ರಾಮನಗರ: ವಿಶೇಷಚೇತನರಿಗೆ ನಮ್ಮ ಕಂಪನಿಯಿಂದ ನೀಡಿದ ಸಣ್ಣ ನೆರವಿನಿಂದ ಅವರ ಮುಖದಲ್ಲಿ ಮಂದಹಾಸ ಮೂಡಿರುವುದು ನನಗೆ ಸಂತಸ ತಂದಿದೆ ಎಂದು ಟೂಯೊಟಾ ಗೋಸೈ ವ್ಯವಸ್ಥಾಪಕ ನಿರ್ದೇಶಕ ಬಿಜಯ್ ಕೃಷ್ಣ ಶ್ರೇಷ್ಠ ಹೇಳಿದರು.
ನಗರದಲ್ಲಿ ನವಚೇತನ ಚಾರಿಟಬಲ್ ಟ್ರಸ್ಟ್ ಫಾರ್ ಡಿಸೆಬಲ್ಸ್ ಮತ್ತು ಟೊಯೊಡ ಗೋಸೈ ಸೌತ್ ಇಂಡಿಯಾ ಪ್ರೈ.ಲಿ. ಸಹಯೋಗದಲ್ಲಿ 32ನೇ ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ವಿಶೇಷಚೇತನರಿಗೆ 50 ಗಾಲಿ ಕುರ್ಚಿ ವಿತರಿಸಿ ಮಾತನಾಡಿ, ಇಂತಹ ಉತ್ತಮ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನ್ನ ಪುಣ್ಯದ ಕೆಲಸ ಎಂದರು.ಕಂಪನಿಯ ಸಾಮಾಜಿಕ ಹೊಣೆಗಾರಿಕೆಯಡಿ ವಿಶೇಷಚೇತನರಿಗೆ ನೀಡಿರುವ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ಸಮಾಜದಲ್ಲಿ ಕಷ್ಟಸುಖ ಹಂಚಿಕೊಂಡು ಬದುಕು ಕಟ್ಟಿಕೊಳ್ಳುವ ಮೂಲಕ ತಾರತಮ್ಯ ರಹಿತ ಸಮಾಜ ನಿರ್ಮಾಣ ಮಾಡುವಂತೆ ಕರೆ ನೀಡಿದರು.
ಟ್ರಸ್ಟ್ ಅಧ್ಯಕ್ಷ ಕೆ.ಎಸ್.ಮಂಜುನಾಥ್ ಮಾತನಾಡಿ, ಪ್ರತಿ ವರ್ಷ ಗೋಸೈ ಸಹಕಾರದಲ್ಲಿ ವಿಕಲಚೇತನರಿಗೆ ನೆರವು, ಸಾಧನ ಸಲಕರಣೆ ಪೂರೈಸುತ್ತಿದ್ದೇವೆ. 2012ರಲ್ಲಿ 100 ಗಾಲಿ ಕುರ್ಚಿ ವಿತರಿಸಿದ್ದೆವು. ಕಳೆದ ವರ್ಷ 33 ಗಾಲಿ ಕುರ್ಚಿ, ಈ ವರ್ಷ 50 ವಿನೂತನ ಗಾಲಿಕುರ್ಚಿ ವಿತರಿಸಿರುವ ಗೋಸೈ ಕಾರ್ಯಕ್ಕೆ ಅಭಿನಂದಿಸುತ್ತೇನೆ ಎಂದರು.ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿ.ನ ಸಿಇಒ ಮೋಹನ್ ಭಾಸ್ಕರ್ ಹೆಗಡೆ ಮಾತನಾಡಿ, ವಿಕಲಚೇತನರು ಸ್ವಾವಲಂಬಿಯಾಗಿ ಬದುಕುಬಹುದು ಎಂಬುದನ್ನು ತೋರಿಸಿ ಕೊಟ್ಟಿರುವ ಹಲವು ಉದಾಹರಣೆಗಳಿವೆ. ನಾವು ನಿಮ್ಮ ಸಹಕಾರಕ್ಕೆ ಇರುತ್ತೇವೆ ಎಂದು ಆತ್ಮಸ್ಥೈರ್ಯದ ಮಾತುಗಳನ್ನಾಡಿದರು.
ಗೋಸೈನ ಉಪ ವ್ಯವಸ್ಥಾಪಕ ಮಂಜುನಾಥ್ ಮಾತನಾಡಿ, ಕಂಪನಿ ಎಂದರೆ ವ್ಯವಹಾರ ನಡೆಸುವುದು ಮಾತ್ರವಲ್ಲ. ಸಮಾಜಮುಖಿ ಕಾರ್ಯ, ಸುಧಾರಣೆ ಮಾಡುವುದು ನಮ್ಮ ಕಂಪನಿಯ ಪ್ರಮುಖ ಉದ್ದೇಶ ಎಂದರು.ಕಾರ್ಯಕ್ರಮದಲ್ಲಿ ಸಮಾಜ ಸೇವಕ ಜನತಾ ನಾಗೇಶ್, ರೋಟರಿ ಅಧ್ಯಕ್ಷ ಶಿವಣ್ಣ, ಜನತಾ ಸೇವಾ ಟ್ರಸ್ಟ್ ಅಧ್ಯಕ್ಷ ಜನತಾ ನಾಗೇಶ್, ಗೋಸೈನ ನಿರ್ವಾಹಕ ದಯಾನಂದ ಪಿ.ಕೆ., ವೈಷ್ಣವಿ ಇಂಟೀರಿಯರ್ಸ್‌ನ ಯೇಸುದಾಸ್, ಜೆಡಿಎಸ್ ಮುಖಂಡ ಉಮೇಶ್, ರೈತ ಮುಖಂಡರಾದ ರಂಗಸ್ವಾಮಿ, ತಿಮ್ಮಯ್ಯ ಭಾಗವಹಿಸಿದ್ದರು.
ಪೊಟೋ೨೧ಸಿಪಿಟಿ೩: ನಗರದ ಗುರುಭವನದಲ್ಲಿ ನವಚೇತನ ಚಾರಿಟಬಲ್ ಟ್ರಸ್ಟ್ ಪಾರ್ ಡಿಸೆಬಲ್ಸ್ ಮತ್ತು ಟೊಯೊಡ ಗೋಸೈ ಸೌತ್ ಇಂಡಿಯಾ ಪ್ರೈ.ಲಿ. ಬಿಡದಿ ಪ್ರಯೋಜಕತ್ವದಲ್ಲಿ ವಿಶೇಷಚೇತನರಿಗೆ 50 ಗಾಲಿ ಕುರ್ಚಿಗಳನ್ನು ವಿತರಿಸಲಾಯಿತು.