ಶಿಸ್ತು, ಸಂಯಮ, ಶ್ರದ್ಧೆ ಮತ್ತು ಪರಿಶ್ರಮ ಗುರಿ ಸಾಧಿಸುವ ಸಾಧನಗಳು: ಪ್ರೊ.ಕೆ.ಆರ್.ವೀರೇಶ್,

KannadaprabhaNewsNetwork |  
Published : Nov 29, 2024, 01:03 AM IST
ಎಸ್.ಜೆ,.ಎಂ.ಪ್ರಥಮ ದರ್ಜೆ ಕಾಲೇಜಿನಲ್ಲಿ 2024-25ನೇ ಸಾಲಿನ ಶೈಕ್ಷಣಿಕ  ಸಾಲಿನ ವಿದ್ಯಾರ್ಥಿ ಒಕ್ಕೂಟ ಉದ್ಗಾಟನೆ | Kannada Prabha

ಸಾರಾಂಶ

ತರೀಕೆರೆ, ಶಿಸ್ತು, ಸಂಯಮ, ಶ್ರದ್ಧೆ ಮತ್ತು ಪರಿಶ್ರಮಗಳೇ ಗುರಿ ಸಾಧಿಸುವ ಸಾಧನಗಳು ಎಂದು ರಾಜ್ಯಶಾಸ್ತ್ರದ ನಿವೃತ್ತ ಸಹ ಪ್ರಾಧ್ಯಾಪಕ ಪ್ರೊ.ಕೆ.ಆರ್.ವೀರೇಶ್ ಹೇಳಿದರು.

ಎಸ್.ಜೆ.ಎಂ. ಪ್ರಥಮ ದರ್ಜೆ ಕಾಲೇಜಿನಲ್ಲಿ 2024-25ನೇ ಸಾಲಿನ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಒಕ್ಕೂಟ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಶಿಸ್ತು, ಸಂಯಮ, ಶ್ರದ್ಧೆ ಮತ್ತು ಪರಿಶ್ರಮಗಳೇ ಗುರಿ ಸಾಧಿಸುವ ಸಾಧನಗಳು ಎಂದು ರಾಜ್ಯಶಾಸ್ತ್ರದ ನಿವೃತ್ತ ಸಹ ಪ್ರಾಧ್ಯಾಪಕ ಪ್ರೊ.ಕೆ.ಆರ್.ವೀರೇಶ್ ಹೇಳಿದರು.

