ಕನ್ನಡಪ್ರಭ ವಾರ್ತೆ ಅಥಣಿ
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತ್ವರಿತಗತಿಯಲ್ಲಿ ಸ್ಪಂದಿಸುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಪ್ರಜಾಸೇವೆ ಆಂದೋಲನ ಸಭೆ ಪ್ರತಿ ಶನಿವಾರ ನಡೆಸುವಂತೆ ಆದೇಶಿಸಿದ್ದಾರೆ ಎಂದರು.ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಜನಸಾಮಾನ್ಯರು, ರೈತರು, ಸಾರ್ವಜನಿಕರೇ ನಾಯಕರು. ಅವರ ದುಡಿಮೆಯ ಪರಿಶ್ರಮದಿಂದ ಸರ್ಕಾರಕ್ಕೆ ಬರುವ ತೆರಿಗೆಯ ಹಣದಿಂದಲೇ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಪ್ರತಿ ತಿಂಗಳ ವೇತನ ದೊರಕುತ್ತದೆ. ಹೀಗಾಗಿ ಅವರೇ ನಮ್ಮ ನಾಯಕರು, ನಾವೆಲ್ಲರೂ ಅವರಿಗೆ ಉತ್ತಮ ಸೇವೆ ಒದಗಿಸುವ ಸೇವಕರು ಎಂದು ಹೇಳಿದರು.ವಿವಿಧ ಸಮಸ್ಯೆಗಳ 120 ಅರ್ಜಿ:
ಈ ಪ್ರಜಾ ಸೇವೆ ಆಂದೋಲನ ಸಭೆಯಲ್ಲಿ ಕೊಕಟನೂರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಂದ 120ಕ್ಕೂ ಅಧಿಕ ಅರ್ಜಿಗಳು ನೋಂದಣಿಯಾದವು. ಅವುಗಳಲ್ಲಿ ಪಿಂಚಣಿ ಸ್ಥಗಿತದ ಕೆಲವು ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸಲಾಯಿತು. ಇನ್ನುಳಿದ ಸಮಸ್ಯೆಗಳ ಅರ್ಜಿಯನ್ನು ಪರಿಶೀಲಿಸಿ ಹಂತ ಹಂತವಾಗಿ ಬಗೆಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ವಿಶೇಷವಾಗಿ ಗ್ರಾಮಮಟ್ಟದಲ್ಲಿ ಸ್ವಚ್ಛತೆ ಮತ್ತು ಕಸದ ವಿಲೇವಾರಿ ಸಮಸ್ಯೆ, ಇ-ಸ್ವತ್ತು ತಂತ್ರಾಂಶದ ಸಮಸ್ಯೆ, ಆಶ್ರಯ ಮನೆಗಳ ಬೇಡಿಕೆ, ಗಂಗಾ ಕಲ್ಯಾಣ ಯೋಜನೆಯ ಅನುಷ್ಠಾನ, ವಿದ್ಯುತ್ ಸಮಸ್ಯೆ, ಗ್ರಾಮೀಣ ರಸ್ತೆಗಳು ಮತ್ತು ಮಾಶಾಸನ ಸ್ಥಗಿತಗೊಂಡ ಬಗ್ಗೆ ಅನೇಕ ಗ್ರಾಮೀಣ ಸಮಸ್ಯೆಗಳು ಈ ಪ್ರಜಾ ಸೇವೆ ಆಂದೋಲನ ಸಭೆಯಲ್ಲಿ ಚರ್ಚೆಯಾದವು.ತಹಸಿಲ್ದಾರ್ ಸಿದರಾಯ ಬೋಸಗಿ, ಡಿವೈಎಸ್ಪಿ ಪ್ರಶಾಂತ್ ಮುನ್ನೊಳ್ಳಿ, ನೀರಾವರಿ ಅಧಿಕಾರಿ ಪ್ರವೀಣ್ ಹುಣಸಿಕಟ್ಟಿ, ಉಪ ತಹಸಿಲ್ದಾರ್ ಮಹದೇವ ಬಿರಾದಾರ ಸೇರಿ ತಾಲೂಕ ಮಟ್ಟದ ಅಧಿಕಾರಿಗಳು ಮತ್ತು ಗ್ರಾಮೀಣ ಅಧಿಕಾರಿಗಳು ಸಾರ್ವಜನಿಕರ ಅರ್ಜಿಗಳಿಗೆ ಭರವಸೆ ನೀಡಿದರು. ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ದತ್ತ ವಾಸ್ಟರ ಇದ್ದರು.ಕೋಟ್ಪ್ರಜಾಸೇವೆ ಆಂದೋಲನದಲ್ಲಿ ಬಂದ ಅರ್ಜಿಗಳನ್ನು ಪರಿಶೀಲಿಸಿ ಒಂದು ವಾರದೊಳಗೆ ಅವುಗಳಿಗೆ ಪರಿಹಾರ ರೂಪಿಸಬೇಕು. ತಮ್ಮ ಹಂತದಲ್ಲಿ ಕಾನೂನು ಚೌಕಟ್ಟಿನಲ್ಲಿ ಮಾಡಲು ಬರದಿದ್ದರೆ ಹಿಂಬರಹ ನೀಡಬೇಕು. ಮೇಲಧಿಕಾರಿಗಳು ಒಂದು ವೇಳೆ ಕಾನೂನು ಚೌಕಟ್ಟಿನಲ್ಲಿ ಮಾಡಲು ಸಾಧ್ಯವಿದ್ದರೂ ಕುಂಟು ನೆಪ ಹೇಳಿದರೆ ಅಂತಹ ಅಧಿಕಾರಿಗಳ ವಿರುದ್ಧ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ. - ಲಕ್ಷ್ಮಣ ಸವದಿ, ಸಹಕಾರ ಸಚಿವ