ಮುಳುಗಡೆ ಸಂತ್ರಸ್ತರಿಗೆ 151 ಇ-ಖಾತಾ, ಹಕ್ಕುಪತ್ರ ವಿತರಣೆ

KannadaprabhaNewsNetwork |  
Published : Nov 08, 2026, 03:00 AM IST
ಮುಳುಗಡೆ ಸಂತ್ರಸ್ತರಿಗೆ 151 ಇ-ಖಾತಾ, ಹಕ್ಕುಪತ್ರ ವಿತರಣೆ | Kannada Prabha

ಸಾರಾಂಶ

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ (ಬಾಪಅಪ್ರಾ) ವತಿಯಿಂದ ಮುಳುಗಡೆ ಸಂತ್ರಸ್ತರಿಗೆ ಯುನಿಟ್-1 ಮತ್ತು 2ರಲ್ಲಿ ಇ-ಖಾತಾ ಉತಾರೆ ಹಾಗೂ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಮುಳುಗಡೆ ಸಂತ್ರಸ್ತರಿಗೆ ಯುನಿಟ್-1 ಮತ್ತು 2ರಲ್ಲಿ ಇ-ಖಾತಾ ಉತಾರೆ ಹಾಗೂ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮ ನಡೆಯಿತು.

ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂತ್ರಸ್ತರಿಗೆ ಒಟ್ಟು 151 ಪಿಯುಐಡಿ, ಇ-ಖಾತಾ ಉತಾರೆ ಹಾಗೂ ಹಕ್ಕುಪತ್ರ ವಿತರಿಸಲಾಯಿತು. ಈ ವೇಳೆ ಮಾತನಾಡಿದ ಪ್ರಾಧಿಕಾರ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಸಂತ್ರಸ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಇ-ಖಾತಾ ಉತಾರೆ ಹಾಗೂ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಂತ್ರಸ್ತರಿಗೆ ದಾಖಲೆಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.

ದಾಖಲೆಗಳನ್ನು ಪಡೆದ ಸಂತ್ರಸ್ತರು ಸಂತಸ ವ್ಯಕ್ತಪಡಿಸಿ, ಪ್ರಾಧಿಕಾರದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಅಧೀಕ್ಷಕ ಅಭಿಯಂತರ ಎಸ್.ಎಸ್. ಕರಗಾರ, ಮುಖ್ಯ ಲೆಕ್ಕಾಧಿಕಾರಿ ಪ್ರಕಾಶ ಪಾತ್ರದ, ಆಪ್ತಸಹಾಯಕ ಎನ್.ಬಿ. ಅಂಕದ, ಪುಟ್ಟು ಕುಲಕರ್ಣಿ, ಶಂಕರ ಮೇಟಿ, ಶಂಕರ ತಪಶೆಟ್ಟಿ ಸೇರಿದಂತೆ ಪ್ರಾಧಿಕಾರ ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿ ಹೃದಯದ ಡಾ.ಚೆನ್ನಬಸವ ಶ್ರೀಗಳು: ತೋಂಟದಾರ್ಯ ಶ್ರೀ
ಶಿರಗುಪ್ಪಿ ಕಾರ್ಖಾನೆಯಿಂದ ₹4,000 ದರ ಘೋಷಣೆ