧಿಕಾರಿಗಳಾದ ರಾಘವೇಂದ್ರ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಯೋಗೀಶ್‌, ರಾಜ್ಯಾದ್ಯಂತ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ೮೯೨ನೇ ಕೆರೆ ಹೂಳು ತೆಗೆದು ಅಭಿವೃದ್ಧಿಪಡಿಸಲಾಗಿದೆ. ಇದರ ಮಹತ್ವ ಹಾಗೂ ಪ್ರಯೋಜನಗಳ ಮಾಹಿತಿ ನೀಡಿದರು.

ಗ್ರಾಮ ಪಂಚಾಯತಿ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಶ್ರೀ ಕ್ಷೇತ್ರದಿಂದ ಅನುದಾನ ಪಡೆದು ನಮ್ಮೂರ ಕೆರೆಗೆ ಪುನರ್ಜೀವ ನೀಡಿದಂತಾಗಿದೆ. ಇದರ ಅನುಕೂಲ ಗ್ರಾಮಸ್ಥರು ಪಡೆಯಲು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಕೆಲವು ಕಿಡಿಗೇಡಿಗಳು ದುಷ್ಕೃತ್ಯ ನಡೆಸುತ್ತಿದ್ದು ಇದರ ವಿರುದ್ಧ ನಾವೆಲ್ಲರೂ ಸಿಡಿದು ನಿಲ್ಲುವ ಕಾಲ ಬಂದಿದೆ. ಶ್ರೀ ಮಂಜುನಾಥ ಕಿಡಿಗೇಡಿಗಳ ನಾಶ ಮಾಡೇ ಮಾಡುತ್ತಾನೆ. ಧರ್ಮಕ್ಕೆ ಸತ್ಯಕ್ಕೆ ಯಾವಾಗಲು ಜಯ ಎಂದು ತಿಳಿಸಿದರು.

ಕೆರೆ ಸಮಿತಿ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಉತ್ತಮವಾದ ಕೆಲಸವನ್ನು ಮಾಡುತ್ತಿದ್ದು, ನಮ್ಮ ಊರಿನಲ್ಲಿ ಅನುಕೂಲವಾಗುವಂತೆ ಕೆರೆಯ ಹೂಳನ್ನು ತೆಗೆದು ಜಾನುವಾರುಗಳಿಗೆ ರೈತರಿಗೆ ಅನುಕೂಲವಾಗುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರಾದ ಡಾ. ಡಿ ವೀರೇಂದ್ರ ಹೆಗ್ಗಡೆ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು.

ಗ್ರಾಮ ಲೆಕ್ಕಾಧಿಕಾರಿ ಹರೀಶ್, ಹೊಳೆನರಸೀಪುರ ಗ್ರಾಮ ಪಂಚಾಯತಿ ಸದಸ್ಯ ನಂಜೇಗೌಡ, ಕೆರೆ ಅಭಿಯಂತರ ಕಾರ್ತಿಕ್, ಸಮಿತಿಯ ಸದಸ್ಯರಾದ ಮಂಜೇಗೌಡ, ನಾರಾಯಣ್, ವರದೇಗೌಡ, ರವಿಕುಮಾರ್, ಪುಟ್ಟೇಗೌಡ, ಅವಂತೇಶ್, ಮೇಲ್ವಿಚಾರಕರಾದ ನರಸಿಂಹಮೂರ್ತಿ, ಕೃಷಿ ಮೇಲ್ವಿಚಾರಕ ಲಿಂಗರಾಜ, ಯೂಟ್ಯೂಬರ್ ಶಶಿಕುಮಾರ್, ಸೇವಾ ಪ್ರತಿನಿಧಿ ಪ್ರಭಾವತಿ, ನೀಲಾವತಿ, ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಠ, ಮಂದಿರಗಳಿಂದ ಸನಾತನ ಧರ್ಮ ಉಳಿದಿದೆ
ಬೆಳಗಾವಿ ಅಧಿವೇಶನದಲ್ಲಿ ವಿಪಕ್ಷಗಳು ರಾಜ್ಯ ಸರ್ಕಾರದ ಕೈ ಕಟ್ಟೋಕಾಗಲ್ಲ