- ಹೊನ್ನಾಳಿ ಪಟ್ಟಣ ತಗ್ಗು ಪ್ರದೇಶ ಬಾಲರಾಜ್ ಘಾಟ್ ಬಳಿ ಎಸಿ ನೇತೃತ್ವದಲ್ಲಿ ತಾಲೂಕು ಆಡಳಿತ ಪರಿಶೀಲನೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಈ ಹಿನ್ನಲೆಯಲ್ಲಿ ಉಪವಿಭಾಗಾಧಿಕಾರಿ ಅಭಿಷೇಕ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಯಾವುದೇ ಸಂದರ್ಭದಲ್ಲಿ ನದಿ ನೀರಿನಮಟ್ಟ ಇನ್ನೂ ಹೆಚ್ಚಿಯಾಗಬಹುದು. ಈ ಕಾರಣಕ್ಕೆ ತೀರಾ ತಗ್ಗು ದೇಶದಲ್ಲಿರುವ 13 ಮನೆಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.
ಉಪವಿಭಾಗಾಧಿಕಾರಿ ಅಭಿಷೇಕ್ ಈ ಸಂದರ್ಭ ಮಾತನಾಡಿ, ಚಿಕ್ಕಮಗಳೂರು ಶೃಂಗೇರಿ, ಕೊಪ್ಪ, ಮತ್ತಿತರ ಕಡೆಗಳಲ್ಲಿ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ಭದ್ರಾ ಜಲಾಶಯಕ್ಕೂ ಹೆಚ್ಚಿನ ಒಳಹರಿವು ಉಂಟಾಗಿದೆ. ಒಂದೇ ದಿನದಲ್ಲಿ ಸುಮಾರು 3.50 ಅಡಿಯಷ್ಟು ಹೆಚ್ಚು ನೀರು ಜಲಾಶಯಕ್ಕೆ ಬಂದಿದೆ. ಶಿವಮೊಗ್ಗ ಮುಂತಾದ ಕಡೆಗಳಲ್ಲಿ ಕೂಡ ಉತ್ತಮ ಮಳೆ ಆಗುತ್ತಿರುವ ಕಾರಣ ತುಂಗಾನದಿಗೆ ಸುಮಾರು 61.70 ಕ್ಯುಸೆಕ್ ನೀರಿನ ಒಳಹರಿವು ಹೆಚ್ಚಾಗಿದೆ. ಈ ಕಾರಣಗಳಿಂದ ನದಿ ಪಾತ್ರದ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮತ್ತು ಜನ-ಜಾನುವಾರುಗಳು ನದಿ ಸಮೀಪ ಹೋಗದಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.ಸತತ ಮಳೆಯಿಂದಾಗಿ ಚನ್ನಗಿರಿ ತಾಲೂಕಿನಲ್ಲಿ 6 ಮನೆಗಳ ಹಾನಿ ಹಾಗೂ ಹೊನ್ನಾಳಿಯಲ್ಲಿ 1 ಮನೆಯ ಮಹಡಿ ಗೋಡಿ ಬಿದ್ದು ಹಾನಿಯಾಗಿದೆ ಎಂದೂ ತಿಳಿಸಿದರು.
- - -
- - - -17ಎಚ್.ಎಲ್.ಐ1: ಹೊನ್ನಾಳಿ ಪಟ್ಟಣದ ಬಾಲರಾಜ್ ಘಾಟ್ ಸಮೀಪ ಮಂಗಳವಾರ ಮನೆಗಳ ಸಮೀಪಕ್ಕೆ ನದಿ ನೀರು ಬಂದಿರುವುದು.