ಸಚಿವ ಜಮೀರಅಹ್ಮದ ಖಾನರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ

KannadaprabhaNewsNetwork |  
Published : Nov 15, 2024, 12:33 AM IST
ಸಚಿವ ಜಮೀರಅಹ್ಮದ ಖಾನರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ವಕ್ಫ್ ಸಚಿವರ ಈ ಮಾತು ಕರ್ನಾಟಕದ ಸಮಸ್ತ ಕುಮಾರಣ್ಣ ಅಭಿಮಾನಿಗಳಿಗೆ ಮತ್ತು ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಮನಸ್ಸಿಗೆ ನೋವು ತಂದಿದೆ

ಗದಗ: ವಕ್ಫ್ ಮತ್ತು ವಸತಿ ಸಚಿವ ಜಮೀರಅಹ್ಮದ ಖಾನ ವಿರುದ್ಧ ಕಾನೂನು ಕ್ರಮ ಕೈಗೊಂಡು ಸಚಿವ ಸಂಪುಟದಿಂದ ವಜಾ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾ ಜನತಾ ದಳದಿಂದ ಜಿಲ್ಲಾಧಿಕಾರಿಗಳ ಕಚೇರಿ ಅಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ದೇವಪ್ಪ ಮಲ್ಲಸಮುದ್ರ ಮಾತನಾಡಿ, ಚನ್ನಪಟ್ಟಣ ಉಪ ಚುನಾವಣೆಯ ಪ್ರಚಾರದ ವೇಳೆ ಜಮೀರಅಹ್ಮದ ಖಾನ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕಾಲಿಯಾ (ಕರಿಯಾ) ಎಂದು ಸಂಬೋಧನೆ ಮಾಡಿದ್ದಾರೆ. ವಕ್ಫ್ ಸಚಿವರ ಈ ಮಾತು ಕರ್ನಾಟಕದ ಸಮಸ್ತ ಕುಮಾರಣ್ಣ ಅಭಿಮಾನಿಗಳಿಗೆ ಮತ್ತು ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಮನಸ್ಸಿಗೆ ನೋವು ತಂದಿದೆ. ಆದ್ದರಿಂದ ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರ ಪದ ಬಳಕೆ ಜಾತ್ಯಾತೀತ ಜನತಾ ದಳ ತೀವ್ರ ಖಂಡಿಸುತ್ತದೆ. ಅವರನ್ನು ಈ ಕೂಡಲೇ ಮುಖ್ಯಮಂತ್ರಿಗಳು ಸಚಿವ ಸಂಪುಟದಿಂದ ವಜಾ ಮಾಡಬೇಕು. ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ಪಕ್ಷದ ವತಿಯಿಂದ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಗಿರೀಶ ಸಂಶಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎಫ್. ದೊಡ್ಡಮನಿ, ಜಿ.ಕೆ. ಕೊಳ್ಳಿಮಠ, ಆನಂದ ಹಂಡಿ, ಬಸವರಾಜ ಅಪ್ಪಣ್ಣವರ, ಎಂ.ಎಸ್. ಪರ್ವತಗೌಡ್ರ, ರಮೇಶ ಅರಹುಣಸಿ, ತಿಪ್ಪಣ್ಣ ಹುಡೇದ, ಜೋಸೆಫ್ ಉದೋಜಿ, ಪಿ.ಬಿ.ಗಾಳಿ, ಡಾ. ಶರಣಪ್ಪ ಹೂಗಾರ, ಪ್ರಫುಲ್ ಪುಣೇಕರ, ಸಂತೋಷ ಪಾಟೀಲ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತರ್ಜಾತಿ ವಿವಾಹಿತರಿಗೆ ಪೊಲೀಸರ ರಕ್ಷಣೆ : ಗೃಹ ಮಂತ್ರಿ
ಮುಂಬೈ ಮೇಯರ್‌ ಹುದ್ದೆಗೆ ಶಿಂಧೆ ಲಡಾಯಿ?