ಒತ್ತಡ ನಿವಾರಣೆಗೆ ಪ್ರವಚನ ಸಹಕಾರಿ

KannadaprabhaNewsNetwork |  
Published : Jul 23, 2025, 04:16 AM IST
೨೨ ವೈಎಲ್‌ಬಿ ೦೨ಯಲಬುರ್ಗಾ ತಾಲೂಕಿನ ಬೇವೂರಿನ ಶ್ರೀ ಜ್ಞಾನದೇವ ಮಹಾರಾಜರ ೫೨ನೇ ಪುಣ್ಯಾರಾಧನೆ ನಿಮಿತ್ತ ಏರ್ಪಡಿಸಿದ್ದ ಶ್ರೀ ಸಿದ್ಧಾರೂಢರ ಪುರಾಣ ಮಹಾಮಂಗಲೋತ್ಸವದಲ್ಲಿ ಸ್ವಾಮೀಜಿಗಳು ಮತ್ತು ಗಣ್ಯರಿಗೆ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಒತ್ತಡದ ಬದುಕಿನಿಂದ ಹೊರಬರಲು ಪ್ರತಿಯೊಬ್ಬರೂ ಪುರಾಣ, ಪ್ರವಚನ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ. ಎಲ್ಲರೂ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಜತೆಗೆ ದಾನ, 0ಧರ್ಮ ಮಾಡುವ ಮೂಲಕ ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು.

ಯಲಬುರ್ಗಾ:

ಮಠ ಹಾಗೂ ಆಶ್ರಮಗಳು ಪ್ರವಚನ ಕಾರ್ಯಕ್ರಮ ಏರ್ಪಡಿಸುವುದರಿಂದ ಸಾಮಾಜಿಕ ಸ್ತರ ವಿನ್ಯಾಸದಲ್ಲಿ ಶಾಂತಿ ನೆಲೆಸಲು ಸಹಕಾರಿಯಾಗಿದೆ ಎಂದು ಹಂಪಿಯ ಶ್ರೀವಿದ್ಯಾನಂದ ಭಾರತಿ ಸ್ವಾಮೀಜಿ ಹೇಳಿದರು.

ತಾಲೂಕಿನ ಬೇವೂರು ಗ್ರಾಮದ ಶ್ರೀಜ್ಞಾನದೇವ ಮಹಾರಾಜರ ೫೨ನೇ ಪುಣ್ಯಾರಾಧನೆ ನಿಮಿತ್ತ ಏರ್ಪಡಿಸಿದ್ದ ಶ್ರೀಸಿದ್ಧಾರೂಢರ ಪುರಾಣ ಮಹಾಮಂಗಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಒತ್ತಡದ ಬದುಕಿನಿಂದ ಹೊರಬರಲು ಪ್ರತಿಯೊಬ್ಬರೂ ಪುರಾಣ, ಪ್ರವಚನ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ. ಎಲ್ಲರೂ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಜತೆಗೆ ದಾನ, ಧರ್ಮ ಮಾಡುವ ಮೂಲಕ ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು. ತಾಯಂದಿರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಜತೆಗೆ ಸಂಸ್ಕೃತಿ, ಸಂಸ್ಕಾರ ಕಲಿಸಬೇಕು ಎಂದರು.

ದದೇಗಲ್ ಸಿದ್ಧಾರೂಢ ಆಶ್ರಮದ ಆತ್ಮಾನಂದ ಸ್ವಾಮೀಜಿ, ಭಾಗ್ಯನಗರದ ಅಜ್ಜೇಶ್ವರ ಮಠದ ಅಜ್ಜೇಶ್ವರ ಸ್ವಾಮೀಜಿ, ತಾವರಗೇರಾ ಸಿದ್ಧಾರೂಢ ಆಶ್ರಮದ ಕುಮಾರ ಸ್ವಾಮೀಜಿ, ವೀರಾಪುರದ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಾರ್ಮೋನಿಯಂ ಹನುಮಂತಪ್ಪ ತಳವಾರ, ಮೌನೇಶ ಮೇಟ್ರಿ ತಬಲಾ ಸಾಥ್ ನೀಡಿದರು. ಈ ವೇಳೆ ಪ್ರವಚನಕಾರರಾದ ಪಾಚಾಸಾಬ್ ಓಜನಹಳ್ಳಿ, ಸೋಮಣ್ಣ ಇಂಗಳದಾಳ, ಶರಣಪ್ಪ ಗುದಗಿ, ವೀರೇಶ ಶಿವಲಿಂಗಪ್ಪ, ಮುಖಂಡರಾದ ಮಲ್ಲಪ್ಪ ಪೂಜಾರ, ಚನ್ನವೀರಪ್ಪ ಹಳ್ಳಿ, ದ್ಯಾಮಣ್ಣ ಪೂಜಾರ, ಜಯನಗೌಡ ತುಪ್ಪದ, ಗವಿಸಿದ್ದಪ್ಪ ಹಡಪದ, ಯಮನಪ್ಪ ಗಡ್ಡದ, ಬಸಪ್ಪ ಈಳಿಗೇರ, ಯಮನಪ್ಪ ಪೂಜಾರ, ಶಂಕ್ರಪ್ಪ ತುಪ್ಪದ, ದ್ಯಾಮಣ್ಣ ಗೊಂದಿ, ಮರಿಶಾಂತಗೌಡ ಪೊಲೀಸ್‌ಪಾಟೀಲ್ ಹಾಗೂ ಆಶ್ರಮದ ಪದಾಧಿಕಾರಿಗಳು ಮತ್ತು ಗ್ರಾಮದ ಗುರು ಹಿರಿಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!