ಪರ್ವತಾರೋಹಣಕ್ಕೆ ದೇಹ ಮತ್ತು ಮನಸ್ಸು ಸಮಚಿತ್ತದಿಂದ ಕೂಡಿರಬೇಕು.
ಗದಗ: ಶಿಸ್ತು, ನಿರಂತರ ಪ್ರಯತ್ನ ಮತ್ತು ದೈಹಿಕ-ಮಾನಸಿಕ ಸದೃಢತೆಯೇ ಯಶಸ್ಸಿನ ಮೂಲ ಎಂದು ಹಿಮಾಲಯ ಪರ್ವತಾರೋಹಿ ಹನುಮಂತರಾವ್ ಕುಲಕರ್ಣಿ ಹೇಳಿದರು.
ಗದಗ ನಗರದ ಬಾಲ ವಿನಾಯಕ ವಿದ್ಯಾನಿಕೇತನ ಶಾಲೆಯಲ್ಲಿ ಒಲಿಂಪಿಕ್ ಧ್ವಜಾರೋಹಣ ನೆರವೇರಿಸಿ, ಕ್ರೀಡಾಜ್ಯೋತಿ ಬೆಳಗಿಸಿ ಎರಡು ದಿನಗಳ ಶಾಲಾ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪರ್ವತಾರೋಹಣಕ್ಕೆ ದೇಹ ಮತ್ತು ಮನಸ್ಸು ಸಮಚಿತ್ತದಿಂದ ಕೂಡಿರಬೇಕು. ಕ್ರೀಡಾಪಟುಗಳು ಹಿರಿಯರು, ಪೋಷಕರು ಮತ್ತು ಶಿಕ್ಷಕರಿಗೆ ಗೌರವ ನೀಡುವ ಗುಣ ಬೆಳೆಸಿಕೊಳ್ಳಬೇಕು ಎಂದರು. ಶಾಲಾ ನಿರ್ದೇಶಕ ವಿನಾಯಕ ಆರ್. ಮಾತನಾಡಿ, ಸಾಧನೆಗೆ ವಯಸ್ಸು ಕೇವಲ ಸಂಖ್ಯೆಯಷ್ಟೇ ಹೊರತು ಅಡ್ಡಿಯಲ್ಲ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಕಾರ್ಯದರ್ಶಿ ಎಸ್. ರವಿ, ಇಎಲ್‌ಸಿ ಮುಖ್ಯಸ್ಥೆ ಮಲ್ಲಿಕಾ ಆರ್., ಉಪ ನಿರ್ದೇಶಕಿ ಗಾಯತ್ರಿ ವಿ., ಮುಖ್ಯ ಅತಿಥಿ ಸ್ನೇಹಿತ ಆದಿತ್ಯ ಲಮಾಣಿ, ಪ್ರಾಚಾರ್ಯ ವಿ.ಎಂ. ಅಡನೂರ, ಉಪ ಪ್ರಾಚಾರ್ಯ ಪಿ.ಜಿ. ಬ್ಯಾಳಿ, ದೈಹಿಕ ಶಿಕ್ಷಕ ವಿನೇಶ ಎಚ್. ಬೊಮ್ಮನಪಾದ್, ಆರ್ಯವೀರ ಹಂಚಿನಾಳ, ಸಮರ್ಥ ರಾವ್, ತೇಜಸ್ ಕುಲಕರ್ಣಿ, ರಾಕೇಶ ಆನೆಗುಂದಿ, ತನುಶ್ರೀ ಬಿ. ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ಜರುಗಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.