ಶರನ್ನವರಾತ್ರಿಯಂದು ದಸರಾ ಗೊಂಬೆಗಳ ಪ್ರದರ್ಶನ

KannadaprabhaNewsNetwork |  
Published : Oct 17, 2026, 01:45 AM IST
14ಕೆಎಂಎನ್ ಡಿ15 | Kannada Prabha

ಸಾರಾಂಶ

ಶ್ರೀನಿವಾಸ ಕಲ್ಯಾಣ, ಪೂರಿ ಜಗನ್ನಾಥ, ಲವ ಕುಶರು ಕಾಡಿನಲ್ಲಿ ಸಂಚರಿಸುತ್ತಿರುವುದು, ನವ ದುರ್ಗೆಯರ ಗೊಂಬೆಗಳು ಸೇರಿ ಕ್ಕಳಿಗೆ ನೀತಿ ಕಥೆ ತಿಳಿಸುವ ವಿವಿಧ ಗೊಂಬೆಗಳು ಮಕ್ಕಳು, ಪೋಷಕರು ಹಾಗೂ ಮಹಿಳೆಯರನ್ನು ಆಕರ್ಷಿಸುತ್ತಿವೆ. ಅಕ್ಟೋಬರ್ 12 ರಿಂದ 26ರವರೆಗೂ ದಸರಾ ಬೊಂಬೆಗಳ ಉಚಿತ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ವಸುಧಾ ಮತ್ತು ಶ್ರೀನಿಧಿ ಅಯ್ಯಂಗಾರ್ ದಂಪತಿ ತಿಳಿಸಿದ್ದಾರೆ.

ಕೆ.ಆರ್.ಪೇಟೆ: ತಾಲೂಕಿನ ಮೊದೂರು ಗ್ರಾಮದ ವಸುಧಾ- ಶ್ರೀನಿಧಿ ದಂಪತಿ ಮನೆಯಲ್ಲಿ ಶರನ್ನವರಾತ್ರಿ ಅಂಗವಾಗಿ ದಸರಾ ಗೊಂಬೆಗಳ ಪ್ರದರ್ಶನವು ಆರಂಭವಾಗಿದೆ. ಒಂದು ಸಾವಿರಕ್ಕೂ ಹೆಚ್ಚಿನ ಗೊಂಬೆಗಳನ್ನು ಕೂರಿಸಿ ದಸರಾ ಗೊಂಬೆಗಳ ದರ್ಬಾರ್ ಆಯೋಜಿಸಿ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಕಳೆದ 20 ವರ್ಷಗಳಿಂದ ನಿರಂತರವಾಗಿ ಮಾಡಿಕೊಂಡು ಬರುತ್ತಿರುವ ವಸುಧ ಶ್ರೀನಿಧಿ ಅಯ್ಯಂಗಾರ್ ಅವರ ಕಾರ್ಯವು ತಾಲೂಕಿನ ಜನತೆ ಮೆಚ್ಚುಗೆಗೆ ಪಾತ್ರವಾಗಿದೆ. ಶ್ರೀರಾಮಾಯಣ, ಮಹಾಭಾರತದ ಕಥಾ ಸಾರವನ್ನು ತಿಳಿಸುವ ಗೊಂಬೆಗಳು, ದಸರಾ ಜಂಬೂಸವಾರಿ, ಮಹಿಷಾಸುರ, ಶ್ರೀ ಚಾಮುಂಡೇಶ್ವರಿ, ದ್ರೌಪದಿ ವಸ್ತ್ರಾಪಹರಣದ ಸಂದರ್ಭದಲ್ಲಿ ಶ್ರೀಕೃಷ್ಣನು ಬಂದು ಕಾಪಾಡುವ ಗೊಂಬೆಗಳು, ಭೂದೇವಿ ಸಮೇತ ಶ್ರೀಲಕ್ಷ್ಮೀ- ಭೂವರಾಹನಾಥಸ್ವಾಮಿ ಗೊಂಬೆ, ಸಪ್ತ ಋಷಿಗಳು, ಶ್ರೀನಿವಾಸ ಕಲ್ಯಾಣ, ಪೂರಿ ಜಗನ್ನಾಥ, ಲವ ಕುಶರು ಕಾಡಿನಲ್ಲಿ ಸಂಚರಿಸುತ್ತಿರುವುದು, ನವ ದುರ್ಗೆಯರ ಗೊಂಬೆಗಳು ಸೇರಿ ಕ್ಕಳಿಗೆ ನೀತಿ ಕಥೆ ತಿಳಿಸುವ ವಿವಿಧ ಗೊಂಬೆಗಳು ಮಕ್ಕಳು, ಪೋಷಕರು ಹಾಗೂ ಮಹಿಳೆಯರನ್ನು ಆಕರ್ಷಿಸುತ್ತಿವೆ. ಅಕ್ಟೋಬರ್ 12 ರಿಂದ 26ರವರೆಗೂ ದಸರಾ ಬೊಂಬೆಗಳ ಉಚಿತ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ವಸುಧಾ ಮತ್ತು ಶ್ರೀನಿಧಿ ಅಯ್ಯಂಗಾರ್ ದಂಪತಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಬದ್ಧತೆ ಮುಖ್ಯ: ಬಿ.ಕೆ. ಶಿವಕುಮಾರ್
ಧಾರವಾಡದಲ್ಲೂ ದಸರಾ ಗೊಂಬೆ ಸಂಪ್ರದಾಯ ಶುರು