ಗೃಹಲಕ್ಷ್ಮಿ ಸಹಕಾರ ಸಂಘ ಆರಂಭಕ್ಕೆ ನಿರ್ದೇಶನ

KannadaprabhaNewsNetwork |  
Published : Oct 30, 2025, 01:45 AM IST
 ನರಸಿಂಹರಾಜಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ ಅಧ್ಯಕ್ಷತೆಯಲ್ಲಿ  ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ ನಡೆಯಿತು. | Kannada Prabha

ಸಾರಾಂಶ

ನರಸಿಂಹರಾಜಪುರ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತವನ್ನು ಪ್ರಾರಂಭಿಸಲು ಸರ್ಕಾರದಿಂದ ನಿರ್ದೇಶನ ಬಂದಿದ್ದು ಜಿಲ್ಲೆಯಲ್ಲಿ ಸಾಂಕೇತಿಕವಾಗಿ ಗೃಹಲಕ್ಷ್ಮಿ ಯೋಜನೆಗಳ 65 ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸಲು ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಸಿಡಿಪಿಒ ವೀರಭದ್ರಯ್ಯ ಮಾಜಿಗೌಡ್ರ ತಿಳಿಸಿದರು.

ವೀರಭದ್ರಯ್ಯ ಮಾಹಿತಿ । ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತವನ್ನು ಪ್ರಾರಂಭಿಸಲು ಸರ್ಕಾರದಿಂದ ನಿರ್ದೇಶನ ಬಂದಿದ್ದು ಜಿಲ್ಲೆಯಲ್ಲಿ ಸಾಂಕೇತಿಕವಾಗಿ ಗೃಹಲಕ್ಷ್ಮಿ ಯೋಜನೆಗಳ 65 ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸಲು ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಸಿಡಿಪಿಒ ವೀರಭದ್ರಯ್ಯ ಮಾಜಿಗೌಡ್ರ ತಿಳಿಸಿದರು.

ತಾಪಂ ಸಾಮರ್ಥ್ಯಸೌಧದಲ್ಲಿ ಮಂಗಳವಾರ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಿಂದ ಒಟ್ಟು 65 ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸಬೇಕಾಗಿದೆ. ಎನ್‌.ಆರ್ ಪುರ ತಾಲೂಕಿನಿಂದ 8 ಅರ್ಹ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಂದ ಸಾಂಕೇತಿಕವಾಗಿ ಮೊದಲ ಹಂತದಲ್ಲಿ ಉದ್ದೇಶಿತ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತಕ್ಕೆ ಷೇರುದಾರರನ್ನಾಗಿ ಮಾಡಲು ಅರ್ಜಿ ಪಡೆಯಬೇಕಿದೆ. ಇದು ಪ್ರಾರಂಭದ ಹಂತವಾಗಿರುವುದರಿಂದ ಸಾಂಕೇತಿಕವಾಗಿ ಅರ್ಜಿಯನ್ನು ಸ್ವೀಕರಿಸ ಲಾಗುವುದು. ನಂತರದ ದಿನಗಳಲ್ಲಿ ಸಂಘದ ಸಾಧಕ ಬಾಧಕಗಳನ್ನು ಗಮನಿಸಿ ಎಲ್ಲಾ ಫಲಾನುಭವಿಗಳನ್ನು ಷೇರುದಾರನ್ನಾಗಿ ಮಾಡುವ ಚಿಂತನೆ ನಡೆದಿದೆ. ಆದ್ದರಿಂದ ಸಂಘ ನೋಂದಣಿ ಮಾಡುವ ಪೂರ್ವದಲ್ಲಿ ಷೇರುದಾರರಿಂದ ಷೇರು ಮೌಲ್ಯ ಎಂದು ₹1 ಸಾವಿರ, ಷೇರು ಶುಲ್ಕ ₹100 ಹಾಗೂ ಪ್ರವೇಶ ಶುಲ್ಕವೆಂದು ₹50 ರುಪಾಯಿ ಸೇರಿ ಒಟ್ಟು ₹1250 ಪಡೆಯಬೇಕಾಗಿದೆ. ಷೇರುದಾರರಿಂದ ಷೇರು ಮೌಲ್ಯವನ್ನು ಸಂಗ್ರಹಿಸಲು ಮತ್ತು ಸಂಗ್ರಹಿಸಿದ ಷೇರು ಮೊತ್ತವನ್ನು ಅಪೆಕ್ಸ್ ಬ್ಯಾಂಕ್ ಬೆಂಗಳೂರಿನಲ್ಲಿ ಜಮೆ ಮಾಡುವಂತೆ ಸುತ್ತೋಲೆ ಬಂದಿರುತ್ತದೆ ಎಂದು ಸಭೆಗೆ ತಿಳಿಸಿದರು.

ಆಹಾರ ಇಲಾಖೆ ಅಧಿಕಾರಿ ಗಣಪತಿ ಮಾತನಾಡಿ, ಕೇಂದ್ರ ಸರ್ಕಾರದಿಂದ 2711.85 ಕೆ.ಜಿ ಅಕ್ಕಿ ಹಾಗೂ ಅನ್ನಭಾಗ್ಯ ಯೋಜನೆಗೆ ರಾಜ್ಯ ಸರ್ಕಾರದಿಂದ 2166.05 ಕೆ.ಜಿ ಒಟ್ಟು 8477.90 ಕೆ.ಜಿ ಅಕ್ಕಿ ಅಕ್ಟೋಬರ್‌ ವರೆಗೆ ಬಂದಿದೆ. ಇಂದಿರಾ ಕಿಟ್ ಸರಬರಾಜು ಆಗಿಲ್ಲ. ಡಿಸೆಂಬರ್ ಮಾಹೆಯಲ್ಲಿ ಇಂದಿರಾ ಕಿಟ್ ಸರಬ ರಾಜು ಆಗಬಹುದು. ಯಾವುದೇ ಅಧಿಕೃತ ಆದೇಶ ಬಂದಿಲ್ಲ ಎಂದು ಸಭೆಗೆ ತಿಳಿಸಿದರು.

ಸದಸ್ಯ ಟಿ.ಟಿ.ಇಸ್ಮಾಯಿಲ್, ಸದಸ್ಯರಾದ ಇಂದಿರಾನಗರ ರಘು, ಹೂವಮ್ಮ, ಅಪೂರ್ವ, ನಿತ್ಯಾನಂದ, ಕ್ಷೇತ್ರ ಕುಮಾರ್, ಸಂದೀಪ, ನಾಗರಾಜ, ಬೇಸಿಲ್, ಸೈಯದ್‌ ಶಫೀರ್‌ ಅಹಮ್ಮದ್, ಟಿ.ಟಿ.ಇಸ್ಮಾಯಿಲ್, ಜಯರಾಮ್, ತಾಪಂ ಸಿಬ್ಬಂದಿ ಶ್ರೀದೇವಿ ಇದ್ದರು.

ಫೋಟೋ:

ನರಸಿಂಹರಾಜಪುರದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉರ್ದು ಮುಸ್ಲಿಂರಿಗಷ್ಟೇ ಸೀಮಿತವಲ್ಲ ಜನಸಾಮಾನ್ಯರ ಭಾಷೆ
2 ಕೋಟಿ ವಂಚನೆ ಪ್ರಕರಣ: ಶರವಣ ಅಂದರ್