ತರೀಕೆರೆ-ಅಜ್ಜಂಪುರ ತಾಲೂಕುಗಳ ಕೃಷಿ ಪರಿಕರ ಮಾರಾಟಗಾರರ ಕಾರ್ಯಾಗಾರ
ಕನ್ನಡಪ್ರಭ ವಾರ್ತೆ, ತರೀಕೆರೆತರೀಕೆರೆ ಮತ್ತು ಅಜ್ಜಂಪುರ ತಾಲೂಕುಗಳಲ್ಲಿ ಬೆಳೆಯುವ ಬೆಳೆಗಳಿಗೆ ಶಿಫಾರಸ್ಸಿಗೆ ಅನುಗುಣವಾಗಿ ರಸಗೊಬ್ಬರವನ್ನು ಮತ್ತು ಕೀಟನಾಶಕಗಳನ್ನು ರೈತರಿಗೆ ವಿತರಣೆ ಮಾಡಬೇಕೆಂದು ತರೀಕೆರೆ ತಾಲೂಕು ಸಹಾಯಕ ಕೃಷಿನಿರ್ದೇಶಕ ಬಿ.ಎಲ್. ಲೋಕೇಶಪ್ಪ ಹೇಳಿದ್ದಾರೆ.
ಲಿಂಗದಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನ ಕೃಷಿ ಪರಿಕರ ಮಾರಾಟ ಗಾರರಿಗೆ, ರಸಗೊಬ್ಬರ ನಿಯಂತ್ರಣ ಆದೇಶ, ಬಿತ್ತನೆ ಬೀಜ ಮತ್ತು ಕೀಟನಾಶಕ ಅಧಿನಿಯಮಗಳು ಹಾಗೂ ಕೃಷಿ ಪರಿಕರಗಳ ಕಾಯ್ದೆಗಳ ಬಗ್ಗೆ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು. ಕೃಷಿ ಪರಿಕರಗಳ ಮಾರಾಟಗಾರರು ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ಸಂಬಂಧಿಸಿದಂತೆ ಎಲ್ಲರೂ ಅಂಗಡಿಯ ಮುಂಭಾಗ ದಾಸ್ತಾನು ಮಾರಾಟ ದರಗಳನ್ನು ಖಡ್ಡಾಯವಾಗಿ ಪ್ರದರ್ಶಿಸಬೇಕು. ಯಾವುದೇ ಕಾರಣಕ್ಕೂ ಗರಿಷ್ಠ ಮಾರಾಟ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಬಾರದು. ಬಿತ್ತನೆ ಬೀಜಗಳು ಮತ್ತು ರಸಗೊಬ್ಬರ ಅಗತ್ಯ ವಸ್ತುಗಳ ಕಾಯ್ದೆಯಲ್ಲಿ ಬರುವುದ ರಿಂದ ರೈತರಿಗೆ ಕೃತಕ ಅಭಾವ ಸೃಷ್ಠಿಸಿದಲ್ಲಿ ಕೃಷಿ ಪರಿಕರಗಳ ಮತ್ತು ಅಗತ್ಯ ವಸ್ತುಗಳ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಿ ಶಿಸ್ತು ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುತ್ತದೆ. ಪರವಾನಿಗೆಯನ್ನು ಅಮಾನತ್ತು ಮಾಡಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುಮೋದಿಸಿರುವ ರಸಗೊಬ್ಬರಗಳನ್ನು ಮಾತ್ರ ಮಾರಾಟ ಮಾಡಬೇಕೆಂದು ತಿಳಿಸಿದರು.