25 ವರ್ಷಗಳಿಂದಲೂ ಅಸ್ತಮಾ ರೋಗಿಗಳಿಗೆ ಔಷಧಿ ವಿತರಣೆ

KannadaprabhaNewsNetwork |  
Published : Jun 09, 2024, 01:31 AM IST
8ಕೆಎನ್ಕೆ-2ಕನಕಗಿರಿಯ ಸುವರ್ಣಗಿರಿ ವಿರಕ್ತ ಮಠದಲ್ಲಿ ಅಸ್ತಮಾ ರೋಗಿಗಳಿಗೆ ಮೃಗಶಿರ ಮಳೆ ಕೂಡುವ ಸಮಯದಲ್ಲಿ ಔಷಧಿ ವಿತರಿಸಲಾಯಿತು.   | Kannada Prabha

ಸಾರಾಂಶ

ಕನಕಗಿರಿ ಪಟ್ಟಣದ ಸುವರ್ಣಗಿರಿ ಸಂಸ್ಥಾನ ವಿರಕ್ತ ಮಠದಲ್ಲಿ ಅಸ್ತಮಾ ರೋಗಿಗಳಿಗೆ ಮೃಗಶಿರ ಮಳೆ ಕೂಡುವ ವೇಳೆಯಲ್ಲಿ ಶನಿವಾರ ಉಚಿತ ಔಷಧಿ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಕನಕಗಿರಿ

ಪಟ್ಟಣದ ಸುವರ್ಣಗಿರಿ ಸಂಸ್ಥಾನ ವಿರಕ್ತ ಮಠದಲ್ಲಿ ಅಸ್ತಮಾ ರೋಗಿಗಳಿಗೆ ಮೃಗಶಿರ ಮಳೆ ಕೂಡುವ ವೇಳೆಯಲ್ಲಿ ಶನಿವಾರ ಉಚಿತ ಔಷಧಿ ವಿತರಿಸಲಾಯಿತು.

ವೈದ್ಯ ಬಸವರಾಜ ಹಿರೇಮಠ ಮಾತನಾಡಿ, ಸತತ 25 ವರ್ಷಗಳಿಂದಲೂ ಶ್ರೀಮಠ ಅಸ್ತಮಾ ರೋಗಿಗಳಿಗೆ ಮೃಗಶಿರ ಮಳೆ ಕೂಡುವ ವೇಳೆಯಲ್ಲಿ ಉಚಿತವಾಗಿ ಔಷಧಿ ವಿತರಿಸುತ್ತ ಬಂದಿದೆ. ಅದರಂತೆ ಈ ವರ್ಷವೂ ಔಷಧಿ ವಿತರಿಸಿದ್ದು, ರೋಗಿಗಳು ರೋಗದಿಂದ ಮುಕ್ತರಾಗಿದ್ದಾರೆ. ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಸೇವೆಯಲ್ಲಿ ಶ್ರೀಮಠ ನಿರಂತರವಾಗಿ ತೊಡಗಿಸಿಕೊಂಡಿದೆ ಎಂದು ಶ್ಲಾಘಿಸಿದರು.

ಪ್ರಮುಖರಾದ ಡಿ.ಎಂ ಅರವಟಗಿಮಠ, ಸಿದ್ಧರಾಮೇಶ, ಶರಣಯ್ಯಸ್ವಾಮಿ, ಬಸವರಾಜ ಗುಗ್ಗಳಶೆಟ್ರ, ವಾಗೀಶ ಹಿರೇಮಠ, ಮೃತ್ಯುಂಜಯಸ್ವಾಮಿ ಭೂಸನೂರಮಠ, ಎಸ್.ಐ. ಪಾಟೀಲ್, ಮಹಾಬಳೇಶ್ವರ ಸಜ್ಜನ, ಬಸವರಾಜ ಸಜ್ಜನ, ಸಂಗಯ್ಯಸ್ವಾಮಿ ಬಸರಿಹಾಳಮಠ ಸೇರಿದಂತೆ ಶ್ರೀಮಠದ ಭಕ್ತರು ಇದ್ದರು.

ಸಮಾಜಸೇವೆ

1997ರಲ್ಲಿ ಲಿಂ. ರುದ್ರಮುನಿ ಮಹಾಸ್ವಾಮಿಗಳು ಅಸ್ತಮಾ ರೋಗಿಗಳಿಗೆ ಔಷಧಿ ವಿತರಿಸುವ ಸತ್ಕಾರ್ಯಕ್ಕೆ ಚಾಲನೆ ನೀಡಿದ್ದರು. ಅಂದಿನಿಂದ ಇಂದಿನ ವರೆಗೂ ಈ ಕಾರ್ಯ ಮುಂದುವರಿಯುತ್ತಿದೆ. ಸುವರ್ಣಗಿರಿ ವಿರಕ್ತ ಮಠ ಕೇವಲ ಶೈಕ್ಷಣಿಕ, ಧಾರ್ಮಿಕ ಕ್ಷೇತ್ರವಲ್ಲದೇ ಸಮಾಜ ಸೇವೆಯೂ ಮಾಡುತ್ತಿದೆ.

ಡಾ. ಚನ್ನಮಲ್ಲಶ್ರೀ ಕನಕಗಿರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!