ಪಟ್ಟಣದ ಎಸ್.ಜೆ.ಎಂ. ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆ, ಕನ್ನಡ ರಾಜ್ಯೋತ್ಸವ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಮೊಬೈಲ್ ಸಂಸ್ಕೃತಿಯಿಂದ ಹೊರ ಬರಬೇಕೆಂದು ತಿಳಿಸಿದರು. ಪುಸ್ತಕಗಳು ಮೌನವಾಗಿರುತ್ತವೆ ಆದರೆ ಓದಿದ ವಿದ್ಯಾರ್ಥಿಗಳಿಗೆ ಧೈರ್ಯದಿಂದ ಮಾತನಾಡಲು ಮತ್ತು ಹೋರಾಡಲು ಕಲಿಸುತ್ತವೆ. ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡು ಬದುಕನ್ನು ರೂಪಿಸಿಕೊಳ್ಳಬೇಕು. ಬಾಳೆಗಿಡಕ್ಕೊಂದೇ ಗೊನೆ ಇರುವಂತೆ ಬಾಳಿಗೊಂದು ಗುರಿ ಇರಲಿ ಶಿಸ್ತು, ಸಂಯಮ, ಶ್ರದ್ಧೆ ಮತ್ತು ಪರಿಶ್ರಮ ಇದ್ದಲ್ಲಿ ಮಾತ್ರ ಗುರಿ ಸಾಧಿಸಲು ಸಾಧ್ಯ ಎಂದು ಅವರು ಹೇಳಿದರು.ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಜೆ.ರಘು ಮಾತನಾಡಿ ಒಕ್ಕೂಟದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ ಎನ್.ಎಸ್.ಎಸ್. ಪ್ರತಿಜ್ಞಾವಿಧಿ ಬೋಧಿಸಿದರು.ಐ.ಕ್ಯೂ.ಎ.ಸಿ. ಕೋ-ಆರ್ಡಿನೇಟರ್ ಡಾ.ಸದಾಶಿವನಾಯ್ಕ ಮಾತನಾಡಿ, ಉತ್ತಮ ಬದುಕು ಕಟ್ಟಿಕೊಳ್ಳಲು ಉತ್ತಮ ಕೌಶಲ್ಯಗಳ ಅವಶ್ಯಕತೆ ಇದೆ. ವಿದ್ಯಾರ್ಥಿ ದೆಸೆಯಲ್ಲಿ ಉತ್ತಮ ಕೌಶಲ್ಯ ರೂಢಿಸಿಕೊಂಡಲ್ಲಿ ಉತ್ತಮ ಉದ್ಯೋಗ ಹುಡುಕಿ ಕೊಂಡು ಬರುತ್ತದೆ. ತಂದೆ ತಾಯಿ, ಗುರುಹಿರಿಯರನ್ನು, ಗೌರವಿಸುತ್ತಾ ಜೀವನದಲ್ಲಿ ನಾಡು ನುಡಿ ಬಗ್ಗೆ ಅಭಿಮಾನ ಹೊಂದುತ್ತಾ ಸಾಮಾಜಿಕ ಕಳಕಳಿಯುಳ್ಳವರಾಗಿ ಎಂದು ತಿಳಿಸಿದರು. ಪ್ರಾಚಾರ್ಯ ಡಾ.ಕೆ.ಜಿ.ಚವಾಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಸವತತ್ವದ ಹಾದಿಯಲ್ಲಿ ನಡೆಯುತ್ತಿರುವ ಎಸ್.ಜೆ.ಎಂ. ಪ್ರಥಮ ದರ್ಜೆ ಕಾಲೇಜು ನಾಡಿಗೆ ಹೆಸರು ವಾಸಿಯಾಗಿದ್ದು ಕಾಲೇಜಿನ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಹೊರಹಾಕಲು ಕ್ರೀಡೆ, ಎನ್.ಎಸ್.ಎಸ್., ಯುವ ರೆಡ್‌ಕ್ರಾಸ್, ವೇದಿಕೆಗಳನ್ನು ಬಳಸಿಕೊಳ್ಳಿ. ತಮಗೆ ಆಸಕ್ತಿ ಇರುವ ಯಾವುದಾದರೂ ಒಂದು ಕ್ಷೇತ್ರ ಆಯ್ಕೆ ಮಾಡಿಕೊಂಡು ಅದರಲ್ಲಿ ಶಿಸ್ತು ಮತ್ತು ಶ್ರದ್ಧೆಯಿಂದ ತಮ್ಮನ್ನು ತಾವು ತೊಡಗಿಸಿ ಕೊಂಡಲ್ಲಿ ಯಶಸ್ಸು ತಮ್ಮನ್ನು ಹುಡುಕಿಕೊಂಡು ಬರುತ್ತದೆ.