ಜಿಲ್ಲಾ ಕಚೇರಿಗಳಿಂದ ಉಪ ವಿಭಾಗ ಮತ್ತು ಕೇಂದ್ರ ಕಚೇರಿಗಳಿಂದ ಕೃಷಿ ಪರಿಕರಗಳಿಗೆ ಸಂಬಂಧಿಸಿದಂತೆ ಪರಿವೀಕ್ಷಕರು ಮತ್ತು ಜಾಗೃತದಳ ಪರಿವೀಕ್ಷಕರು ಅಂಗಡಿಗಳಿಗೆ ಪರಿಶೀಲನೆಗೆ ಬಂದರೆ ಸಂಬಂದಪಟ್ಟ ಎಲ್ಲ ದಾಖಲಾತಿಗಳನ್ನು ಒದಗಿ ಸಲು ಸಹಕಸುವಂತೆ ಮನವಿ ಮಾಡಿದರು. ಎಲ್ಲಾ ಪರಿಕರ ಮಾರಾಟಗಾರರು ಕಡ್ಡಾಯವಾಗಿ ಜೈವಿಕ ರಸಗೊಬ್ಬರ ಸಾವಯವ ಗೊಬ್ಬರ, ಸಿಟಿ ಕಾಂಪೋಸ್ಟ್ ಬೇವಿನ ಪೌಡರ್, ಎಣ್ಣೆ ರಹಿತ ಹಿಂಡಿಗಳನ್ನು ಕಡ್ಡಾಯವಾಗಿ ಮಾರಾಟ ಮಾಡಬೇಕು. ಅಂಗಡಿಗಳಲ್ಲಿರುವ ಭೌತಿಕ ರಸಗೊಬ್ಬರ ಪ್ರಮಾಣಕ್ಕೆ ಪಿ.ಒ.ಎಸ್.ಮಿಷನ್.ನಲ್ಲಿರುವ ಪ್ರಮಾಣಕ್ಕೆ ಹೋಲಿಕೆಯಾಗಬೇಕು ಮತ್ತು ಕಡ್ಡಾಯವಾಗಿ ಬಿಲ್ ನೀಡಬೇಕು ಎಂದು ವಿವರಿಸಿದರು.ಕಡ್ಡಾಯವಾಗಿ ಎಲ್ಲ ಕೃಷಿ ಪರಿಕರ ಮಾರಾಟಗಾರರು ಹಸಿ ಎಲೆ ಗೊಬ್ಬರಗಳ ಬೀಜಗಳಾದ ಡಯಾಂಚ್, ಸೆಣಬಿನ ಬೀಜ, ವೆಲ್ವೆಟ್ ಬೀನ್ಸ್ ದ್ವಿದಳ ದಾನ್ಯಗಳು ಮತ್ತು ಎಣ್ಣೆಕಾಳು ಬೆಳೆಗಳ ದೃಢೀಕೃತ ಬಿತ್ತನೆ ಬೀಜಗಳನ್ನು ಮಾರಾಟ ಮಾಡುವಂತೆ ಮನವಿ ಮಾಡಿದರು.ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಉಲ್ಲಾಸ್ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಬಗ್ಗೆ ತಾಂತ್ರಿಕ ಬೋಧನೆ ಮತ್ತು ರೋಗ - ಕೀಟಗಳ ಬಗ್ಗೆ ಸಂಕ್ಷಿಪ್ತವಾಗಿ ಛಾಯಾಚಿತ್ರಗಳೊಂದಿಗೆ ರೋಗ ನಿರೋಧಕ ತಳಿಗಳ ಬಗ್ಗೆ ಮಾಹಿತಿ ನೀಡಿದರು.ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಕೃಷಿ ಅಧಿಕಾರಿ ಟಿ.ಎಸ್.ವಿನುತ, ಲಕ್ಕವಳ್ಳಿ ಅಜ್ಜಂಪುರ ಹುಣಸಘಟ್ಟ ಶಿವನಿ, ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳಾದ ರಘುಕುಮಾರ್, ರೇಖಾ, ಕರಿಯಪ್ಪ, ಶಿವಪ್ರಸಾದ್ ಕಾರ್ಯಕ್ರಮದಲ್ಲಿ ದಾಖಲೆಗಳ ನಿರ್ವಹಣೆ ಬಗ್ಗೆ ತಿಳಿಸಿದರು. 22ಕೆಟಿಆರ್.ಕೆ.6ಃತರೀಕೆರೆ ಸಮೀಪದ ಲಿಂಗದಹಳ್ಳಿಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ತರೀಕೆರೆ ಮತ್ತು ಅಜ್ಜಂಪುರ ತಾಲೂಕುಗಳ ಕೃಷಿ ಪರಿಕರ ಮಾರಾಟಗಾರರಿಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ತರೀಕೆರೆ ತಾಲೂಕು ಸಹಾಯಕ ಕೃಷಿ ಅಧಿಕಾರಿ ಲೋಕೇಶಪ್ಪ ಬಿ.ಎಲ್. ಮಾತನಾಡಿದರು.