ಕುಕನೂರು: ಪಟ್ಟಣದ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರದಿಂದ ಬಡ ಜನರಿಗೆ ಹಾಗೂ ಗ್ರಾಮೀಣ ಜನರಿಗೆ ಸ್ಥಳೀಯವಾಗಿ ಚಿಕಿತ್ಸೆ ಸಿಗುವುದರಿಂದ ಅನುಕೂಲವಾಗಲಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ಪಟ್ಟಣದಲ್ಲಿ ೧೦೦ಬೇಡ್ ಆಸ್ಪತ್ರೆ ನಿರ್ಮಾಣಕ್ಕೆ ₹೪೨ ಕೋಟಿ ಅನುದಾನ ನೀಡಲಾಗಿದೆ. ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವದು. ಆಸ್ಪತ್ರೆಗಳಲ್ಲಿ ವೈದ್ಯರ ಕೊರೆತೆ ಕಾಣುತ್ತಿದೆ. ವೈದ್ಯರ ಕೊರತೆ ನೀಗಿಸಲು 25 ವರ್ಷ ಸೇವೆ ಸರ್ಕಾರಿ ಆಸ್ಪತ್ರೆಯಲ್ಲಿ ಮಾಡಿದರೆ ಮಾತ್ರ ಪದವಿ ಸರ್ಟಿಫಿಕೇಟ್ ನೀಡುವ ಕಾನೂನು ಜಾರಿಗೆ ತರಬೇಕು ಎಂದರು.
ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರು, ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ರಾಮಕೃಷ್ಣ, ಡಾ. ಮಮತಾ, ಡಾ. ಪ್ರಿಯಾಂಕಾ, ಡಾ. ಸುಷ್ಮಾ, ಇಓ ಸಂತೋಷ ಪಾಟೀಲ್ ಬಿರಾದಾರ, ಕಾಶೀಮಸಾಬ್ ತಳಕಲ್, ಸತ್ಯನಾರಾಯಣಪ್ಪ ಹರಪನಹಳ್ಳಿ, ಸಿದ್ದಯ್ಯ ಕಳ್ಳಿಮಠ, ಖಾಸಿಂಸಾಬ್ ತಳಕಲ್ಲ, ಸಂಗಮೇಶ ಗುತ್ತಿ, ಶಿವನಗೌಡ ದಾನರಡ್ಡಿ, ಹಂಪಯ್ಯಸ್ವಾಮಿ, ಪಪಂ ಮುಖ್ಯಾಧಿಕಾರಿ ನಾಗೇಶ, ಯಂಕಣ್ಣ ಯರಾಶಿ, ಹನಮಂತಗೌಡ ಚಂಡೂರು, ಕೆರೆಬಸಪ್ಪ ನಿಡಗುಂದಿ, ರಾಮಣ್ಣ ಬಂಕದಮನಿ, ಮಂಜುನಾಥ ಯಡಿಯಾಪೂರ ಇತರರು ಇದ್ದರು.ಕೋರ್ಟ ತೀರ್ಮಾನದ ನಂತರ ತಾಲೂಕಾಡಳಿತ ಕಟ್ಟಡ ನಿರ್ಮಾಣ
ನೂತನ ಕುಕನೂರು ತಾಲೂಕಾಡಳಿತ ಕಟ್ಟಡ ನಿರ್ಮಾಣಕ್ಕೆ ಗುದ್ನೇಪ್ಪನಮಠದ ಜಾಗದ ಕುರಿತು ನ್ಯಾಯಾಲಯದಲ್ಲಿ ಹೋರಾಟ ಇದ್ದು, ಕೋರ್ಟ ತೀರ್ಮಾನವಾದ ಬಳಿಕ ಕಟ್ಟಡ ನಿರ್ಮಿಸಲಾಗುವುದು. ಈಗಾಗಲೇ ಓಪನ್ ಕೋರ್ಟಿನಲ್ಲಿ ತೀರ್ಮಾನ ಆಗಿದೆ. ಅದು ಬರವಣಿಗೆ ರೂಪದಲ್ಲಿ ಬರಬೇಕಾಗಿದೆ ಎಂದರು.ಕಳೆದ ಬಿಜೆಪಿ ಸರ್ಕಾರದಲ್ಲಿ ಮನೆಗಳಿಗಾಗಿ ₹12000 ಕೋಟಿ ಪೆಂಡಿಂಗ್ ಬಿಲ್ ಬಾಕಿ ಉಳಿಸಿದ್ದರಿಂದ ಮನೆಗಳ ಹಂಚಿಕೆ ಆಗುತ್ತಿಲ್ಲ.ಈಗಾಗಲೇ ಅದರಲ್ಲಿ 6 ಸಾವಿರ ಕೋಟಿ ಬಾಕಿ ಹಣ ಪಾವತಿಸಿದ್ದೇವೆ. ಬೊಮ್ಮಾಯಿ ಸರ್ಕಾರದಲ್ಲಿ 2 ಲಕ್ಷದ 47 ಸಾವಿರ ಕೋಟಿ ಕಾಮಗಾರಿ ಹಣವಿಲ್ಲದೆ ಘೋಷಣೆ ಮಾಡಿದ್ದರು. ಅದನ್ನು ಕಾಂಗ್ರೆಸ್ ಸರ್ಕಾರ ಸರಿಪಡಿಸುತ್ತಿದೆ ಎಂದು ಶಾಸಕ ರಾಯರಡ್ಡಿ ಹೇಳಿದರು.
ಬರ ಪರಿಹಾರಕ್ಕೆ ಸೂಚನೆ:ಯಲಬುರ್ಗಾ,ಕುಕನೂರು ತಾಲೂಕಿಗೆ ಬರಪಡಿಹಾರ ನೀಡಿಲ್ಲ ಎಂಬ ಪ್ರಶ್ನೆಗೆ ಶಾಸಕ ಬಸವರಾಜ ರಾಯರಡ್ಡಿ ಅವರು, ಬರ ಪರಿಹಾರದ ಬಗ್ಗೆ ವಿಸೃತ ವರದಿ ನೀಡಲು ತಹಸೀಲ್ದಾರ ಅವರಿಗೆ ಸೂಚಿಸಿದ್ದೇನೆ. ಅವರು ಸಹ ಸರ್ಕಾರಕ್ಕೆ ಪತ್ರ ಬರೆಯಲು ಹೇಳಿದ್ದೇನೆ ಎಂದರು.