ಶಿವಕುಮಾರ ಕುಷ್ಟಗಿ
1985ರಲ್ಲಿ ರಸ್ತೆಗಾಗಿ ಮೀಸಲಾದ ಜಾಗವನ್ನು 2019- 20ರಲ್ಲಿ ದಾನಪತ್ರದ ಮೂಲಕ ನಗರಸಭೆಗೆ ನೀಡಲಾಗಿದೆ ಎಂಬ ದಾಖಲೆ ಸೃಷ್ಟಿಸಲಾಗಿದ್ದು. ಈಗಾಗಲೇ ಸಾರ್ವಜನಿಕ ಬಳಕೆಗೆ ಮೀಸಲಾಗಿದ್ದ ಜಾಗವನ್ನು ಮತ್ತೆ ದಾನವಾಗಿ ಸ್ವೀಕರಿಸಿರುವುದು ಹೇಗೆ? ಎಂಬ ಪ್ರಶ್ನೆ ಉದ್ಭವಿಸಿದೆ.ಯಾರೂ ಗಮನಿಸುತ್ತಿಲ್ಲ: ಸಂತೋಷ ವಿಶ್ವಕರ್ಮ ಎಂಬವರು ಕೂಡಾ 15 ವರ್ಷಗಳ ಹಿಂದೆ ಖರೀದಿಸಿದ ಪ್ಲಾಟ್ ನಂ. 31/ಎ ಮತ್ತು 30/ಎ ನಿವೇಶನವನ್ನು ಕೂಡ ಅತಿಕ್ರಮಿಸಲಾಗಿದೆ ಎಂಬ ಆರೋಪ ಮಾಡಿದ್ದಾರೆ. ಈ ಕುರಿತು ನಗರಸಭೆ, ಭೂದಾಖಲೆ ಇಲಾಖೆ ಹಾಗೂ ಜಿಲ್ಲಾಧಿಕಾರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರಕಿಲ್ಲ. ಈ ಬಗ್ಗೆ ಎಷ್ಟೇ ಮನವಿ ಮಾಡಿದರೂ ಯಾರೂ ಗಮನಿಸುತ್ತಿಲ್ಲ ಎನ್ನುವುದು ಅವರ ಆರೋಪ.
ಕ್ರಿಮಿನಲ್ ಕೇಸ್: ಸಾರ್ವಜನಿಕ ರಸ್ತೆಯನ್ನು ಅತಿಕ್ರಮಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಪ್ರಭಾವಿಗಳ ರಕ್ಷಣೆಯಿಂದಲೇ ತಪ್ಪಿತಸ್ಥರ ಮೇಲೆ ಯಾವುದೇ ಕ್ರಮವಾಗುತ್ತಿಲ್ಲ. ನಮಗೆ ಒತ್ತಡವಿದೆ ಎಂದು ಹಲವಾರು ಅಧಿಕಾರಿಗಳು ತಮ್ಮ ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ. ಯಾವುದೇ ತಪ್ಪು ಮಾಡದ, ಏನೂ ಅರಿಯದ ಜನರಿಗೆ ಈ ರೀತಿ ನಿರಂತರ ತೊಂದರೆಯಾದರೆ ಯಾರ ಬಳಿ ನಮ್ಮ ಸಮಸ್ಯೆ ಹೇಳುವುದು ಎನ್ನುವುದೇ ತಿಳಿಯದಾಗಿದೆ ಎಂದು ತೊಂದರೆಗೊಳಗಾದ ವ್ಯಕ್ತಿ ಶಿವಕುಮಾರ ಅಣ್ಣಿಗೇರಿ ತಿಳಿಸಿದರು.ಮತ್ತೆ ಸರ್ವೇ: ಅತಿಕ್ರಮಣದ ಬಗ್ಗೆ ದೂರು ಬಂದಿದೆ. ಈ ಹಿಂದಿನ ಸರ್ವೇ ವರದಿಯಲ್ಲಿ ಅತಿಕ್ರಮಣ ಇಲ್ಲ ಎಂದು ತಿಳಿಸಲಾಗಿದೆ. ಈಗ ಮತ್ತೆ ಸರ್ವೇ ನಡೆಸಿ ವರದಿಯನ್ನು ಲೋಕಾಯುಕ್ತಕ್ಕೆ ಕಳುಹಿಸಲಾಗುವುದು ಎಂದು ನಗರಸಭೆ ಆಯುಕ್ತ ರಾಜಾರಾಮ ಪವಾರ ತಿಳಿಸಿದರು.