ಮಹಾವಿದ್ಯಾಲಯದಲ್ಲಿ ಓದಿದ ಮೂರು ಜನ ಹಾಲಿ, ಮಾಜಿ ವಿಧಾನಸಭಾ ಸದಸ್ಯರು ಈ ಕಾಲೇಜಿನ ಹಳೆ ವಿದ್ಯಾರ್ಥಿ ಗಳಾಗಿದ್ದು ಇನ್ನೂ ಅನೇಕ ಹಳೆಯ ವಿದ್ಯಾರ್ಥಿಗಳು ಸುಂದರವಾದ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದ ಅವರು ನಾಡು-ನುಡಿಗೆ, ನಾಡಿನ ಸಂಸ್ಕೃತಿಗೆ, ಮಾತೃಭಾಷೆ ಕನ್ನಡಕ್ಕೆ ಹೆಚ್ಚು ಗೌರವ ಕೊಡುವ ಮೂಲಕ ಕನ್ನಡಕ್ಕೆ ಆಧ್ಯತೆ ನೀಡಬೇಕೆಂದುತಿಳಿಸಿದರು.ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವರುಣನಾಯ್ಕ ಎಚ್.ಆರ್. ಸಹ ಕಾರ್ಯದರ್ಶಿ ಇಂದುಶ್ರೀ ವಿದ್ಯಾರ್ಥಿ ಒಕ್ಕೂಟದ ಎಲ್ಲಾ ಚಟುವಟಿಕೆಗಳನ್ನು ಶಿಸ್ತುಬದ್ಧವಾಗಿ ನಡೆಸಿಕೊಂಡು ಹೋಗಲು ಬೋಧಕ ಮತ್ತು ಬೊಧಕೇತರ ಹಾಗೂ ವಿದ್ಯಾರ್ಥಿ ಸ್ನೇಹಿತರ ಸಹಕಾರ ತುಂಬಾ ಮುಖ್ಯ ಎಂದರು.

2024-25ನೇ ಶೈಕ್ಷಣಿಕ ಸಾಲಿನಲ್ಲಿ ಬಿ.ಕಾಂನಲ್ಲಿ ಶೇ.87 ಅಂಕಗಳಿಸಿದ ಸೈಯಿದಾ ಅಲ್ಪಿಯಾ ಹಾಗೂ ಬಿ.ಎನಲ್ಲಿ ಶೇ.೮೬ ಅಂಕಗಳಿಸಿದ ಪಲ್ಲವಿ ಎಲ್. ಪ್ರಥಮ ಸ್ಥಾನಗಳಿಸಿದ ಪ್ರಯುಕ್ತ ಮಹಾವಿದ್ಯಾಲಯದ ದತ್ತಿ ನಿದಿಯಿಂದ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಾಡಗೀತೆ ಹಾಗೂ ಹಚ್ಚೇವು ಕನ್ನಡದ ದೀಪ ಗೀತೆಯನ್ನು ಚಂದನಾ, ಅರುಣ ಪಿ. ಮತ್ತು ಸಂಗಡಿಗರು ಹಾಡಿದರು. ಶಾರೂನ್ ಫರ್ನಾಂಡಿಸ್, ಇಂದುಶ್ರೀ ಎ. ಶಶಿಕಲಾ, ಭಾವನಾ ಐ.ಎಂ. ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗ ಭಾಗವಹಿಸಿದ್ದರು.

28ಕೆಟಿಆರ್.ಕೆ.6ಃ

ತರೀಕೆರೆಯಲ್ಲಿ ಎಸ್.ಜೆ.ಎಂ.ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆಯಲ್ಲಿ ನಿವೃತ್ತ ರಾಜ್ಯಶಾಸ್ತ್ರ ಸಹ ಪ್ರಾಧ್ಯಾಪಕ ಪ್ರೊ.ಕೆ.ಆರ್.ವೀರೇಶ್, ಪ್ರಾಚಾರ್ಯ ಡಾ.ಕೆ.ಜಿ.ಚವಾಣ, ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಜೆ.ರಘು ಮತ್ತಿತರರು ಭಾಗವಹಿಸಿದ್ದರು.

PREV

Recommended Stories

ಛಾಯಾಗ್ರಾಹಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ
ಹಿಂದೂ ಸಮಾಜ ಸಂಘಟನೆಗೆ ಆರ್‌ಎಸ್ಎಸ್‌ ಪಾತ್ರ ಅಗಾಧ